ADVERTISEMENT

ಸಂತೃಪ್ತ ಜೀವನಕ್ಕೆ ಲಲಿತಕಲೆ ಅಗತ್ಯ

ಸಾಣೆಹಳ್ಳಿಯ ಶಿವಸಂಚಾರ ನಾಟಕೋತ್ಸವದಲ್ಲಿ ಸಿದ್ಧಲಿಂಗ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:57 IST
Last Updated 19 ಜನವರಿ 2017, 5:57 IST
ಸಂತೃಪ್ತ ಜೀವನಕ್ಕೆ ಲಲಿತಕಲೆ ಅಗತ್ಯ
ಸಂತೃಪ್ತ ಜೀವನಕ್ಕೆ ಲಲಿತಕಲೆ ಅಗತ್ಯ   

ಡಂಬಳ: ಮನುಷ್ಯ ಭೌತಿಕವಾಗಿ ಪ್ರಬುದ್ಧನಾಗಿದ್ದರೆ ಸಾಲದು. ಲಲಿತ ಕಲೆ, ಸಂಗೀತ, ನಾಟಕ ಮುಂತಾದ ಕಲೆಗಳಿಂದ ಮನುಷ್ಯನಿಗೆ ಸಂತೃಪ್ತಿ ಭಾವನೆ ಬರುತ್ತದೆ. ಅಲ್ಲದೆ ಹೃದಯ ಶ್ರೀಮಂತಿಕೆ ಬೆಳೆಯುತ್ತದೆ ಎಂದು ತೋಂಟದಾರ್ಯ ಡಾ.ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯ ಹೇಳಿದರು.

ಗ್ರಾಮದ ತೋಂಟದಾರ್ಯ ಕಲಾ­ಭವನ­ದಲ್ಲಿ ಮಂಗಳವಾರ ರಾತ್ರಿ ಚಿತ್ರ­ದುರ್ಗ ಜಿಲ್ಲೆಯ ಸಾಣೆಹಳ್ಳಿಯ ಶಿವ­ಸಂಚಾರ ನಾಟಕ ತಂಡ ಹಾಗೂ ಶ್ರೀನಿವಾಸ ವೆಂಕಟಾದ್ರಿ ಬಹದ್ದೂರ್‌ ದೇಸಾಯಿ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಡೆದ ಅಂಬಿಗರ ಚೌಡಯ್ಯ ನಾಟಕೋತ್ಸವವನ್ನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಅಂಬೇಗರ ಚೌಡಯ್ಯ ಮೇಲ್ವರ್ಗ­ದವರಿಂದ ಅನುಭವಿಸಿದ ಶೋಷಣೆ­ಯಿಂದಾಗಿ ಬಸವಣ್ಣವರ ಅನುಭವ ಮಂಟಪದಲ್ಲಿ ನೇರ, ನಿಷ್ಠರವಾಗಿ ವಚನಗಳನ್ನು ಕಟ್ಟಿ ಶೋಷಿತರ ಧ್ವನಿಯಾಗಿ ಕಾಯಕಯೋಗಿ­ಯಾಗಿ ಬದುಕಿದ ಅವರ ಜೀವನ ಆದರ್ಶಗಳು ಎಲ್ಲರಿಗೂ ಮಾದರಿಗಿವೆ ಎಂದರು.

ಶ್ರೀನಿವಾಸ ವೆಂಕಟಾದ್ರಿ ಬಹದ್ದೂರ್‌ ದೇಸಾಯಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಗೋಣಿಬಸಪ್ಪ ಕೊರ್ಲಹಳ್ಳಿ ಪ್ರಸ್ತಾವಿಕ­ವಾಗಿ ಮಾತನಾಡಿ ಗ್ರಾಮೀಣ ಪ್ರದೇಶ­ದಲ್ಲಿನ ಕಲಾ, ಸಂಸ್ಕೃತಿ, ಸಾಹಿತ್ಯದ ಉತ್ತೇಜನಕ್ಕೆ ಹುಟ್ಟು ಹಾಕಿದ ಸಂಸ್ಥೆ­ಯಿಂದ ಕಳೆದ ಮೂರು ನಾಲ್ಕು ವರ್ಷ­ಗಳಿಂದ ಕಲಾ ಪ್ರದರ್ಶನ ಜರುಗುತ್ತಿದ್ದು  ದಾರ್ಶನಿಕರು, ಮಹಾತ್ಮರು, ಶರಣರ ಆದರ್ಶಗಳ್ಳುಳ ನಾಟಕಗಳ ವೀಕ್ಷಣೆ­ಯಿಂದ ಸಾಮಾಜಿಕ ಪರಿವರ್ತನೆ ಬರಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು  ಪಂಚಾಯ್ತಿ  ಅಧ್ಯಕ್ಷೆ ರೇಣುಕಾ ಜಿ, ಕೊರ್ಲಹಳ್ಳಿ, ಗ್ರಾಮ ಪಂಚಾಯ್ತಿ  ಅಧ್ಯಕ್ಷ ಬಸವರಾಜ ಗಂಗಾವತಿ, ಮಠದ ವ್ಯವಸ್ಥಾಪಕ ಜಿ,ವಿ.ಹಿರೇಮಠ, ಸಿ.ಆರ್ ಹಿರೇಮಠ,  ಮುಖಂಡರಾದ ಬಸವ­ರಾಜ ಪೂಜಾರ, ಮರಿತೆಮ್ಮಪ್ಪ ಆದ­ಮ್ಮನವರ,  ಹುಸೇನ್‌ಸಾಬ್‌ ಮೂಲಿ­ಮನಿ, ಡಿ.ಬಿ ಡೋಲಿ, ಜಂದಿಸಾಬ್‌ ಸರ್ಕವಾಸ, ಚಂದ್ರು ಯಳಮಲಿ, ಮಲ್ಲೇಶ ಮಠದ, ಚಂದ್ರಶೇಕರ ಗಡಗಿ, ಶಿವಕುಮಾರ ಗುರುವಿನ, ಸಣ್ಣಹನಮಪ್ಪ ಬಂಡಿ, ಮಾರುತಿ ಹೊಂಬಳ,ನಿಂಗಪ್ಪ ಪಲ್ಲೇದ, ರೇವಣಸಿದ್ದಪ್ಪ ಕರಿಗಾರ, ರಂಗಪ್ಪ ಜೊಂಡಿ,  ಕುಬೇರಪ್ಪ ಬಂಡಿ, ಹು,ಬಾ ವಡ್ಡಟ್ಟಿ,ನಾಗೇಶ ಹುಬ್ಬಳ್ಳಿ, ಎಸ್.ಎಂ ಮುಲ್ಲಾಇತರರು ಹಾಜರಿದ್ದರು.

ಅಂದಿನ ಕಾಲದಲ್ಲಿ ಜಾತಿವ್ಯವಸ್ಥೆಯ ಆಚರಣೆಯಿಂದ ಶೋಷಿತ ಜನಾಂಗ ಅನುಭವಿಸಿದ ನೋವು ನಾಟಕದಲ್ಲಿ ವ್ಯಕ್ತವಾಯಿತು.  ವಿವಿಧ ಪಾತ್ರಗಳಲ್ಲಿನ ಹಾಸ್ಯಭರಿತ ಸನ್ನವೇಶಗಳನ್ನು ವೀಕ್ಷಣೆ ಮಾಡಿದ ಪ್ರೇಕ್ಷಕರು ಮೌನಕ್ಕೆ ಶರಣಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.