ADVERTISEMENT

‘ಯೋಗದಿಂದ ಉತ್ತಮ ಆರೋಗ್ಯ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 5:44 IST
Last Updated 24 ಏಪ್ರಿಲ್ 2017, 5:44 IST

ರಾಣೆಬೆನ್ನೂರು: ‘ಯೋಗ ಮತ್ತು ಪ್ರಾಣಾ ಯಾಮದಿಂದ ಉತ್ತಮ ಆರೋಗ್ಯ ಹೊಂದಬಹುದು’ ಎಂದು ನಗರಸಭೆ ಸದಸ್ಯ ಶೇಖಪ್ಪ ಹೊಸಗೌಡ್ರ ಹೇಳಿದರು. ಇಲ್ಲಿನ ಮಾರುತಿ ನಗರದ ತುಂಗಾ ಜಲ ಚೌಡೇಶ್ವರಿ ದೇವಸ್ಥಾನದ ಆವರಣ ದಲ್ಲಿ ಭಾನುವಾರ ಬೆಳಿಗ್ಗೆ ಹಾವೇರಿ ಜಿಲ್ಲಾ ಪತಂಜಲಿ ಯೋಗ ಸಮಿತಿ, ನಿರಂತರ ಯೋಗ ಮತ್ತು ಪ್ರಾಣಾಯಾಮ ಏರ್ಪ ಡಿಸಿದ್ದ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್ ಸಿಬ್ಬಂದಿ ನಾಗಾರಾಜ ಮೈಲಾರ ಅವರು ಮಾತನಾಡಿ, ‘ಆಕಸ್ಮಿಕ ವಾಗಿ ಪತಂಜಲಿ ಯೋಗ ಸಂಪರ್ಕಕ್ಕೆ ಬಂದೆ. ಯೋಗದಲ್ಲಿ ಸಾಧನೆ ಮಾಡಿ 98 ಕೆಜಿ ತೂಕವನ್ನು 75 ಕೆಜಿಗೆ ಇಳಿಸಿಕೊಂಡಿ ದ್ದೇನೆ. ಸಕ್ಕರೆ ಕಾಯಿಲೆಯೂ ನಿಯಂ ತ್ರಣಕ್ಕೆ ಬಂದಿದೆ. ಎಲ್ಲರೂ ಯೋಗ ಮಾಡಿ ನಿರೋಗಿಗಳಾಗಬೇಕು’ ಎಂದು ಸಲಹೆ ನೀಡಿದರು.ಹಾವೇರಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ರವಿ ಬಿಜಾಪುರ ಮಾತನಾಡಿ, ‘ಯೋಗ ಮಾಡುವುದರಿಂದ ವೈದ್ಯರಿಂದಲೂ ವಾಸಿಯಾಗದ ಕಾಯಿಲೆಗಳು ಗುಣವಾಗುತ್ತವೆ’ ಎಂದರು.

ಭಾರತ ಸ್ವಾಭಿಮಾನ ಟ್ರಸ್ಟ್ ಅಧ್ಯಕ್ಷ ಆರ್.ಎನ್, ರಾಠೋಡ, ಜಿಲ್ಲಾ ಪತಂ ಜಲಿ ಸಮಿತಿ ಕಚೇರಿ ಪ್ರಭಾರಿ ಎಂ.ಬಿ. ಮೋಟಳ್ಳಿ, ನಿವೃತ್ತ ಶಿಕ್ಷಕ ಎಸ್.ಎಂ. ಪಾಟೀಲ, ಯೋಗ ಶಿಕ್ಷಕಿ ಶೋಭಾ ಸುಂಕಾಪುರ, ಗೀತಾ ಮಂಟೂರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.