ADVERTISEMENT

ಮಾಹಿತಿ ನೀಡದ ಮುಖ್ಯಾಧಿಕಾರಿ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:23 IST
Last Updated 25 ಏಪ್ರಿಲ್ 2017, 5:23 IST

ರೋಣ: ಮಾಹಿತಿ ಹಕ್ಕಿನಡಿ ಸಮಗ್ರ ವಾದ ದಾಖಲೆ ಹಾಗೂ ಮಾಹಿತಿ ನೀಡು ವಲ್ಲಿ ಪುರಸಭೆ ಅಧಿಕಾರಿಗಳು ಮೀನ ಮೇಷ ಎನಿಸುತ್ತಿದ್ದಾರೆ. ಯಾವುದೇ ಮಾಹಿತಿ ನೀಡದೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿ 10ನೇ ವಾರ್ಡ್‌ ನಾಗರಿಕರು ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.

ಮುಖಂಡ ಚಂದ್ರಪ್ಪ ಹಲಗಿ ಮಾತನಾಡಿ, ‘ಮಾಹಿತಿ ಹಕ್ಕು ಅಡಿಯಲ್ಲಿ ಪಟ್ಟಣದ 10 ನೇ ವಾರ್ಡಿನ ಕ್ರಿಯಾ ಯೋಜನೆಯ ಸಮಗ್ರ ದಾಖಲೆ ಅಥವಾ ಮಾಹಿತಿ ನೀಡುವಂತೆ ಕೋರಿ ಅಧಿಕಾರಿ ಗಳಿಗೆ ಕಳೆದ ಮಾ.16ರಂದು ಅರ್ಜಿ ನೀಡಲಾಗಿತ್ತು. ಅಧಿಕಾರಿಗಳು ಮಾಹಿತಿ ಒದಗಿಸುತ್ತೇವೆ ಅದಕ್ಕೆ ಒಂದು ತಿಂಗಳು ಕಾಲಾವಕಾಶ ಬೇಕು ಎಂದು ಹೇಳಿದ್ದರು. ಒಂದು ತಿಂಗಳು ಮುಗಿದ ನಂತರ ಮತ್ತೆ ಭೇಟಿ ನೀಡಿ ಮಾಹಿತಿ ಕೇಳಿದರೆ ಇನ್ನೂ 8 ದಿನ ಕಾಲಾವಕಾಶ ನೀಡಿ’ ಎಂದು ಹೇಳಿದರು.

‘ನಂತರ 8 ದಿನ ಬಿಟ್ಟು ಪುರಸಭೆಗೆ ಹೋದರೆ ಇನ್ನೂ ಕಾಲಾವಕಾಶ ನೀಡಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಹಿತಿ ನೀಡಲು ಇನ್ನೂ ಎಷ್ಟು ದಿನ ಬೇಕಾಗುತ್ತದೆ. ಯಾವುದೇ ಮಾಹಿತಿ ನೀಡಿದೇ ಪುರಸಭೆ ಅಧಿಕಾರಿಗಳು ನಮ್ಮನ್ನು ಅಲೆದಾಡಿಸುತ್ತಿದ್ದಾರೆ. ಈ ಕುರಿತಾಗಿ ಮುಖ್ಯಾಧಿಕಾರಿಗಳನ್ನು ಕೇಳಿದರೆ ಮಾಹಿತಿ ನೀಡುತ್ತೇವೆ ಎಂದು ಸಮಜಾಯಿಸಿ ಮಾಡಿ ಕಳುಹಿಸುತ್ತಾರೆ. ಕೂಡಲೇ ಈ ಕುರಿತಾಗಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳ ಬೇಕು.

ADVERTISEMENT

ಒಂದು ಮಾಹಿತಿ ನೀಡಲು ಅಧಿ ಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ’ ಎಂದು  ಆರೋಪಿಸಿದರು.ಫಕ್ಕೀರಪ್ಪ ಹಲಗಿ, ಮುದಿಯಪ್ಪ ಜೋಗಣ್ಣವರ, ಗದಿಗೆಪ್ಪ ಜೋಗಣ್ಣವರ, ಹವಳಪ್ಪ ಹಲಗಿ, ಮಲ್ಲಪ್ಪ ಜೋಗಣ್ಣವರ, ಯಲ್ಲಪ್ಪ ಕುಂಬಾರ, ಶಿವಲಿಂಗಪ್ಪ ಜೋಗಣ್ಣವರ, ಮಹಾಂತೇಶ ಹಲಗಿ, ರೋಣಪ್ಪ ಜೋಗಣ್ಣವರ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.