ADVERTISEMENT

ತೆರಿಗೆ ಯಥಾಸ್ಥಿತಿಗೆ ಪುರಸಭೆ ಒಪ್ಪಿಗೆ

ವಾಣಿಜ್ಯ ಮಳಿಗೆ ಹರಾಜು, ಕಸ ಸಂಗ್ರಹಣೆಗೆ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 10:29 IST
Last Updated 5 ಜನವರಿ 2017, 10:29 IST

ಬ್ಯಾಡಗಿ: ಕಳೆದ 3 ವರ್ಷಗಳಿಂದ ತೀವ್ರ ಬರಗಾಲ ಉಂಟಾಗಿ ಪಟ್ಟಣದ ಜನತೆ ವಾಣಿಜ್ಯ ವ್ಯಾಪಾರ ಪ್ರಗತಿದಾಯಕ ವಾಗಿಲ್ಲದೆ ಹಿನ್ನೆಲೆಯಲ್ಲಿ ಪಟ್ಟಣದ ಕರ ಹೆಚ್ಚಳವನ್ನು ಕೈಬಿಡುವಂತೆ ಸದಸ್ಯ ಮುರಿಗೆಪ್ಪ ಶೆಟ್ಟರ ಅವರ ಮನವಿಯ ಮೇರೆಗೆ ಕರವನ್ನು ಯಥಾಸ್ಥಿತಿ (ಶೇ 25) ಕಾಯ್ದುಕೊಳ್ಳಲು ಬುಧವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆ ಒಪ್ಪಿಗೆ ನೀಡಿತು.

ಸುಭಾಷ ನಗರದಲ್ಲಿ ಕಳೆದ ಐದು ದಶಕಗಳಿಂದ ಹಕ್ಕು ಪತ್ರವಿಲ್ಲದೆ ಜನತೆ ವಾಸವಾಗಿದ್ದಾರೆ. ಅಕ್ರಮ–ಸಕ್ರಮ ಯೋಜನೆಯಡಿ ಜಾಗೆಯನ್ನು ಸಕ್ರಮ ಗೊಳಿಸುವಂತೆ ಅಲ್ಲಿಯ ಜನತೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಈಗಾಗಲೆ ತಹಶೀಲ್ದಾರರಿಗೆ ಮನವಿ ಮಾಡಿಕೊಳ್ಳಲಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಕೊಳ್ಳುವ ಭರವಸೆಯನ್ನು ಅಧ್ಯಕ್ಷ ಬಸವಣ್ಣೆಪ್ಪ ಛತ್ರದ ನೀಡಿದರು.

ನೀರು ಹರಿಯದಂತೆ ಜಾಗೃತಿ ವಹಿಸಿ: ಪಟ್ಟಣದಲ್ಲಿ ನಳಗಳಿಗೆ ಕ್ಯಾಪ್‌ ಹಾಕಿಲ್ಲದ ಕಾರಣ ನೀರು ವ್ಯರ್ಥವಾಗಿ ಹರಿಯು ತ್ತಿದೆ. ಈಗಾಗಲೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕೊಳವೆ ಬಾವಿಗಳಲ್ಲಿ ಅಂತರ್‌ಜಲ ಪಾತಾಳಕ್ಕೆ ಹೋಗಿದೆ. ನೀರಿನ ಬಳಕೆ ಮಿತವಾಗಿರು ವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಸದಸ್ಯ ಮಂಜುನಾಥ ಭೋವಿ ಸಭೆಯಗಮನಕ್ಕೆ ತಂದರು.

ಈ ಕುರಿತು ಹಲವಾರು ಬಾರಿ ಮುಖ್ಯಾಧಿಕಾರಿಗಳ ಗಮನಕ್ಕೆ ತರ ಲಾಗಿದ್ದರೂ, ಯಾಕೋ ಅವರು ಜಾಗೃತ ರಾಗಿಲ್ಲ.  ಕೂಡಲೆ ನಳಗಳಿಗೆ ಕ್ಯಾಪ ಹಾಕುವಂತೆ ಆದೇಶ ಹೊರಡಿಸಿ ನೀರು ವ್ಯರ್ಥವಾಗಿ ಹರಿಯವುದನ್ನು ತಡೆಯು ವಂತೆ ಸಭೆ ಸೂಚಿಸಿತು. 

ವಾಣಿಜ್ಯ ಮಳಿಗೆ ಹರಾಜು, ಕಸ ಸಂಗ್ರಹಿಸುವವರನ್ನು ಗುತ್ತಿಗೆ ಆಧಾರ ದಲ್ಲಿ ನೇಮಕ ಮಾಡಿಕೊಳ್ಳುವುದು, ವಾರದ ಸಂತೆಯ ಶುಲ್ಕ ಸಂಗ್ರ ಹರಾಜು ಕುರಿತು ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಸುಧಾ ಕಳ್ಳಿಹಾಳ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತವ್ವ ಬೇವಿನಮಟ್ಟಿ, ಸದಸ್ಯರಾದ ನಾರಾಯಣಪ್ಪ ಕರ್ನೂಲ, ನೀಲಮ್ಮ ದೊಡ್ಡಮನಿ, ದ್ರಾಕ್ಷಾಯಿಣಿ ಪಾಟೀಲ, ನಜೀರ್ ಅಹ್ಮದ್ ಶೇಖ್, ಯಮ ನೂರಪ್ಪ ಉಜನಿ, ಬಸವರಾಜ ಹಂಜಗಿ, ಮಲ್ಲನಗೌಡ ಭದ್ರಗೌಡ್ರ, ಪ್ರಶಾಂತ ಯಾದವಾಡ, ಯಲ್ಲವ್ವ ಡಾವಣಗೇರಿ, ರಾಮಣ್ಣ ಕೋಡಿಹಳ್ಳಿ, ಶಾಂತವ್ವ ಕುರು ಕುಂದಿ, ರಾಜೇಸಾಬ ಕನವಳ್ಳಿ. ಅಬ್ದುಲ್‌ ಮುನಾಫ್‌  ಎರೆಸೀಮೆ, ದುರ್ಗೇಶ ಗೋಣೆಮ್ಮನವರ, ರೋಹಿಣಿ ಹುಣಸೀ ಮರದ, ರತ್ಮಮ್ಮ ಬೂದಿಹಾಳಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.