ADVERTISEMENT

ಪಂಚಾಕ್ಷರಿ ಸ್ವಾಮೀಜಿ ಪಟ್ಟಾಧಿಕಾರಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 6:43 IST
Last Updated 14 ಜುಲೈ 2017, 6:43 IST

ಸೇಡಂ: ‘ಪಟ್ಟಣದ ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಅವರ ಪಟ್ಟಾಧಿಕಾರ ಕಾರ್ಯಕ್ರಮ 2018ರ ಜನವರಿಯಲ್ಲಿ ನಡೆಸುವ ಉದ್ದೇಶವಿದೆ’ ಎಂದು ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ತಿಳಿಸಿದರು.

ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಪಟ್ಟಾಧಿಕಾರದ ನಿಮಿತ್ತ ವಿವಿಧ ಸಮಿತಿಗಳ ರಚನೆಗಾಗಿ ಈಚೆಗೆ ಕರೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘11 ದಿನಗಳ ಕಾಲ ಪಟ್ಟಾಧಿಕಾರದ ಕಾರ್ಯಕ್ರಮ ನಡೆಸಲು ಪೂರ್ವಯೋಜನೆ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳ ರಚಿಸುವ ಅವಶ್ಯಕತೆ ಇದೆ. ಮಠದ ಸದ್ಭಕ್ತರು ಕಾರ್ಯಕ್ರಮದಲ್ಲಿ ತನು, ಮನ ಹಾಗೂ ಧನದಿಂದ ಪಾಲ್ಗೊಳ್ಳಬೇಕು’ ಎಂದರು.

ಮುಖಂಡ ಧನಶೆಟ್ಟಿ ಸಕ್ರಿ ಮಾತನಾಡಿ,‘ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಸಮಾಜದ ಜನರನ್ನು ಮುಕ್ತ ವಾಗಿ ಆಹ್ವಾನಿಸಬೇಕು. ಅವರಿಗೂ ಕಾರ್ಯಕ್ರಮದಲ್ಲಿ  ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕು. ಕೆಲವೇ ಜನರನ್ನು ಕರೆದು ಸಮಿತಿ ರಚಿಸುವುದು ಸೂಕ್ತವಲ್ಲ.  ಮಠದ ಸದ್ಭಕ್ತರು ಸೇರಿದಂತೆ ಎಲ್ಲರ ಅಭಿಪ್ರಾಯ ಪಡೆಯಬೇಕು’ ಎಂದರು.

ADVERTISEMENT

ಸ್ವಾಗತ ಸಮಿತಿ, ದಾಸೋಹ ಸಮಿತಿ, ಪ್ರಚಾರ ಸಮಿತಿ, ಆರ್ಥಿಕ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.  ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಸದಾನಂದ ಬೂದಿ, ಪ್ರಕಾಶ ಊಡಗಿ, ಅನಂತರೆಡ್ಡಿ ಪಾಟೀಲ, ಸಿದ್ದಪ್ಪ ತಳ್ಳಳ್ಳಿ, ಧನಶೆಟ್ಟಿ ಸಕ್ರಿ, ಈರಣ್ಣ ಮಾದೆ ನೋರ, ಡಾ. ಸಂತೋಷ ತಳ್ಳಳ್ಳಿ, ನಾಗಯ್ಯ ಸ್ವಾಮಿ ಬೊಮ್ಮನಳ್ಳಿ, ನಾಗೀಂದ್ರಪ್ಪ ಡೊಳ್ಳಾ, ಶಂಕ್ರಪ್ಪ ಕೋಸಗಿ, ಶ್ರೀಶೈಲ್ ಬಿರಾದರ, ಶಿವರಾಯ ಭೋವಿ, ಸಿದ್ದಯ್ಯ ಬಂಡಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.