ADVERTISEMENT

ಮೆಣಸಿನಕಾಯಿ ಆವಕದಲ್ಲಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 9:22 IST
Last Updated 22 ಡಿಸೆಂಬರ್ 2017, 9:22 IST

ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ (ಎ.ಪಿ.ಎಂ.ಸಿ)ಗೆ ಗುರುವಾರ (ಡಿ.21) 43,202ಚೀಲ (12,960 ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿದ್ದು, ಪ್ರಸಕ್ತ ಹಂಗಾಮಿನ ಗರಿಷ್ಠ ಆವಕವಾಗಿದೆ. ಮುಂದಿನ ಸೋಮವಾರ (ಡಿ.25)ಕ್ಕೆ ಕ್ರಿಸ್ಮಸ್‌ ಹಬ್ಬದ ಪ್ರಯುಕ್ತ ಮಾರುಕಟ್ಟೆಗೆ ರಜೆ ಇದೆ. ಹೀಗಾಗಿ ಗುರುವಾರ ಆವಕದಲ್ಲಿ ಹೆಚ್ಚಳ ಕಂಡು ಬಂದಿದೆ ಎನ್ನಲಾಗಿದೆ.

ಕಳೆದ ಸೋಮವಾರ(ಡಿ.18) ಮಾರುಕಟ್ಟೆಗೆ 26,889 ಚೀಲ (8,066ಕ್ವಿಂಟಲ್‌) ಆವಕವಾಗಿತ್ತು. ಗುರುವಾರ ಮಾರುಕಟ್ಟೆಗೆ ಶೇ 60ರಷ್ಟು ಗುಂಟೂರು, ಶೇ 30ರಷ್ಟು ಡಬ್ಬಿ ಹಾಗೂ ಶೇ 10ರಷ್ಟು ಕಡ್ಡಿ ಮೆಣಸಿನಕಾಯಿ ಆವಕವಾಗಿದೆ. ಬ್ಯಾಡಗಿ ಕಡ್ಡಿ, ಡಬ್ಬಿ ಹಾಗೂ ಗುಂಟೂರ ತಳಿ ಮೆಣಸಿನಕಾಯಿ ಕನಿಷ್ಠ ಹಾಗೂ ಗರಿಷ್ಠ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಇಂದಿನ ಟೆಂಡರ್‌ ಪ್ರಕ್ರಿಯೆಯಲ್ಲಿ ಒಟ್ಟು 225 ಖರೀದಿ ವರ್ತಕರು ಪಾಲ್ಗೊಂಡಿದ್ದರು. 67,272 ಬಾರಿ ದರವನ್ನು ಕೋಟ್‌ ಮಾಡಿದ್ದಾರೆ. ಗುಣಮಟ್ಟದ ಕೊರತೆ ಇರುವ 235 ಲಾಟ್‌ಗಳಿಗೆ ಟೆಂಡರ್‌ ನಿರಾಕರಿಸಲಾಗಿದೆ ಎಂದು ಮಾರುಕಟ್ಟೆಯ ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.