ADVERTISEMENT

‘ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 6:40 IST
Last Updated 9 ನವೆಂಬರ್ 2017, 6:40 IST

ಸವಣೂರ: ‘ಕೇಂದ್ರ ಸರ್ಕಾರ ದೀರ್ಘ ಮುಖಬೆಲೆ ನೋಟ್‌ ರದ್ದುಪಡಿಸಿ ಒಂದು ವರ್ಷ ಪೂರೈಸಿದ ಹಿಲ್ಲೆಯಲ್ಲಿ ತಾಲ್ಲೂಕು ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾರ್ಯಕರ್ತರು, ನವೆಂಬರ್ 8ನ್ನು ‘ಕರಾಳ ದಿನ’ ಎಂದು ಬುಧವಾರ ಆಚರಿಸಿ’ ತಹಶೀಲ್ದಾರ್‌ ವಿ.ಡಿ.ಸಜ್ಜನ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಮಾತನಾಡಿ, ‘ದೀರ್ಘ ಮುಖಬೆಲೆ ನೋಟ್‌ ರದ್ದತಿ ಒಂದು ಸಂಘಟಿತ ದರೋಡೆಯ ಯತ್ನ. ಆದ್ದರಿಂದ, ನ.8ನ್ನು ‘ಕರಾಳ ದಿನ’ ಎಂದು ಪರಿಗಣಿಸಬೇಕು’ ಎಂದರು.

ನೋಟ್‌ ರದ್ದತಿಯಿಂದ ಶ್ರೀಸಾಮಾನ್ಯರ ಬದುಕಿಗೆ ತೊಂದರೆಯಾಗಿದೆ. ಅಷ್ಟೇ ಅಲ್ಲದೇ, ಜಿಎಸ್‌ಟಿ ಅನುಷ್ಠಾನದಿಂದ ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನ ಮುಖಿಯಾಗಿವೆ ಎಂದರು.

ADVERTISEMENT

ಕೇಂದ್ರ ಬಿಜೆಪಿ ಸರ್ಕಾರ ಬಡ ಜನರ, ಕಾರ್ಮಿಕರ ವಿರೋಧ ನೀತಿಯನ್ನು ಗೋಷಣೆ ಮಾಡುತ್ತಿದೆ. ಅಲ್ಲದೇ, ದೇಶದ ಅಭಿವೃದ್ಧಿಯ ಬಗ್ಗೆ ಈ ವರೆಗೆ ಯಾವುದೇ ಮಹತ್ವದ ನಿರ್ಧಾರಗಳನ್ನು ಕೈಗೊಂಡಿಲ್ಲ ಎಂದರು.

ತಾಲ್ಲೂಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನಾಗಪ್ಪ ತಿಪ್ಪಕ್ಕನವರ, ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ದುಗ್ಗತ್ತಿ, ಎಸ್.ಎಸ್.ರೀಸಾಲ್ದಾರ್‌, ಎ.ಎಂ.ಫರಾಶ್‌, ಮಾಲಿಂಗಪ್ಪ ಕುಂಬಾರ, ಸೋಮಂತ ಕಣವಿ, ನೀಲಪ್ಪ ಹರಿಜನ, ನಿಂಗಪ್ಪ ಹಳವಳ್ಳಿ, ಹುಸೇನ್‌ ಸಾಬ್‌ ಕಡೇಮನಿ, ಎಸ್.ಬಿ.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.