ADVERTISEMENT

ತೊಗರಿಗೆ ₹7,500 ಬೆಂಬಲ ಬೆಲೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 10:53 IST
Last Updated 31 ಡಿಸೆಂಬರ್ 2017, 10:53 IST

ಕಲಬುರ್ಗಿ: ಕ್ವಿಂಟಲ್ ತೊಗರಿಗೆ ₹7,500 ಬೆಂಬಲ ಬೆಲೆ ನಿಗದಿ ಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌)ದವರು ಹಾಗೂ ರೈತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

‘ವಿದೇಶಗಳಿಂದ ಆಮದು ಮಾಡಿಕೊಳ್ಳುವ ಬೇಳೆ ಕಾಳುಗಳ ಮೇಲೆ ಶೇ 30ರಷ್ಟು ಆಮದು ಸುಂಕ ವಿಧಿಸಬೇಕು. ತೊಗರಿ, ಉದ್ದು, ಹೆಸರು ಸೇರಿ ಕೆಎಂಎಫ್‌ ಮಾದರಿಯಲ್ಲಿ ಹೊಸದಾಗಿ ತೊಗರಿ ಮಂಡಳಿಯನ್ನು ರಚಿಸಬೇಕು. ಕನಿಷ್ಠ 5 ಲಕ್ಷ ಟನ್ ತೊಗರಿ ಖರೀದಿ ಗುರಿ ನಿಗದಿಪಡಿಸಬೇಕು. 2015–16ರಲ್ಲಿ ಜಿಲ್ಲಾಡಳಿತದ ತಪ್ಪಿನಿಂದಾಗಿ ವಿಮೆ ಮಂಜೂರಾಗದ ಬೋಧನ, ಕೌಲಗಾ ಮತ್ತು ನಿಂಬಾಳ ಗ್ರಾಮಗಳ ರೈತರಿಗೆ ಬೆಳೆ ವಿಮೆ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಬಾರದ್ದರಿಂದ ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆ ನಡೆಸಿದರು. ಇದರಿಂದಾಗಿ ಕೆಲಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತು.

ADVERTISEMENT

ಮುಖಂಡರಾದ ಮಾರುತಿ ಮಾನ್ಪಡೆ, ಮೌಲಾ ಮುಲ್ಲಾ, ಮಂಜುನಾಥ ಗೌಡ, ಮುನೀರ್ ಹಾಸ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.