ADVERTISEMENT

‘ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಆದ್ಯತೆ’

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 5:42 IST
Last Updated 21 ಏಪ್ರಿಲ್ 2017, 5:42 IST

ಆಳಂದ: ‘ರಾಜ್ಯ ಸರ್ಕಾರವು ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಹೈದರಾಬಾದ್‌ ಕರ್ನಾಟಕ ಭಾಗದ ವಿವಿಧ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದೆ. ಅದರಂತೆ ಭೀಮಾ ನದಿಯಿಂದ ಅಮರ್ಜಾ ಜಲಾಶಯ ಕಾಮಗಾರಿ ಕುರಿತು ರೂಪರೇಷೆ ಸಿದ್ದಗೊಳಿಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ರಾಜ್ಯ ಸರ್ಕಾರವು ಪ್ರಸಕ್ತ ಬಜೆಟ್‌ ನಲ್ಲಿ ಕೊಡುಗೆಗಳು ನೀಡಿದ ಹಿನ್ನೆಲೆಯಲ್ಲಿ ಪಟ್ಟಣದ ಗುರುಭವನದಲ್ಲಿ ಈಚೆಗೆ ತಾಲ್ಲೂಕು ನಾಗರೀಕ ವೇದಿಕೆಯು ಈಚೆಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.‘ರಾಜ್ಯ ಸರ್ಕಾರದ ಬಗ್ಗೆ ಜನರಲ್ಲಿ ತಪ್ಪು ಮೂಡಿಸುವ ಪ್ರಯತ್ನ ನಡೆದಿದೆ. ಸರ್ಕಾರವು ಬರೀ ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪ ಸಂಖ್ಯಾತರ ಪರವಿದೆಯೆಂದು ಬಿಂಬಿಸಲಾಗುತ್ತಿದೆ. ನೀರಾವರಿ ಯೋಜನೆಗಳ ಅಭಿವೃದ್ಧಿ, ತೊಗರಿ ಖರೀದಿ, ಹಾಲಿನ ಬೆಂಬಲ ಬೆಲೆ ಹೆಚ್ಚಳ, 371(ಜೆ) ಅಡಿ ಅಭಿವೃದ್ಧಿ ಕಾರ್ಯ ಮುಂತಾದವು ಕೈಗೊಳ್ಳಲಾಗಿದೆ’ ಎಂದರು.

‘ಸಂಪೂರ್ಣ ಪಾನ ನಿಷೇಧಕ್ಕೆ ರಾಜ್ಯದಲ್ಲಿ ಕಾಲ ಪಕ್ವವಾಗಿಲ್ಲ. ಕುಡಿತದ ದುಷ್ಪರಿಣಾಮ ಕುರಿತು ಜನಜಾಗೃತಿ ಮೂಡಿಸಬೇಕು. ಆದರೆ ಅಕ್ರಮ ಮದ್ಯ     ಮಾರಾಟ ತಡೆಗೆ ಜಿಲ್ಲಾಡಳಿತವು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ’ ಎಂದರು.ಶಾಸಕ ಬಿ.ಆರ್.ಪಾಟೀಲ ಮಾತ ನಾಡಿ, ‘ಆಳಂದ ತಾಲ್ಲೂಕಿನ ಪ್ರಗತಿಗೆ ಬಜೆಟ್‌ ದೊಡ್ಡ ಕೊಡುಗೆಯಾಗಿದೆ. ₹ 220 ಕೋಟಿ ಅನುದಾನದಲ್ಲಿ ಆರಂಭಗೊಂಡ ಅಮರ್ಜಾ ನದಿಗೆ ಸೊನ್ನ ಬಾರೇಜ್‌ನಿಂದ ಪೈಪ್‌ಲೈನ್‌ ಮೂಲಕ ನೀರು ಭರ್ತಿ ಕಾರ್ಯ ಕೈಗೊ ಳ್ಳಲಾಗುವುದು. ತಾಲ್ಲೂಕಿನ ಕೃಷಿ ಅಭಿ ವೃದ್ಧಿ ಜೊತೆ ಶಾಶ್ವತ ಕುಡಿಯುವ ನೀರಿಗೆ ಪರಿಹಾರ ದೊರೆಯಲಿದೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮ ಪ್ಯಾಟಿ ಮತ್ತು ಯುವ ಮುಖಂಡ ಜಾವೀದ್‌ ಬಾಗವಾನ ಮಾತನಾಡಿದರು. ಮುಖಂಡ ಮಲ್ಲೇಶಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದರು, ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ, ಉಪಾಧ್ಯಕ್ಷ ಅಜಗರಲಿ ಹವಾಲ್ದಾರ್, ಸಿದ್ದಣ್ಣಾ ಮಾಸ್ತರಶೇಗಜೀ, ಗುರುಶರಣ ಪಾಟೀಲ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು, ತಾಲ್ಲೂಕು ಪಂಚಾಯಿತಿ ಇಒ ಡಾ. ಸಂಜಯ ರೆಡ್ಡಿ, ಮಹಿಬೂಬ ಪಾಶಾ, ಪಾಶಾ ಜರ್ಧಿ, ಶರಣಬಸಪ್ಪ ಭೂಸನೂರು, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.