ADVERTISEMENT

‘ಅಲ್ಪಸಂಖ್ಯಾತರ ಏಳ್ಗೆಗೆ ಕಾಂಗ್ರೆಸ್‌ ಬದ್ಧ’

​ಪ್ರಜಾವಾಣಿ ವಾರ್ತೆ
Published 27 ಮೇ 2017, 7:10 IST
Last Updated 27 ಮೇ 2017, 7:10 IST

ಕಲಬುರ್ಗಿ: ‘ದೇಶದ ಅಲ್ಪಸಂಖ್ಯಾತರ ಏಳ್ಗೆ ಕಾಂಗ್ರೆಸ್‌ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ. ಅಲ್ಪಸಂಖ್ಯಾತರು ಮತ್ತು ದಮನಿತರ ಕಲ್ಯಾಣಕ್ಕೆ ಕಾಂಗ್ರೆಸ್ ಬದ್ಧವಿದೆ’ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಇಲಿಯಾಸ್‌ ಸೇಠ್ ಬಾಗವಾನ್‌ ತಿಳಿಸಿದರು.

ನಗರದ ಮುಸ್ಲಿಂ ಚೌಕ್‌ ಬಳಿ ಗುರುವಾರ ಬೈಕ್‌ ರ್‌್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ದೇಶದ ಸಮಗ್ರ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡಿರುವ ಕಾಂಗ್ರೆಸ್‌ ಅಲ್ಪಸಂಖ್ಯಾತರ ಜೀವನ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಂಸದ ಮಲ್ಲಿಕಾರ್ಜುನ ಖರ್ಗೆಯವರ ದೂರದೃಷ್ಟಿಯಿಂದ ಹೈದರಾಬಾದ್ ಕರ್ನಾಟಕ ಪ್ರಗತಿಪಥದಲ್ಲಿ ಸಾಗಿದೆ’ ಎಂದರು.

ವಿವಿಧ ಪಕ್ಷಗಳು ಮತ್ತು ಸಂಘಟನೆಗಳ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಅಬೂಬಕರ್ ಕಾಲೊನಿಯ ವಾರ್ಡ್‌ ಸಂಖ್ಯೆ 13ರಲ್ಲಿ ಕಾಂಗ್ರೆಸ್‌ ಕಚೇರಿ ಉದ್ಘಾಟಿಸಲಾಯಿತು. ಮುಖಂಡರಾದ ಮಾಜಿದ್ ಪ್ಯಾರೆ, ಯೂನೂಸ್ ಅಲಿ, ಬಾಬಾ ಖಾನ್, ಸಮದ್ ಖಾನ್, ಸಮದ ಕಮ್ಮು,  ಬಾಬಾ ನಜರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.