ADVERTISEMENT

ರೈತರಿಂದ ಪ್ರತಿಭಟನೆಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 8:59 IST
Last Updated 15 ಜುಲೈ 2017, 8:59 IST

ಮುಂಡರಗಿ: ಬೆಳೆ ವಿಮೆ, ಬೆಳೆ ಪರಿಹಾರ ವಿತರಿಸುವುದು ಸೇರಿ ರೈತರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾ ಯಿಸಿ ತಾಲ್ಲೂಕಿನ ರೈತರು ಆಗಸ್ಟ್ ಮೊದಲ ವಾರದಲ್ಲಿ ಮುಂಡರಗಿ ಬಂದ್ ಮಾಡಿ ಅಹೋರಾತ್ರಿ ಧರಣಿ ನಡೆಸಲಿ ದ್ದಾರೆ ಎಂದು ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು. ಪಟ್ಟಣದ ಪುರಸಭೆ ಉದ್ಯಾನದಲ್ಲಿ ತಾಲ್ಲೂಕಿನ ಶುಕ್ರವಾರ ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು.

ನಾಲ್ಕು ವರ್ಷಗಳಿಂದ ತಾಲ್ಲೂಕಿನಾದ್ಯಂತ ಬರಗಾಲ ಪರಿಸ್ಥಿತಿ ಇದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಸಮ ರ್ಪಕವಾಗಿ ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ನೀಡದೆ ರೈತರನ್ನು ಸತಾಯಿಸುತ್ತಿದೆ ಎಂದು ಆರೋಪಿಸಿದರು.

ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಯೋಜನೆಯ ಅಡಿಯಲ್ಲಿ ಸೂಕ್ಷ್ಮ ಹನಿ ನೀರಾವರಿ ಪದ್ಧತಿಯನ್ನು ಕೈಬಿಟ್ಟು, ಕಾಲವೆಗಳ ಮೂಲಕ ಎಲ್ಲ ರೈತರ ಜಮೀನುಗಳಿಗೆ ನೀರು ಒದಗಿಸ ಬೇಕು. ಕಾಲುವೆಗಾಗಿ ಫಲವತ್ತಾದ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ನೀರಾವರಿ ಜಮೀನುಗಳಿಗೆ ಪ್ರತಿದಿನ ನಿಯಮಿತ ವಾಗಿ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಎ.ಪಿ.ಎಂ.ಸಿ ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ ಮಾತನಾಡಿ, ಸರ್ಕಾರ ವನ್ನು ಎಚ್ಚರಿಸಲು ಎಲ್ಲ ರೈತರು ಒಗ್ಗೂಡಿ ಮುಂಡರಗಿ ಬಂದ್ ನಡೆಸುವ ಅನಿವಾ ರ್ಯತೆ ನಿರ್ಮಾಣವಾಗಿದೆ ಎಂದರು.

ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ವೀರನಗೌಡ ಪಾಟೀಲ, ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಶಿವಾನಂದ ಇಟಗಿ, ಆನಂದಗೌಡ ಪಾಟೀಲ, ಮಂಜುನಾಥ ಇಟಗಿ, ಬಿ.ವಿ.ಮುದ್ದಿ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಡಾ.ಕುಮಾರಸ್ವಾಮಿ ಹಿರೇ ಮಠ, ವೆಂಕನಗೌಡ ಪಾಟೀಲ, ಚಂದ್ರ ಕಾಂತ ಉಳ್ಳಾಗಡ್ಡಿ, ಸುಭಾಷ ಗುಡಿಮನಿ, ದೇವು ಹಡಪದ, ರಮೇಶ ಹುಳಕಣ್ಣ ವರ, ಮಲ್ಲಿಕಾರ್ಜುನ ಹಣಜಿ, ಮಂಜು ನಾಥ ಮುಧೋಳ, ಎಸ್.ಎಂ.ಪಾಟೀಲ, ಸುರೇಶ ಹಲವಾಗಲಿ, ಶಿವಪ್ಪ ಚಿಕ್ಕಣ್ಣ ವರ, ಶರಣಪ್ಪ ಕರಿಗಾರ, ಮಲ್ಲಪ್ಪ ಉಪ್ಪಾರ, ಹನುಮಂತಪ್ಪ ಗಡ್ಡದ, ತಿಪ್ಪಣ್ಣ ಬಚ್ಚಮ್ಮನವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.