ADVERTISEMENT

‘ಮುಖ್ಯಾಧಿಕಾರಿಯಿಂದ ಶಿಷ್ಟಾಚಾರ ಉಲ್ಲಂಘನೆ’

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:20 IST
Last Updated 20 ಮೇ 2017, 5:20 IST

ಸವಣೂರ: ‘ಇತ್ತೀಚೆಗೆ ಉದ್ಘಾಟನೆಗೊಂಡ ಸ್ಥಳೀಯ ಪುರಸಭೆಯ ನೂತನ ಕಟ್ಟಡ ಉದ್ಘಾಟನೆಯ ವೇಳೆ ಕಟ್ಟಡ ಶಂಕು ಸ್ಥಾಪನೆ ವೇಳೆ ಅಧಿಕಾರದಲ್ಲಿದ್ದ ಸದಸ್ಯರ ಹೆಸರನ್ನು ಶಿಲೆಯಲ್ಲಿ ಕೆತ್ತಿಸಿಲ್ಲ.

ಪ್ರಸ್ತುತ ಆಡಳಿತ ಮಂಡಳಿಯ ಸದಸ್ಯರ ಹೆಸರನ್ನು ಮಾತ್ರವೇ ಪುರಸಭೆಯ ಮುಖ್ಯಾಧಿ ಕಾರಿ ನಾಮಫಲಕದಲ್ಲಿ ಅಳವಡಿಸಿದ್ದಾರೆ. ಈ ಮೂಲಕ ಅವರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ’ ಎಂದು ಪುರಸಭೆ ಹಾಲಿ, ಮಾಜಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಉದ್ಘಾಟನಾ ಸಮಾರಂಭಕ್ಕೆ ತಡೆಯೊಡ್ಡಬಾರದೆಂಬ ಉದ್ದೇಶ ದಿಂದ ನಾಮಫಲಕ ಅಳವಡಿಕೆಗೆ ಮನವಿ ಮಾಡಲಾಗಿತ್ತು. ಆಗ ಮುಖ್ಯಾಧಿಕಾರಿ ರಾಜು ಭೋವಿ ಅವರು ಏಳು ದಿನಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಇದೀಗ ಮತ್ತೆ–ಮತ್ತೆ ಅದನ್ನು ಮುಂದೂಡುತ್ತಿದ್ದಾರೆ’  ಎಂದು ದೂರಿದ್ದಾರೆ.

ADVERTISEMENT

ಈ ಕುರಿತು ಮುಖ್ಯಾಧಿ ಕಾರಿ ರಾಜು ಅವರನ್ನು ಪ್ರಶ್ನಿಸಿದರೇ, ‘ಶಿಷ್ಟಾಚಾರ ಕಚೇರಿಯ ಅಧಿಕಾರಿ ಗಳೊಂದಿಗೆ ಈ ಕುರಿತು ಚರ್ಚಿಸಲಾ ಗುವುದು. ಅದರಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.