ADVERTISEMENT

ಮೂಢನಂಬಿಕೆ ಕಂದಾಚಾರ ತೊಲಗಲಿ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ವಿ.ಸಂಕನೂರ ಸನ್ಮಾನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 10:43 IST
Last Updated 3 ಜನವರಿ 2017, 10:43 IST

ಗದಗ: ಹೈದರಾಬಾದ ಕರ್ನಾಟಕ ಭಾಗ ದಲ್ಲಿ ಹೆಚ್ಚು ಮೂಢನಂಬಿಕೆ, ಕಂದಾ ಚಾರಗಳಿದ್ದು, ಗ್ರಾಮೀಣ ಪರಿಸರದಲ್ಲಿ ವಿಜ್ಞಾನ ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳುವ ಮೂಲಕ ಮೂಢನಂಬಿಕೆಯನ್ನು ದೂರ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್‌ಗೆ 2ನೇ ಬಾರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಯಾದ ನಿಮಿತ್ತ ನಗರದ ವಿದ್ಯಾವರ್ಧಕ ಸಮಿತಿ ಬಾಲಕಿಯರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಮೂಢನಂಬಿಕೆ, ಕಂದಾಚಾರ ಗಳನ್ನು ಕಿತ್ತೊಗೆಯಲು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವೈಜ್ಞಾನಿಕ ಚಟು ವಟಿಕೆಗಳನ್ನು ಹಮ್ಮಿಕೊಳ್ಳಲಿದ್ದು, ಇದಕ್ಕಾಗಿ ಸರ್ಕಾರ  ನೀಡುವ ಅನುದಾನ ವನ್ನು ಹೆಚ್ಚಿಸಬೇಕು. ವಿಜ್ಞಾನ ಚಟು ವಟಿಕೆಗಳನ್ನು ಕೈಗೊಳ್ಳಲು ಸರ್ಕಾರ ಈ ಹಿಂದೆ ಪ್ರತಿವರ್ಷ ₹ 1.25 ಕೋಟಿ ನೀಡುತ್ತಿತ್ತು, ಆದರೆ, ಈ ವರ್ಷ ಇದನ್ನು ₹ 80 ಲಕ್ಷಕ್ಕೆ ಕಡಿತಗೊಳಿಸಿರುವುದು ಖಂಡನೀಯ ಎಂದರು. ಮುಂದಿನ 3 ವರ್ಷಗಳ ಅವಧಿಯಲ್ಲಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ವಿಜ್ಞಾನ ಘಟಕಗಳನ್ನು ರಚಿಸುವ ಮೂಲಕ ರಾಜ್ಯದಲ್ಲಿ 12 ಸಾವಿರ ಜನರನ್ನು ಕರಾವಿಪಗೆ ಸದಸ್ಯರನ್ನಾಗಿ ಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಸದಾನಂದ ಪಿಳ್ಳಿ, ಎಂ.ಬಿ.ಹೋಳಿ, ಎನ್.ವಿ.ಜೋಶಿ, ಕೆ.ಬಿ.ಬಜೆಂತ್ರಿ, ಎಸ್.ಎ.ಜಮಾದಾರ, ಎಸ್.ಜಿ. ಸೊಲ್ಲಾಪುರ ಗಿರೀಶಗೌಡ ಪಾಟೀಲ, ಗೀತಾ ಪಾಟೀಲ  ಇದ್ದರು.
ಕೆ.ಸಿ.ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಕೆ.ಬಿ.ಭಜಂತ್ರಿ ಸ್ವಾಗತಿಸಿದರು. ಕೆ.ಐ. ಪಾಟೀಲ ನಿರೂಪಿಸಿದರು. ಎಂ.ಬಿ. ಹೋಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.