ADVERTISEMENT

‘ದೀನ, ದಲಿತರಿಗಾಗಿ ಹೋರಾಡಿದ ಮಹಾತ್ಮ’

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 10:43 IST
Last Updated 16 ಏಪ್ರಿಲ್ 2017, 10:43 IST

ರಟ್ಟೀಹಳ್ಳಿ: ‘ಭಾರತೀಯ ಸಂವಿಧಾನ ರಚಿಸಿದ ಅಂಬೇಡ್ಕರ್ ಅವರು ದೀನ ದಲಿತರಿಗಾಗಿ ಹೋರಾಡಿದ ಮಹಾತ್ಮ’ ಎಂದು ಶಿಕ್ಷಕಿ ಸರಸ್ವತಿ ಅಜ್ಜಪ್ಪನವರ ನುಡಿದರು.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಶುಕ್ರವಾರ ಜರುಗಿದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮುಖ್ಯಶಿಕ್ಷಕ ವಿ.ಇ.ಆರ್.ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಎಸ್. ನೇಕಾರ, ಎಸ್.ಬಿ.ಕಡೂರ, ಎನ್.ಬಿ.ಬೀಡಿವಾಲೆ. ಎನ್.ಬಿ.ಬಡಿಗೇರ,  ಎನ್.ಟಿ.ಪಾಟೀಲ, ಪಿ.ಎಸ್.ಹಲಗೇರಿ, ಸವಿತಾ ಬ್ಯಾಡಗಿ, ಎ.ಆರ್.ಲತಾ ಮುಂತಾದವರು ಭಾಗವಹಿಸಿದ್ದರು.

‘ನವಚೈತನ್ಯ ತುಂಬಲಿ

ರಾಣೆಬೆನ್ನೂರು: ‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಚಿಂತನೆಗಳು ನಮ್ಮ ಯುವ ಪೀಳಿಗೆಯಲ್ಲಿ ನವಚೈತನ್ಯ ತುಂಬಬೇಕಿದೆ’ ಎಂದು ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ನುಡಿದರು.ತಾಲ್ಲೂಕಿನ ಸುಣಕಲ್ಲಬಿದರಿ ಗ್ರಾಮದಲ್ಲಿ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

ಶಂಭುಲಿಂಗ ಕೆಳಗಿಮನಿ, ಮಾಲ ತೇಶ ಕುಸಗೂರ, ರಮೇಶ ಗೋರಪ್ಪ ಳವರ, ಸಹದೇವಪ್ಪ ಕನ್ನಮ್ಮನವರ, ಶಿವಾನಂದ ಹುಲ್ಲತ್ತಿ, ಜಿ.ಕೆ. ವಿಶ್ವನಾಥ, ಸೋಮಪ್ಪ ಕೆಂಪಳ್ಳೇರ, ಪ್ರಶಾಂತ ಹೆಡ್ಡನವರ ಗ್ರಾಮ ಪಂಚಾಯ್ತಿ ಸದಸ್ಯರು ಮತ್ತಿತರರು ಇದ್ದರು.

ಸಡಗರದ ಜಯಂತಿ

ಬ್ಯಾಡಗಿ: ತಾಲ್ಲೂಕಿನ ಮೋಟೆಬೆನ್ನೂರ ಗ್ರಾಮದ ಬಳ್ಳಾರಿ ರುದ್ರಪ್ಪ ಶಿಕ್ಷಣ ಸಂಸ್ಥೆಯ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಡಾ. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವರಾಂ ಜಯಂ ತ್ಯುತ್ಸವ ನಡೆಯಿತು.ಸಂಸ್ಥೆಯ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಉಭಯ ನಾಯಕರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿ ಷಣ್ಮುಖಪ್ಪ ಬಳ್ಳಾರಿ ಮಾತನಾಡಿ, ‘ಓದುವ ಛಲ, ಬಡತನದಲ್ಲಿ ಸಾಧಿಸಬೇಕೆನ್ನುವ ತುಡಿತ ದಲ್ಲಿ ಅಂಬೇಡ್ಕರ್ ಅವರು ಆದರ್ಶ ಬದುಕು ರೂಪಿಸಿಕೊಂಡರು. ಇದನ್ನು ಯುವಜನರು ರೂಢಿಸಿಕೊಳ್ಳಬೇಕು’ ಎಂದರು.ಖಜಾಂಚಿ ಚನ್ನವೀರಪ್ಪ ಬಳ್ಳಾರಿ, ಆಡಳಿತಾಧಿಕಾರಿ ಪ್ರೊ.ಸಿ.ಸಿ.ಪ್ರಭುಗೌಡ್ರ, ಪ್ರಾಚಾರ್ಯ ಡಾ.ಎಸ್.ವಿ.ಖಾನಗೌಡ್ರ, ಪ್ರಾಚಾರ್ಯೆ ಲೀಲಾವತಿ ಬುಕ್ಕಶೆಟ್ಟಿ, ಪ್ರಾಚಾರ್ಯ ಎಂ.ಸುರೇಶ, ಉಪನ್ಯಾಸ ಕಾರದ ರವಿಚಂದ್ರ ಮಲಗುಂದ, ಮಹಾಂತೇಶ ದುರ್ಗದ ಪಾಲ್ಗೊಂ ಡಿದ್ದರು.ಪ್ರೊ.ತೇಜಪ್ಪ ಮಡಿವಾಳರ ಸ್ವಾಗತಿಸಿ ದರು. ವಿದ್ಯಾ ಬಣಕಾರ ನಿರೂಪಿಸಿದರು. ಪ್ರೊ.ವೀರೇಶ ಹಿತ್ತಲಮನಿ ವಂದಿಸಿದರು.

ಬಿಜೆಪಿ ಕಚೇರಿ:  ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಅವರ ಜಯಂತ್ಯುತ್ಸವ ಸಡಗರದಿಂದ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.