ADVERTISEMENT

‘ಕವನ ಕಟ್ಟಬೇಕು: ಹೂವಿನ ಹಾರದಂತಿರಬೇಕು’

ಜಿಲ್ಲಾ ಉತ್ಸವದ ಕವಿಗೋಷ್ಠಿಯಲ್ಲಿ ಕವಿ ಗಂಗಾದರ ನಂದಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:45 IST
Last Updated 20 ಮಾರ್ಚ್ 2017, 6:45 IST

ಹಾವೇರಿ: ಅಲ್ಲಿ ಅರ್ಥ ತುಂಬಿದ ಪದಗಳ ಪೋಣಿಸಲಾಗಿತ್ತು. ಅಲ್ಲಲ್ಲಿ ಕೆಲವು ವಾಕ್ಯಗಳನ್ನೇ ಒಡೆದ ಸಾಲುಗ ಳಂತಿತ್ತು. ಅಲ್ಲಿ ಪದ್ಯಗಳೂ ಇತ್ತು, ಕೆಲವು ಗದ್ಯಗಳ ಹಾಗಿತ್ತು. ಒಟ್ಟಾರೆ, ಅರ್ಥ ಗರ್ಭಿತ, ಉತ್ತಮ ಆಶಯಗಳ ಮೂಲಕ ಸಾಹಿತ್ಯಾಸಕ್ತರಿಗೆ ರಸದೌತಣ ನೀಡಿತು. ಇದು ಜಿಲ್ಲಾ ಉತ್ಸವದ ಅಂಗವಾಗಿ ಜಿಲ್ಲಾ ಗುರುಭವನದ ಗಳಗನಾಥರ ವೇದಿಕೆಯಲ್ಲಿ ಭಾನುವಾರ ನಡೆದ ‘ಕವಿಗೋಷ್ಠಿ’ಯ ಸಾರ.

ಸಾಮಾಜಿಕ ಸಮಸ್ಯೆ, ಮಹಿಳಾ ಶೋಷಣೆ, ಸಮಾನತೆ, ರೈತರ ಸಮಸ್ಯೆ, ನಾಡು-ನುಡಿಯ ವರ್ಣನೆ, ಮಹದಾಯಿ ಹೋರಾಟ ಸೇರಿದಂತೆ ಹಲವು ವಿಚಾರ ಗಳು ‘ಕವನ’ಗಳಲ್ಲಿ ವ್ಯಕ್ತವಾದವು.

ಪ್ರೊ.ಕೆ.ಸಿ.ನಂದಿಹಳ್ಳಿ ‘ರೈತ ಜೀವನ’, ರಾಜೇಶ್ವರಿ ತಿರುಮಲ ‘ಹೆಣ್ಣಿನ ಸ್ವಾತಂತ್ರ್ಯ’,  ಎನ್.ಎಸ್.ಬಸನಾಳ ‘ಬರ ಗಾಲ, ರೇಖಾ ನಲವಾಲದ ‘ಹುಡಗಿ’, ವಿರೇಂದ್ರ ನಾವದಿ ‘ಬಸವಣ್ಣ’ ಹಾಗೂ ಸೋಮಶೇಖರ ಅವರು ಮಹಾದಾಯಿ ಹೋರಾಟದ ಕುರಿತು ಕವನ ವಾಚಿಸಿ ದರು. ಮಹಾದಾಯಿ ಪಡೆದೇ ಪಡೆಯು ತ್ತೇವೆ ಎಂಬ ಆಶಯ ವ್ಯಕ್ತಪಡಿಸಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಕವಿ ಗಂಗಾಧರ ನಂದಿ, ‘ಕವಿಗಳಿಗೆ ಶಬ್ದ ಸಂಪತ್ತು, ಬೌದ್ಧಿಕ ಚತುರತೆ, ಆಳವಾದ ಅಧ್ಯಯನ, ಸೃಜನಶೀಲ ಮನೋಭಾವ ಅವಶ್ಯ’ ಎಂದರು.

‘ಕವಿ ಎಂದರೆ ಚತುರ ವಿದ್ವಾಂಸ ಎನ್ನುತ್ತಾರೆ. ಸಮಾಜವನ್ನು ತೆರೆದ ಮನಸ್ಸಿನಿಂದ ಗ್ರಹಿಸಿ, ಆಸ್ವಾದಿಸಿ ಕವನ ಕಟ್ಟಬೇಕು. ಒಂದು ಸುಂದರ ಹೂಮಾ ಲೆಗೆ ಹೂವು, ದಾರ, ಸೂಜಿ ಹಗೂ ಹೆಣೆಯುವ ಸೃಜನಶೀಲ ಕೈಗಳು  ಅವಶ್ಯ. ಅಂತೆಯೇ ಕವಿತೆಗೆ ಸಾಹಿತ್ಯಿಕ ಜ್ಞಾನ, ಶಬ್ದಗಳ ಜ್ಞಾನ, ಅನುಭವವೇ ಆಧಾರ’ ಎಂದರು.

‘ಆದರ, ಬಹಳಷ್ಟು ಕವಿಗಳಿಗೆ ಕಾಗು ಣಿತ ಜ್ಞಾನ, ಶಬ್ದ ಭಂಡಾರ, ವ್ಯಾಕರಣ ಜ್ಞಾನದ ಕೊರತೆ ಇದೆ. ಆಗ ಜಾಳುಜಾ ಳಾದ ಕವಿತೆಗಳು ಬರುತ್ತವೆ’ ಎಂದರು. ‘ಹಾವೇರಿ ಜಿಲ್ಲೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಅತ್ಯಂತ ಸೃಜನಶೀಲ ಪರಂಪರೆ ಹೊಂದಿದೆ’ ಎಂದರು.

ಸಾಹಿತಿ ಬ್ಯಾಡಗಿಯ ಸಂಕಮ್ಮ ಸಂಕಣ್ಣನವರ ಮಾತನಾಡಿ, ‘ಕವಿತೆಗಳು ಸಮಾಜದ, ನೊಂದವರ ನೋವಿನ ಖಡ್ಗವಾಗಬೇಕು, ಅನುಭವದ ಅಕ್ಷರಗಳ ಅಕ್ಷಯಪಾತ್ರೆ ಆಗಬೇಕು. ಅದಕ್ಕೆ ಸಾಮಾಜಿಕ ಕಳಕಳಿ, ತುಡಿತ, ಸೃಜಶೀಲ ಮನೋಭಾವ, ಜ್ಞಾನದ ಅರಿವು ಅಗತ್ಯವಾಗಿದೆ’ ಎಂದು ಹೇಳಿದರು.

ಡಾ.ಸುಜಾತಾ ದೇವರಮನಿ, ಶಕುಂತಲಾ ತಾಳೆರ, ಗಿರಿಜಾ ಮಾಗಾವಿ, ಶೃತಿ ಹೆಡಿಯಾಳ, ಉಮಾರಾಣಿ ಪೂಜಾ ರಿ, ಅಶೋಕ ಕೊಡ್ಲಿ, ದಿವಾಕರ ಮೂರ್ತಿ, ರೇಖಾ ನಲವಾಗಲದ, ಡಾ. ಸುಂಗಮಲಾ ಹತ್ತಿಗೇರಿ, ವಿರೇಶ  ಹಿತ್ತಲ ಮನಿ,  ಸಿ.ಎನ್. ಪಾಟೀಲ,  ಶ್ರೀಕಾಂತ ದೊಡ್ಡಕುರುಬರ, ಡಾ.ಸುನೀಲಚಂದ್ರ ಅವರಾದಿ, ರಮ್ಜಾನ್ ಕಿಲ್ಲೇದಾರ, ಡಾ. ಎಸ್.ಬಿ.ಸಜ್ಜನ, ಜೀವರಾಜ ಚಪ್ಪರದ, ವೀರೇಂದ್ರ ನವಾದಿ ಸೇರಿದಂತೆ 3೦ಕ್ಕೂ ಹೆಚ್ಚು ಕವಿಗಳು ವಾಚಿಸಿದರು.

*
ಕವನ ಸಮಾಜದ ಆಗುಹೋಗುಗಳಿಗೆ ಸ್ಪಂದಿಸಬೇಕು. ನೋವು– ನಲಿವುಗಳ ಭಾಗವಾಗಬೇಕು.
-ಸಂಕಮ್ಮ ಸಂಕಣ್ಣನವರ,
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT