ADVERTISEMENT

ಸಾಹಿತ್ಯ ಚಟುವಟಿಕೆಯಲ್ಲಿ ತೊಡಗುವಂತೆ ಸಲಹೆ

ಕವನ, ಸಣ್ಣಕತೆ, ಕಾದಂಬರಿ ರಚನೆ ಕುರಿತು ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 9:12 IST
Last Updated 20 ಜನವರಿ 2017, 9:12 IST
ಸಾಹಿತ್ಯ  ಚಟುವಟಿಕೆಯಲ್ಲಿ ತೊಡಗುವಂತೆ  ಸಲಹೆ
ಸಾಹಿತ್ಯ ಚಟುವಟಿಕೆಯಲ್ಲಿ ತೊಡಗುವಂತೆ ಸಲಹೆ   

ಗದಗ: ಪದವಿಪೂರ್ವ ಶಿಕ್ಷಣ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗದ ಆಶ್ರಯದಲ್ಲಿ ತಾಲ್ಲೂಕಿನ ಕುರ್ತಕೋಟಿಯ ಎ.ಜಿ.ಇನಾಮತಿ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಕವನ, ಸಣ್ಣಕತೆ, ಕಾದಂಬರಿ ರಚನೆ ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ  ನಡೆಯಿತು.

ವಿದ್ಯಾರ್ಥಿಗಳು ಪಠ್ಯದೊಂದಿಗೆ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಎಫ್.ಎಸ್.ದುರಗಣ್ಣವರ ಹೇಳಿದರು.

ಸನ್ಮಾನ ಸ್ವೀಕರಿಸಿದ ಮಂಜುನಾಥ ಬೊಮ್ಮನಕಟ್ಟಿ ಕತೆ, ಕವನ, ಸಣ್ಣಕತೆ ಕಾದಂಬರಿಗಳನ್ನು ರಚಿಸುವ ಕುರಿತು ಮಾತನಾಡಿದರು. ಇಂದಿನ ಮಕ್ಕಳು ಮೊಬೈಲ್ ಬಳಕೆ ಮಾಡುವುದರಲ್ಲೇ ಅಧಿಕ ಸಮಯ ಕಳೆಯುತ್ತಿದ್ದಾರೆ. ಅದರ ಬದಲಿಗೆ ಆಧುನಿಕ ಜೀವನ ಶೈಲಿಯನ್ನು ಅಳವಡಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಉಪನ್ಯಾಸಕ ಡಾ.ಅರ್ಜುನ ಗೊಳಸಂಗಿ ಸಲಹೆ ನೀಡಿದರು.

ಸಾಹಿತ್ಯವು ದೇಶಾಭಿಮಾನ ಬೆಳೆಸುವ ಕಾರ್ಯ ಮಾಡುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರವಿ ಇನಾಮತಿ ಅಭಿಪ್ರಾಯಪಟ್ಟರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಸ್.ಎಂ.  ವಿಭೂತಿ, ಶೈನಾಜ ಕಟ್ಟಿಮನಿ, ಪ್ರಭಾರ ಪ್ರಾಚಾರ್ಯ ಶ್ರೀಶೈಲ ಬೀರಕಬ್ಬಿ ಮಾತನಾಡಿದರು.

ಸುರೇಖಾ ಗುರಿಕಾರ, ಕೋರಿ ಇದ್ದರು.  ವಿದ್ಯಾರ್ಥಿ ಜೀವನಕುಮಾರ ದಂಡೇನವರ ಪ್ರಾರ್ಥಿಸಿದರು, ಎಸ್.ಎಸ್. ಕೊಟಗಿ ಸ್ವಾಗತಿಸಿದರು, ಡಾ.ವೈಆರ್. ಬೆಲೇರಿ ನಿರೂಪಿಸಿದರು, ಬಿ.ಎಸ್. ಗಾರವಾಡಮಠ    ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.