ADVERTISEMENT

ನಾಂದಣಿ: ವೃಷಭಸೇನ ಸ್ವಾಮೀಜಿ ನೇಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 15:10 IST
Last Updated 28 ಸೆಪ್ಟೆಂಬರ್ 2018, 15:10 IST

ಹಾವೇರಿ: ಶಿವಮೊಗ್ಗ ಜಿಲ್ಲೆಯ ಸೊರಬದ ಲಕ್ಕವಳ್ಳಿ ಜೈನಮಠದ ವೃಷಭಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿಯನ್ನು ಮಹಾರಾಷ್ಟ್ರದ ನಾಂದಣಿ ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕ ಮಾಡುಬೇಕು ಎಂದು ಹಾವೇರಿ ಜಿಲ್ಲಾ ದಿಗಂಬರ ಜೈನ ಸಂಘ ಆಗ್ರಹಿಸಿದೆ.

ನಾಂದಣಿಯ ಜಿನಸೇನ ಭಟ್ಟಾರಕರು ಜಿನೈಕ್ಯರಾದ ಬಳಿಕ, ಶಾಖಾ ಮಠಾಧಿಕಾರಿಯಾದ ವೃಷಭಸೇನರನ್ನು ನೇಮಕ ಮಾಡಬೇಕು ಎಂದು ಈ ಹಿಂದೆಯೇ ನಿರ್ಧರಿಸಲಾಗಿತ್ತು. ಆದರೆ, ಈಗ ಗುಜರಾತಿನ ಸೌರಭ ಸೇನ ಭಟ್ಟಾರಕರನ್ನು ಉತ್ತರಾಧಿಕಾರಿ ಮಾಡಲು ಮುಂದಾಗುತ್ತಿದ್ದಾರೆ. ವೃಷಭಸೇನ ಭಟ್ಟಾರಕ ಪಟ್ಟಾಚಾರ್ಯರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡದೇ ಇದ್ದರೆ, ರಾಜ್ಯದ ಜೈನ ಸಮುದಾಯದವರು ಹೋರಾಟಕ್ಕೆ ಮುಂದಾಗಲಿದ್ದಾರೆ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಮಾಣಿಕಚಂದ ಎಸ್‌ ಲಾಡರ ಹೇಳಿದರು.

ಬಿಹಾರದಲ್ಲಿರುವ ಜೈನರ ಪವಿತ್ರ ಕೇಂದ್ರವಾದ ಶೀಖರ್ಜಿಯಲ್ಲಿ ಸರ್ಕಾರವು ಹೆಲಿಪ್ಯಾಡ್ ನಿರ್ಮಾಣ ಮಾಡಲು ಹೊರಟಿದೆ. ಅದು ತೀರ್ಥಂಕರರ ಧ್ಯಾನದ ಸ್ಥಳವಾಗಿದೆ. ಅದನ್ನು ಅಪವಿತ್ರಗೊಳಿಸಬಾರದು ಎಂದು ಅವರು ಒತ್ತಾಯಿಸಿದರು.

ADVERTISEMENT

ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ ಸಾತನಗೊಂಡ, ಗೌರವಾಧ್ಯಕ್ಷ ರಮೇಶ ಕಳಸೂರ, ಸಂತೋಷ ಲಾಬಗೊಂಡ, ಶಶಿಧರ ವೆಂಕಪ್ಪ ಗೌಡರ, ಅಜಿತ್ ಸಿದ್ದಣ್ಣನವರ, ಅನಂತ ಹಳವಣ್ಣನವರ, ಸುರೇಶ ನಡುವಿನಮನಿ, ನಾಗರಾಜ ಕಂಚನಕೋಟಿ, ಮಹಾವೀರ ಮಾಸಣಗಿ, ಭರತೇಶ ಜಗಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.