ADVERTISEMENT

‘ಅಲ್ಪಸಂಖ್ಯಾತರ ಮತವಿಭಜನೆಗೆ ಅವಕಾಶ ಬೇಡ’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 6:47 IST
Last Updated 7 ನವೆಂಬರ್ 2017, 6:47 IST

ಸಕಲೇಶಪುರ: ‘ಅಲ್ಪಸಂಖ್ಯಾತರ ಮತಗಳು ವಿಭಜನೆಯಾದರೆ, ಕೋಮುವಾದಿ ಪಕ್ಷಗಳಿಗೆ ಬಲ ಬರಲಿದೆ. ಈ ನಿಟ್ಟಿನಲ್ಲಿ ಮತಗಳ ವಿಭಜನೆಯಾಗದಂತೆ ಜಾಗ್ರತೆ ವಹಿಸಬೇಕು’ ಎಂದು ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್‌ ಅಹಮ್ಮದ್‌ ಸೋಮವಾರ ಹೇಳಿದರು. ತಾಲ್ಲೂಕು ಕಾಂಗ್ರೆಸ್‌ ಅಲ್ಪ ಸಂಖ್ಯಾತರ ವಿಭಾಗದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದರು.

‘ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ಮತ ಗಳು ಅನಿವಾರ್ಯ. ಅಲ್ಪ ಸಂಖ್ಯಾತರಿಗೂ ಕಾಂಗ್ರೆಸ್‌ ಅನಿವಾರ್ಯ. ನಮ್ಮ ಮತಗಳ ವಿಭಜನೆಯೇ ಹಿಂದೆ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು’ ಎಂದು ಪ್ರತಿಪಾದಿಸಿದರು.

ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ವಿಭಾಗದ ಸಂಚಾಲಕ ಡಾ. ದರ್ಬಾರ್‌ ರಫೀಕ್‌, ‘ಹಿಂದೂ ಮತ್ತು ಮುಸ್ಲಿಂ ನಡುವೆ ದ್ವೇಷ ಬಿತ್ತುವವರಿಗೆ ಸಿದ್ದರಾಮಯ್ಯ ಸರ್ಕಾರ ಮಂಗಳೂರು ಘಟನೆಯಲ್ಲಿ ಉತ್ತರ ನೀಡಿದೆ’ ಎಂದರು.

ADVERTISEMENT

ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಮುಜಾಹಿದ್‌, ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್‌ ಶಫಿ, ಜಿಲ್ಲಾ ವಕ್ಫ್‌ ಬೋರ್ಡ್‌ ಅಧ್ಯಕ್ಷ ಪರ್ವೀಜ್ ಪಾಶ, ತಾಲ್ಲೂಕು ಕಾಂಗ್ರೆಸ್‌ ಅಧ್ಯಕ್ಷ ವಿದ್ಯಾಶಂಕರ್‌, ಜಿ.ಪಂ. ಸದಸ್ಯ ಸೈಯದ್‌ ತೋಫಿಕ್‌, ಹುಡಾ ಅಧ್ಯಕ್ಷ ಜಮಾಲ್‌ ಉದ್ದೀನ್‌, ಚುನಾವಣಾ ವೀಕ್ಷಕಿ ಶಾರದಾಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಕುಮಾರ್‌, ಜಿ.ಪಂ. ಮಾಜಿ ಸದಸ್ಯರಾದ ಡಿ.ಸಿ. ಸಣ್ಣಸ್ವಾಮಿ, ಪರ್ವತಯ್ಯ, ಪಕ್ಷದ ಹಿರಿಯ ಮುಖಂಡ ರಹಮತ್‌ ಉಲ್ಲಾ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್‌ ಮುಫೀಜ್‌, ಕಾಂಗ್ರೆಸ್‌ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಸಫೀರ್‌, ಮಲ್ನಾಡ್‌, ಕೊಲ್ಲಹಳ್ಳಿ ಸಲೀಂ, ಮಹಬೂಬ್‌, ಕೆಪಿಸಿಸಿ ಸದಸ್ಯ ಖಡಾಖಡಿ ಫೀರ್‌, ಛಲವಾದಿ ಸಂಘಟನೆ ಮುಖಂಡ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.