ADVERTISEMENT

ವೀರಶೈವ-–ಲಿಂಗಾಯತ ವಿವಾದ ಕೊನೆಗೊಳಿಸಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 5:35 IST
Last Updated 14 ಸೆಪ್ಟೆಂಬರ್ 2017, 5:35 IST
ಅನ್ನದಾನೀಶ್ವರ ಸ್ವಾಮೀಜಿ
ಅನ್ನದಾನೀಶ್ವರ ಸ್ವಾಮೀಜಿ   

ಮುಂಡರಗಿ: ಹಲವು ಶತಮಾನಗಳಿಂದ ವೀರಶೈವ ಹಾಗೂ ಲಿಂಗಾಯತಗಳು ಒಂದೇ ಆಗಿದ್ದು, ಕೆಲ ಮಠಾಧೀಶರು ಮತ್ತು ರಾಜಕಾರಣಿಗಳು ಅವುಗಳಲ್ಲಿ ಬೇಧ ಮೂಡಿಸಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅನ್ನದಾ ನೀಶ್ವರ ಶ್ರೀ ತಿಳಿಸಿದ್ದಾರೆ.

ಅನುಭಾವಿ ಡಾ.ಶಿವಕುಮಾರ ಶ್ರೀ ಅವರು ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ ಎಂದು ತಿಳಿಸಿದ್ದು, ಇನ್ನಾದರೂ ವೀರಶೈವ– ಲಿಂಗಾಯತ ವಿವಾದ ಕೊನೆಗೊಳ್ಳಲಿ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ಬುಧವಾರ ಪತ್ರಿಕಾ ಪ್ರಕಟಣೆ ನೀಡಿ ರುವ ಅವರು, ಪಟ್ಟಣ ಪ್ರದೇಶದಲ್ಲಿರುವ ವಿದ್ಯಾವಂತರು ‘ವೀರಶೈವ’ ಪದವನ್ನು ಮತ್ತು ಹಳ್ಳಿಗಳಲ್ಲಿ ವಾಸಿಸುವ ಅನಕ್ಷರ ಸ್ಥರು  ‘ಲಿಂಗಾಯತ’ ಪದವನ್ನು ಬಳಸು ತ್ತಾರೆ. ವಾಸ್ತವವಾಗಿ ಅವೆರಡೂ ಒಂದೆ ಆಗಿವೆ ಎಂದು ತಿಳಿಸಿದ್ದಾರೆ.

ADVERTISEMENT

ಈ ಕುರಿತು ತಾವು ಹಲವು ದಿನಗ ಳಿಂದ ಇದೇ ವಾದವನ್ನು ಪ್ರತಿಪಾದಿ ಸುತ್ತಾ ಬಂದಿದ್ದೇವೆ. ವೀರಶೈವವು ಶಾಸ್ತ್ರೀಯ ಪದವಾಗಿದ್ದು, ಇದು ತತ್ವ ಸಿದ್ಧಾಂತ ಆಚರಣೆಗಳನ್ನು ಪ್ರತಿಪಾದಿಸು ತ್ತದೆ. ಅದೇ ರೀತಿ  ಲಿಂಗಾಯತ ಪದವು ಜನಪದ ಬಳಕೆಯಲ್ಲಿ ಬಂದ ಕ್ರಿಯಾ ವಾಚಕವೆನಿಸಿದೆ ಎಂದು ಹೇಳಿದ್ದಾರೆ.

ವೀರಶೈವ ಧರ್ಮ ಸೈದ್ಧಾಂತಿಕವಾಗಿದ್ದು ವ್ಯಕ್ತಿ ಪ್ರತಿಪಾದಕವಾಗಿಲ್ಲ. ಅಷ್ಟಾವರ್ಣ, ಪಂಚಾಚಾರ, ಷಟಸ್ಥಲಗಳು ತತ್ವತ್ರಯ ಸಂಪುಟಕ್ಕೆ ಬದ್ಧವಾಗಿದೆ. ಈ ಧರ್ಮ ಅತ್ಯಂತ ಪ್ರಾಚೀನ, ಅಂತೆಯೇ ಪ್ರಥಮ ವೀರಶೈವ ಮಹಾ ಸಭೆಯಲ್ಲಿ ಇದನ್ನು ಅನಾದಿ ಸಂಸಿದ್ಧವೆಂದು ನಿರ್ಣಯಿಸಲಾಗಿದೆ. ಅದೇ ಕಾಲಕ್ಕೆ ವೀರಶೈವಕ್ಕೆ ಲಿಂಗಾಯತ, ಲಿಂಗವಂತ ಪದಗಳು ಸಮಾನ ಎಂಬುವದನ್ನು ಠರಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ತತ್ವತ್ರಯಗಳು ಸಾಮಾಜಿಕ, ವ್ಯವ ಹಾರಿಕ ಹಾಗೂ ತಾತ್ವಿಕವಾದ ಅರಿವನ್ನು ತಿಳಿಸಿವೆ. ಪ್ರಸ್ತುತ ಧರ್ಮ ಕೇವಲ ಅಧ್ಯಯನ ಶೀಲವಲ್ಲ, ಅನುಷ್ಟಾನ ಬದ್ಧವಾದದ್ದು. ವೀರಶೈವ–ಲಿಂಗಾಯತ ಧರ್ಮ ಲಿಂಗಧಾರಣ ಮಾಧ್ಯಮವಾಗಿ ಸಮಾ ನತೆ ಹಾಗೂ ಸ್ವಾತಂತ್ರ್ಯ, ಕಾಯಕ ತತ್ವ, ಸ್ವಾವಲಂಬನೆಯ ಜೀವನ ಕ್ರಮ ಹಾಗೂ ಮೌಢ್ಯ ನಿಷೇಧವನ್ನು ಬೋಧಿಸುತ್ತದೆ ಎಂದು ಹೇಳಿದ್ದಾರೆ.

ಕಾಯಕ ದಾಸೋಹಗಳು ಇದರ ಮುಖ್ಯ ಲಕ್ಷಣಗಳಾಗಿದ್ದು, ಈ ಧರ್ಮ ವನ್ನು ರೇಣುಕಾಚಾರ್ಯರು, ಬಸವ, ಅಲ್ಲಮಾದಿ ಮಹಾ ಪುರುಷರು, ಹಾನ ಗಲ್ ಕುಮಾರ ಮಹಾಶಿವಯೋಗಿಗಳು ಉದ್ಧರಿಸಿದ್ದಾರೆ ಎಂಬುದನ್ನು  ಮನ ಗಂಡು ವಾದ–ವಿವಾದಗಳನ್ನು ಇಲ್ಲಿಗೆ ಕೊನೆಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.