ADVERTISEMENT

ಲೋಕ ಅದಾಲತ್‌ ಸದ್ಬಳಕೆಗೆ ಸಲಹೆ

ಕಾನೂನು ಸಾಕ್ಷರತಾ ರಥಯಾತ್ರೆಗೆ ಬುದಾರಪುರ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 8:47 IST
Last Updated 6 ಜುಲೈ 2015, 8:47 IST

ಬ್ಯಾಡಗಿ: ಜನತೆಯಲ್ಲಿ ಸಾಮಾನ್ಯ ಕಾನೂನಿನ ಅರಿವು ಹಾಗೂ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕಾನೂನು ರಥಯಾತ್ರೆ ಆಯ್ದ ಗ್ರಾಮಗಳಲ್ಲಿ ಸಂಚರಿಸಲಿದ್ದು, ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳುವಂತೆ ಸಿವಿಲ್‌ ನ್ಯಾಯಾಧೀಶ ಶ್ರೀನಿವಾಸ ಬುದಾರಪುರ ಹೇಳಿದರು.

ಪಟ್ಟಣದ ನ್ಯಾಯಾಲಯ ಆವರಣ ದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಬಹಳ ವರ್ಷಗಳಿಂದ ಹಾಗೆಯೆ ಉಳಿದಿದ್ದ ಸಮಸ್ಯೆಗಳಿಗೆ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಬಗೆ ಹರಿಸಿಕೊಳ್ಳಬಹುದಾಗಿದೆ.

ಇದರಿಂದ ಕಕ್ಷಿದಾರರಿಗೆ ಮತ್ತು ವಕೀಲರಿಗೆ ಅನುಕೂಲವಾಗಲಿದೆ. ಎಂದರು. ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಸ್‌.ಎನ್‌.ಚನ್ನಗೌಡ್ರ ಮಾತನಾಡಿದರು. ಪಿಎಸ್‌ಐ ಬಿ.ಪಿ. ಗಿರೀಶ, ವಕೀಲರ ಸಂಘದ ಉಪಾಧ್ಯಕ್ಷ ಪಿ.ಸಿ.ಶೀಗಿಹಳ್ಳಿ, ಕಾರ್ಯದರ್ಶಿ ಎಂ.ಸಿ. ಯರಗಲ್‌, ಸರ್ಕಾರಿ ಅಭಿಯೋಜಕಿ ಸಿಂಧು ಪೋತದಾರ, ಹಿರಿಯ ವಕೀಲ ರಾದ ವಿ.ಎಸ್‌. ಕಡಗಿ, ಪಿ.ಆರ್‌.ಮಠದ, ಜಿ.ಎಂ.ಅಂಗಡಿ, ಬಿ.ಎಸ್‌.ಚೂರಿ, ಎಫ್‌. ಎಂ. ಮುಳಗುಂದ, ಎನ್‌.ಸಿ. ಹುಣಸಿ ಮರದ ಇದ್ದರು.   ವಕೀಲರಾದ ಪಿ.ಬಿ.ಶಿಂಗಿ ಜನನ, ಮರಣ ನೋಂದಣಿ ಕಾಯ್ದೆ, ಎಸ್‌.ಎನ್‌. ಬಟ್ಟಲಕಟ್ಟಿ ಮೋಟಾರು ವಾಹನ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.

ಬಿ.ಸಿ.ಕಾರಗಿ, ಗಂಗಾಧರ ಹಿರೇಮಠ, ಶೋಭಾ ಹುಲ್ಮನಿ, ಶಿವಾನಂದ ಬಸನಗೌಡ್ರ, ಎಸ್.ವಿ. ಪಾಟೀಲ, ಎಂ.ಎಚ್.ಕಾಯಕದ, ಎಸ್. ಎಸ್.ಕೊಣ್ಣೂರು,  ಎಸ್. ಎಸ್.ಶೆಟ್ಟರ, ಸಿ.ಕೆ.ಕುಲಕರ್ಣಿ ಉಪಸ್ಥಿತರಿದ್ದರು. ಬಸವರಾಜ ಬನ್ನಿಹಟ್ಟಿ ಸ್ವಾಗತಿಸಿದರು. ಎಂ.ಕೆ.ವೀರನಗೌಡ್ರ ನಿರೂಪಿಸಿದರು. ಭಾರತಿ ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT