ADVERTISEMENT

ಹಾಲಿಗೂ ಸೈ, ಮಾಂಸಕ್ಕೂ ಜೈ ‘ಜಮ್ನಾಪಾರಿ’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 6:17 IST
Last Updated 23 ಏಪ್ರಿಲ್ 2017, 6:17 IST

‘ಬಡವರ ಕಾಮಧೇನು’ ಎನ್ನಲಾಗುವ ಮೇಕೆಗಳಲ್ಲಿ ಹತ್ತಾರು ತಳಿಗಳಿವೆ. ಕೆಲವು ತಳಿಗಳು ಮಾಂಸಕ್ಕೆ ಉತ್ತಮ ತಳಿಗಳಾಗಿದ್ದರೆ, ಮತ್ತೆ ಕೆಲವು ಹಾಲಿಗೆ ಹೆಸರು ಪಡೆದಿವೆ. ಆದರೆ, ಹಾಲು ಮತ್ತು ಮಾಂಸ ಎರಡಕ್ಕೂ ಉತ್ತಮ ತಳಿ ಎಂಬ ಹೆಸರು ಪಡೆದಿದೆ ಉತ್ತರ ಪ್ರದೇಶ ಮೂಲದ ಜಮ್ನಾಪಾರಿ ಮೇಕೆ ತಳಿ. ಹಿರೇಕೆರೂರ ತಾಲ್ಲೂಕಿನ ಚಿಕ್ಕೇ ರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಲ್ಲಾಪುರ ಗ್ರಾಮದ ರಹಮತ್‌ ಉಲ್ಲಾ ಫೀರ್‌ಸಾಬ್ ಗುಬ್ಬಿ ಈ ತಳಿಯ ಮೇಕೆ ಸಾಕಣಿಕೆಯಲ್ಲಿ ತೊಡಗಿದ್ದಾರೆ.

‘ಈ ಮೇಕೆಗಳನ್ನು ರಾಜಸ್ತಾನದಿಂದ ತಂದಿರುವೆ. ಸದ್ಯ 18 ಜಮ್ನಾಪಾರಿ ಮೇಕೆಗಳನ್ನು ಖರೀದಿಸಿದ್ದು, ಪ್ರತಿಯೊಂದಕ್ಕೆ ₹8  ಸಾವಿರದಿಂದ ₹18 ಸಾವಿರವರೆಗೆ ವೆಚ್ಚ ಮಾಡಿರುವೆ. ಹೊಸ ತಳಿ ಎನಿಸಿದರೂ ಇಲ್ಲಿನ ವಾತಾವರಣಕ್ಕೆ ಚೆನ್ನಾಗಿ ಹೊಂದಿ ಕೊಂಡಿವೆ. ಮರಿ ಹಾಕಿರುವ ಮೇಕೆ ತನ್ನ ಮರಿಗೆ ಹಾಲು ಕುಡಿಸಿದ ಬಳಿ ಕವೂ 1 ಲೀಟರ್ ತನಕ ಹಾಲು ನೀಡು ತ್ತಿದೆ’ ಎಂದು ರಹಮತ್‌ಉಲ್ಲಾ ಗುಬ್ಬಿ ತಿಳಿಸಿದರು.

‘ಮೊದಲೆಲ್ಲ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಈಗ 40–50 ಮೇಕೆಗಳನ್ನು ತಂದು ನಿರ್ವಹಣೆ ಮಾಡಿ ಇದನ್ನೇ ಮುಖ್ಯ ವೃತ್ತಿಯನ್ನಾಗಿ ಮಾಡಿಕೊಳ್ಳುವ ಯೋಚನೆಯಿದೆ. ಈ ಮರಿಗಳನ್ನು ನೋಡಲು ಬರುವವರು ತಮಗೆ ಒಂದು ಮರಿ ಬೇಕೆಂದು ಕೇಳಿ ಒಯ್ಯುತ್ತಿದ್ದಾರೆ’ ಎಂದು ಈ ತಳಿಗೆ ಇರುವ ಬೇಡಿಕೆ ಕುರಿತು ವಿವರಿಸಿದರು.

ADVERTISEMENT

ಏನು ವಿಶೇಷತೆ?: ಈ ಮೇಕೆಗಳ ಮೂಲ ಸ್ಥಾನ ಉತ್ತರ ಪ್ರದೇಶದ ಇಟಾವಾ ಜಿಲ್ಲೆ. ಹಾಲು ಮತ್ತು ಮಾಂಸಕ್ಕೆ ಉತ್ತಮ ತಳಿ ಎಂಬ ಖ್ಯಾತಿ ಇದಕ್ಕಿದೆ. ಉದ್ದದ ಕಾಲು, ಜೋತು ಬಿದ್ದ ಕಿವಿಗಳು, ಸದೃಢ ಮೈಕಟ್ಟಿನ ಈ ಮೇಕೆಗಳು ಸ್ಥಳೀಯ ಮೇಕೆಗಳಿಗಿಂತ ಭಿನ್ನ.‘ಹೋತವಾದರೆ ಗರಿಷ್ಠ 90 ಕೆ.ಜಿ.  ತನಕ ತೂಗುತ್ತದೆ. ಮೇಕೆಯಾದರೆ ಗರಿಷ್ಠ 60 ಕೆ.ಜಿ. ತೂಗುತ್ತವೆ. ಒಂದು ಬಾರಿ ಮರಿ ಹಾಕಿದರೆ, 600 ಕೆ.ಜಿ.ವರೆಗೆ ಹಾಲು ಕೊಡುತ್ತದೆ’ ಎನ್ನುತ್ತಾರೆ ತಜ್ಞರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.