ADVERTISEMENT

ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:52 IST
Last Updated 21 ಜನವರಿ 2017, 5:52 IST
ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ
ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ   

ನರಗುಂದ: ಅಂಗನವಾಡಿ ಸಹಾಯಕಿಯರು ಹಾಗೂ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ಕೈಗೊಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆಯಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಿದರು. ಇದರಿಂದ ವಾಹನಗಳ ಸಂಚಾರಕ್ಕೆ  ತೊಂದರೆ ಉಂಟಾಯಿತು.

ನಂತರ ಶಾಸಕರ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ನಮ್ಮ ಬೇಡಿಕೆಗಳು ಈಡೇರದೇ ಇದ್ದರೆ ಅನಿರ್ದಿಷ್ಟ ಹೋರಾಟ  ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ಸಹಾಯಕಿಯರ ಹಾಗೂ ಕಾರ್ಯಕರ್ತೆಯರ ಫೆಡರೇಷನ್‌ನ  ತಾಲ್ಲೂಕು ಘಟಕದ ಮುಖಂಡರು ಮಾತನಾಡಿ ಶಿಶುಅಭಿವೃದ್ಧಿ ಯೋಜನೆಯನ್ನು ಖಾಸಗೀಕರಣ ಮಾಡ ಹೊರಟಿರುವುದು ದುರ್ದೈದ  ಸಂಗತಿ. ಕೂಡಲೇ ಈ ಧೋರಣೆ ಕೈ ಬಿಟ್ಟು  ಅಂಗನವಾಡಿ ಸಿಬ್ಬಂದಿ ಸಹಾಯಕ್ಕೆ ಬರಬೇಕು.

ಅಂಗನವಾಡಿ ನೌಕರರನ್ಉ ಸರ್ಕಾರಿ ನೌಕಕರರೆಂದು ಪರಿಗಣಿಸಿ ಕನಿಷ್ಟ ವೇತನ ನೀಡಬೇಕು. 10ನೇ ತರಗತಿ ಉತ್ತೀರ್ಣರದಾ ಸಹಾಯಕಿಯರಿಗೆ ಕಾರ್ಯಕರ್ತೆಯರ  ಹುದ್ದೆಗ ಬಡ್ತಿ ನೀಡಬೇಕು. ಎಲ್ಲ ನೌಕರರಿಗೂ ನೀಡುವ ಪಿಂಚಣಿ  ಸೌಲಭ್ಯ  ನಮಗೂ ವಿಸ್ತರಿಸಬೇಕು.  ಸರ್ಕಾರಿ ನೌಕರರಿಗೆ  ಸಿಗುವ ಸಾಲ ಸೌಲಭ್ಯ, ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಬೇಕು. ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ಕೆ.ಎಂ. ಮುಲ್ಲಾನವರ, ಕೆ.ಬಿ. ಕುರಹಟ್ಟಿ, ಗೀತಾ ದ್ಯಾವನಗೌಡ್ರ, ಗಿರಿಜಾ ಮಾಚಕನೂರು, ಪ್ರತಿಭಾ ಕುರಂದವಾಡ, ಆರ್.ಎಲ್.ಹುಜರತ್ತಿ, ಎಸ್.ಬಿ.ರೋಣದ, ದೇವಕ್ಕ ಮಾಮನಿ, ಎಚ್.ಎಲ್.ರಾಯನಗೌಡ್ರ, ಬಿ.ಬಿ.ಹಂಪಿಹೊಳಿ, ಶಾರದಾ ಹಳೇಮನಿ ಸೇರಿದಂತೆ ಮೊದಲಾದವರಿದ್ದರು.
ಅಕ್ಷರ ದಾಸೋಹ ನೌಕರರ ಪ್ರತಿಭಟನೆ: ತಾಲ್ಲೂಕಿನ ಅಕ್ಷರ ದಾಸೋಹದ ನೌಕರರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡರು.

ಪುರಸಭೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರಗಳ ವಿರುದ್ಧ  ಘೋಷಣೆ ಕೂಗಿದರು. ನಂತರ ತಾಲ್ಲೂಕ ಪಂಚಾಯ್ತಿಗೆ ಬಂದು ಮನವಿ ಸಲ್ಲಿಸಿ ನಮ್ಮ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ನಮ್ಮನ್ನು ಸರ್ಕಾರಿ ನೌಕರರಾಗಿ ಪರಿಗಣಿಸಬೇಕು. ಹೆಚ್ಚಿನ ವೇತನ ನೀಡಬೇಕು. ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸುವಂತೆ ಆಗ್ರಹಿಸಿದರು.  ಪ್ರತಿಭಟನೆಯಲ್ಲಿ  ತಾಲ್ಲೂಕಿನ ವಿವಿಧ ದಾಸೋಹದ ನೌಕರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.