ADVERTISEMENT

ಆಮ್‌ ಆದ್ಮಿ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 13 ಜನವರಿ 2014, 6:21 IST
Last Updated 13 ಜನವರಿ 2014, 6:21 IST

ಹಾವೇರಿ: ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಪಕ್ಷದ ಕುರಿತು ಜಾಗೃತಿ ಮೂಡಿಸಲು ಭಾನುವಾರ ನಗರದಲ್ಲಿ ಜಾಗೃತಿ ಜಾಥಾ ನಡೆಸಿದರು.

ನಗರದ ಪುರಸಿದ್ದೇಶ್ವರ ದೇವಾಲಯ ದಿಂದ ಆರಂಭವಾದ ಜಾಥಾ ಹುಕ್ಕೇರಿ ಮಠ, ಎಂ.ಜಿ.ರಸ್ತೆ, ಮಹಾತ್ಮಾಗಾಂಧಿ ವೃತ್ತ, ಜೆ.ಪಿ.ವೃತ್ತದ ಮೂಲಕ ಹೊಸ ಮನಿ ಸಿದ್ದಪ್ಪ ವೃತ್ತಕ್ಕೆ ತೆರಳಿತು. ಮಾರ್ಗ ದುದ್ದಕ್ಕೂ ಕಾರ್ಯಕರ್ತರು ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣ ನಮ್ಮ ಗುರಿ, ನಮ್ಮ ಜತೆ ನೀವು ಕೈಜೋಡಿಸಿ ಎನ್ನುವ ಘೋಷಣೆಗಳನ್ನು  ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಘಟಕ ಶಿವಾನಂದ ಹಳ್ಳೇರ, ದೇಶದಲ್ಲಿರುವ ಭ್ರಷ್ಟಾಚಾರ ತಾಂಡ ವಾಡುತ್ತಿವೆ. ಆಡಳಿತ ಪಕ್ಷ, ವಿರೋಧ ಪಕ್ಷಗಳು ಕೇವಲ ಆರೋಪ, ಪ್ರತ್ಯಾ ರೋಪ ಮಾಡುವುದನ್ನು ಬಿಟ್ಟರೆ, ಇಡೀ ಭ್ರಷ್ಟ ವ್ಯವಸ್ಥೆಯನ್ನು ತೆಗೆದು ಹಾಕಲು ಯತ್ನಿಸದೇ ಅವುಗಳ ಕೂಡಾ ಅದೇ ವ್ಯವಸ್ಥೆಯಲ್ಲಿ ಬಿದ್ದು ತೊಳಲಾಡುತ್ತಿವೆ ಎಂದು ಆರೋಪಿಸಿದರು.

ಭ್ರಷ್ಟಾಚಾರ ಕಿತ್ತು ಹಾಕಲು ಮತ್ತು ಗ್ರಾಮ ಸ್ವರಾಜ್ಯ ಸ್ಥಾಪಿಸಲು ಜಿಲ್ಲೆಯ ನಾಗರಿಕರು, ಯುವಕರು, ಜನ ಸಾಮಾನ್ಯರು ಆಮ್ ಆದ್ಮಿ ಪಾರ್ಟಿ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪಕ್ಷದ ಕಾರ್ಯಕರ್ತರಾದ ಟಿ.ಬಿ. ಕುಲಕರ್ಣಿ, ಜೆ.ಬಿ.ಮಕಾನದಾರ, ಶಿವಾ ನಂದ ಪ್ರಸಾದಿಮಠ, ಜಗದೀಶ ಕಟಗಿ, ಅಮರನಾಥ ಭೂತೆ ಅಲ್ಲದೇ 60ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿ ಸಿದ್ದರು.

ನಂತರ ಇಲ್ಲಿನ ಮುರುಘಾಮಠದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಜ. ೨೬ರೊಳಗೆ ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿಗಳನ್ನು ರಚಿಸಲು ನಿರ್ಧರಿಸಲು ನಿರ್ಧರಿಸಲಾ ಯಿತು. ಜಿಲ್ಲಾ ಸಂಘಟಕ ಶಿವಾನಂದ ಹಳ್ಳೇರ  ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ಪ್ರಮುಖರಾದ ಲಿಂಗರಾಜ ಅರಳಿಹಳ್ಳಿ, ಶಿವಾನಂದ ಕಡಕೋಳ, ಕಮಾಂಡರ್ ಶಹಾಜಿ ಪವಾರ್, ಸಿದ್ಧ ಲಿಂಗಯ್ಯ ಹಿರೇಮಠ, ಚೆನ್ನಬಸಪ್ಪ ಸಜ್ಜ ನರ ಸೇರಿದಂತೆ ಅನೇಕರು ಹಾಜರಿದ್ದರು.

ಇದಾದ ನಂತರ ಪುರಸಿದ್ದೇಶ್ವರ ದೇವಸ್ಥಾನ ಹಾಗೂ ಹುಕ್ಕೇರಿಮಠ ಎದುರಿನ ರಸ್ತೆಗಳನ್ನು ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.--

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.