ADVERTISEMENT

ಬೆಟಗೇರಿ: ಸಂಭ್ರಮದ ಸಹಸ್ರಾರ್ಜುನ ಜಯಂತಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 7:09 IST
Last Updated 31 ಅಕ್ಟೋಬರ್ 2014, 7:09 IST

ಗದಗ:  ಎಸ್.ಎಸ್.ಕೆ. ಸಮಾಜದ ಮೂಲ ಪುರುಷ ಸಹ­ಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ಅಂಗವಾಗಿ ಗುರುವಾರ ಬೆಟಗೇರಿಯ ಎಸ್.ಎಸ್.ಕೆ. ಸಮಾಜದ ತರುಣ ಸಂಘದ ವತಿಯಿಂದ ಬೈಕ್ ರ್‍್ಯಾಲಿ ನಡೆಯಿತು.

ಜಗದಂಬಾ ದೇವಸ್ಥಾನದ ಎದುರಿನಿಂದ ಪ್ರಾರಂಭ­ವಾದ ಬೃಹತ್ ಬೈಕ್ ರ್‍್ಯಾಲಿ ಹಾಗೂ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರದ ಮೆರವಣಿಗೆಗೆ ಬೆಟಗೇರಿ ಸಮಾಜದ ಪಂಚ ಟ್ರಸ್‌್ಟ ಸಮಿತಿ ಅಧ್ಯಕ್ಷ ಅಂಬಾಸಾ ಕಬಾಡಿ ಚಾಲನೆ ನೀಡಿದರು. ಮೆರವಣಿಗೆ ಹೆಲ್ತ್‌ಕ್ಯಾಂಪ್, ಪೊಲೀಸ್ ಲೈನ್‌, ಕುರಟ್ಟಿಪೇಟೆ, ಮೈಲಾರ ದೇವಸ್ಥಾನ ಟೆಂಗಿನಕಾಯಿ ಬಜಾರ, ಟರ್ನಲ್‌ಪೇಟೆ, ಹುಯಿಲಗೋಳ ರಸ್ತೆ, ಪಾಲಾ ಬದಾಮಿ ರಸ್ತೆ, ಹೊಸಪೇಟೆ ಚೆಕ್‌, ವಿದ್ಯಾರಣ್ಯ ರಸ್ತೆ, ಕಬಾಡಿ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಗದಂಬಾ ದೇವಸ್ಥಾನದ ಬಳಿ ಸಮಾಪ್ತಿ­ಗೊಂಡಿತು.

ಬೆಳಿಗ್ಗೆ ಜಗದಂಬಾ ಭಜನಾ ಮಂಡಳಿ ಹಾಗೂ ಸಂತ ಮಂಡಳಿ ನೇತೃತ್ವದಲ್ಲಿ ಜಗದಂಬಾ ದೇವಸ್ಥಾನದಿಂದ ಸಹಸ್ರಾರ್ಜುನ ಮಹಾರಾಜರ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಹೆಲ್ತ್‌ಕ್ಯಾಂಪ್‌ ಬಳಿಯ ಸಹಸ್ರಾರ್ಜುನ ವೃತ್ತದ ವರೆಗೂ ಜರುಗಿತು. ನಂತರ ವಿಶೇಷ ಪೂಜೆ, ಮಹಾಪ್ರಸಾದ  ನೆರವೇರಿದವು.

ಮುಖಂಡರಾದ ದೀಪಕ್‌ ಲದ್ವಾ, ಟಿ.ಎನ್. ಭಾಂಡಗೆ, ಡಿ.ಬಿ. ಮೇರವಾಡೆ, ರಾಜು ಮೇರವಾಡೆ, ಶಂಕರ ಜಿತೂರಿ, ಕಾಶೀನಾಥ ಕಬಾಡಿ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.