ADVERTISEMENT

‘ಸ್ವಚ್ಛತೆಯಿಂದ ಮನಃಶಾಂತಿ ಪ್ರಾಪ್ತಿ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 4:16 IST
Last Updated 31 ಡಿಸೆಂಬರ್ 2016, 4:16 IST

ಮುಳಗುಂದ : ಸಮೀಪದ ಸೊರಟೂರ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾ ಭಿವೃದ್ದಿ ಯೋಜನೆಯ ಪ್ರಗತಿ ಬಂಧು ಸ್ವ ಸಹಾಯ ಮಹಿಳಾ ಸಂಘ, ಕಾಲಬೈರವ ಸೇವಾ ಸಮಿತಿ ಹಾಗೂ ಗ್ರಾಮ ಪಂಚಾಯ್ತಿ ವತಿಯಿಂದ ಶ್ರೀ ಅನ್ನದಾನೇಶ್ವರ ಮಠದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು.

ಬಳಿಕ ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಅನ್ನದಾನೇಶ್ವರ ಶಾಖಾ ಮಠದ ಶಿವಯೋಗಿಶ್ವರ ಸ್ವಾಮಿಜಿ ಮಾತನಾಡಿ, ಮಠ ಮಾನ್ಯ, ದೇವಸ್ಥಾನದ ಪರಿಸರ ಶುದ್ಧ ಹಾಗೂ ಸ್ವಚ್ಛತೆ ಯಿಂದ ಇದ್ದರೆ ಮನಃಶಾಂತೆ ತನ್ನ ತಾನೆ ಪ್ರಾಪ್ತಿಯಾಗುತ್ತದೆ. ದೇವರ ಸ್ಮರಣೆ ಮನಸ್ಸಿನ ನೆಮ್ಮದಿಗಾಗಿ ಮಾಡಿದರೆ. ಆವರಣದ ಸ್ವಚ್ಛತೆ ಆರೋಗ್ಯದ ದೃಷ್ಠಿ ಯಿಂದ ಒಳಿತಾಗುತ್ತದೆ. ಹೀಗಾಗಿ ಪ್ರತಿ ಯೊಬ್ಬರು ತಮ್ಮ ಮನೆ ಸ್ವಚ್ಛವಾಗಿರುವ ಹಾಗೆ ದೇವಸ್ಥಾನಗಳ ಸುತ್ತಮುತ್ತಲು ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕ ಯೋಜನಾಧಿಕಾರಿ ಕೆ ದಿವಾಕರ ಮಾತನಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ದೇಶದಲ್ಲಿಯೇ ಅತ್ಯಂತ ಸ್ವಚ್ಛ ಧಾರ್ಮಿಕ ನಗರಿ ಎಂದು ಪ್ರಶಸ್ತಿಗೆ ಭಾಜನವಾಗಿದೆ. ಪ್ರಶಸ್ತಿಯ ನೆನಪಿಗಾಗಿ ಧರ್ಮಾಧಿ ಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಯವರ ಸೂಚನೆಯಂತೆ ಪ್ರತಿ ಗ್ರಾಮದ ಲ್ಲಿಯೂ ಪ್ರಗತಿ ಬಂಧುಗಳ ಮತ್ತು ಗ್ರಾಮದ ಸಂಘ ಸಂಸ್ಥೆಗಳ ಸಹಯೋ ಗದಲ್ಲಿ “ಸ್ವಚ್ಛ ಭಾರತ ನಿರ್ಮಲ ಶ್ರದ್ದಾ ಕೇಂದ್ರಗಳ ಪರಿಕಲ್ಪನೆ” ಅಡಿ ಪ್ರತಿ ತಿಂಗಳು ಒಂದು ದಿನ ದೇವಸ್ಥಾನ, ಪ್ರಾಚೀನ ದೇವಾಲಯಗಳನ್ನು ಸ್ವಚ್ಛಗೊ ಳಿಸಲಾಗುತ್ತಿದೆ. ಎಂದು ಹೇಳಿದರು.

ನಿವೃತ್ತ ಶಿಕ್ಷಕ ಬಿ ಜಿ ಮಠಮತಿ, ಆರ್ಯುವೇದಿಕ ಆಸ್ಪತ್ರೆಯ ವೈದ್ಯ ಡಾ. ಎಸ್ ಆರ್ ಮಡಿವಾಳ ನೈರ್ಮಲ್ಯದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾರವ್ವ ಜಂಗವಾಡ, ಎಸ್ ಎಂ ಹೊಸಮಠ, ಫಕ್ಕಿರೇಶ ಹುಜರಾತಿ, ಎಂ ಎನ್ ಹಳ್ಳಿ, ಯಲ್ಲಪ್ಪ ಜಂಗವಾಡ, ಒಕ್ಕೂಟದ   ಅಧ್ಯಕ್ಷೆ ಕುಡವಕ್ಕಲಿಗೇರ, ಪರಸುರಾಮ ಹೂಗಾರ, ಪಿಡಿಒ ತಿಪ್ಪನ ಗೌಡರ, ಮೇಲ್ವಿಚಾರಕರಾದ ಅರುಣಕು ಮಾರ, ಖಾದರಸಾಬ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.