ADVERTISEMENT

ಆಸ್ಪತ್ರೆಯ 82ಹುದ್ದೆಯ ಪೈಕಿ 60 ಖಾಲಿ ಖಾಲಿ

ಪ್ರಮೀಳಾ ಹುನಗುಂದ
Published 13 ನವೆಂಬರ್ 2017, 7:17 IST
Last Updated 13 ನವೆಂಬರ್ 2017, 7:17 IST
ಬ್ಯಾಡಗಿ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಹೊರ ನೋಟ
ಬ್ಯಾಡಗಿ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಹೊರ ನೋಟ   

ಬ್ಯಾಡಗಿ: ಪಟ್ಟಣದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿಯ ಕೊರತೆ ಹೆಚ್ಚಾಗಿದ್ದು, ಒಟ್ಟು 82 ಹುದ್ದೆಗಳ ಪೈಕಿ 60 ಖಾಲಿ ಖಾಲಿಯಾಗಿವೆ... ಕಳೆದ ವರ್ಷ ಆಸ್ಪತ್ರೆಯ ಉದ್ಘಾಟನೆಗೆ ಆಗಮಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಆರ್‌.ರಮೇಶಕು

ಆದರೆ, ಅವರ ಭರವಸೆ ಹುಸಿಯಾಗಿದೆ. 100 ಹಾಸಿಗೆಯ ಈ ಆಸ್ಪತ್ರೆಯಲ್ಲಿ ಹೊರ ರೋಗಿಗಳು ಚಿಕಿತ್ಸೆಗೆ ಸಂಜೆಯ ವರೆಗೂ ಕಾಯ್ದರು ಸೂಕ್ತ ಚಿಕಿತ್ಸೆ ದೊರೆಯದೇ ಇರುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮುಖಂಡ ಚಂದ್ರು ಛತ್ರದ ತಿಳಿಸಿದರು.

ಆಸ್ಪತ್ರೆಯಲ್ಲಿ ಸ್ವಚ್ಛತೆ ಬಗ್ಗೆ ಕಾಳಜಿಯೇ ಇಲ್ಲದಾಗಿದೆ. ಆಸ್ಪತ್ರೆಯ ಹಿಂಭಾಗದಲ್ಲಿ ಕೊಳಚೆ ನಿರ್ಮಾಣವಾಗಿದ್ದು ಹಂದಿಗಳ ವಾಸಸ್ಥಾನವಾಗಿದೆ ಎಂದರು. ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ತಾಲ್ಲೂಕು ಆಸ್ಪತ್ರೆಯನ್ನಾಗಿ ಮಾಡಲಾಯಿತು. ಅದರೊಂದಿಗೆ ಒಟ್ಟು 82 ಹುದ್ದೆಗಳು ಕೂಡಾ ಮಂಜೂರಾದವು. ಆದರೆ, ಈ ವರೆಗೆ ಶೇ 27ರಷ್ಟು ಮಾತ್ರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ಪ್ರತಿ ದಿನ ಹೊರ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಸಿಬ್ಬಂದಿಯ ಕೊರತೆಯಿಂದ ಅವರನ್ನು ನಿಭಾಯಿಸುವುದು ಕಷ್ಟಕರವಾಗಿದೆ. 3ಜನ ಕಾಯಂ ಹಾಗೂ 4ಜನ ಗುತ್ತಿಗೆ ಆಧಾರದಲ್ಲಿ ಸ್ಟಾಪ್‌ ನರ್ಸ್‌ ಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆ ಖಾಲಿ ಇದೆ.

ವೈದ್ಯರ ಸಂಖ್ಯೆಗೆ ಅನುಗುಣವಾಗಿ ಅವರಿಗೆ ವಸತಿ ಗೃಹಗಳಿಲ್ಲ. ಹೀಗಾಗಿ, ತುರ್ತು ಸಂದರ್ಭಗಳಲ್ಲಿ ವೈದ್ಯರು ಇಲ್ಲದೇ ರೋಗಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕಿವಿ, ಮೂಗು ಗಂಟಲು ಹಾಗೂ ಎಲುಬು ತಜ್ಞ ವೈದ್ಯರಿದ್ದರೂ ಕೂಡಾ ಶಸ್ತ್ರ ಚಿಕಿತ್ಸೆಗೆ

ಆಸ್ಪತ್ರೆಯಲ್ಲಿ ಡಿಜಿಟಲ್‌ ಎಕ್ಸರೇ, ಬಯೋ ಕೆಮಿಸ್ಟ್ರಿ ಅನಲೈಸರ್‌ ಇಲ್ಲದೇ ರೋಗಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಸ್ವಚ್ಛತೆಯ ಕೊರತೆ ಜೊತೆಗೆ ಹಾಸಿಗೆಗಳ ಕೊರತೆ ಹೆಚ್ಚಿದೆ. ಹೀಗಾಗಿ ಬಾಣಂತಿಯರು ತೀವ್ರ ತೊಂದರೆ ಅನುಭವಿಸಬೇಕಾಗಿದೆ ಎಂದು ರೋಗಿಗಳು ದೂರುತ್ತಿದ್ದಾರೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.