ADVERTISEMENT

ಐದು ತಂಡಗಳಿಗೆ ಮುನ್ನಡೆ

ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 11:15 IST
Last Updated 15 ಫೆಬ್ರುವರಿ 2017, 11:15 IST
ಸೋಮವಾರಪೇಟೆಯಲ್ಲಿ ನಡೆಯುತ್ತಿರುವ ಕಬಡ್ಡಿ ಟೂರ್ನಿಯಲ್ಲಿ ಎಚ್ಎಂಟಿ ಹಾಗೂ ರಾಮನಗರ ತಂಡಗಳ ನಡುವಿನ ಪೈಪೋಟಿಯ ರೋಚಕ ಕ್ಷಣ
ಸೋಮವಾರಪೇಟೆಯಲ್ಲಿ ನಡೆಯುತ್ತಿರುವ ಕಬಡ್ಡಿ ಟೂರ್ನಿಯಲ್ಲಿ ಎಚ್ಎಂಟಿ ಹಾಗೂ ರಾಮನಗರ ತಂಡಗಳ ನಡುವಿನ ಪೈಪೋಟಿಯ ರೋಚಕ ಕ್ಷಣ   

ಸೋಮವಾರಪೇಟೆ: ಐದು ತಂಡಗಳು ತಾಲ್ಲೂಕು ಒಕ್ಕಲಿಗರ ಯುವ ವೇದಿಕೆ, ಕರ್ನಾಟಕ ರಾಜ್ಯ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ ಸೋಮವಾರ ಪ್ರಾರಂಭವಾದ 2ನೇ ವರ್ಷದ ರಾಜ್ಯಮಟ್ಟದ ಒಕ್ಕಲಿಗರ ಕಪ್ ಹೊನಲು ಬೆಳಕಿನ ಪುರುಷರ ಕಬಡ್ಡಿ ಟೂರ್ನಿಯಲ್ಲಿ ಮುಂದಿನ ಹಂತ ತಲುಪಿದವು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಟೂರ್ನಿಯ ಮೊದಲ ದಿನ ವೈಎಫ್ಎ ಬೆಂಗಳೂರು ಜರಗನಹಳ್ಳಿ, ಆರ್ಎಫ್.ಡಬ್ಲ್ಯೂ, ಸೆಂಟ್ರಲ್ ಎಕ್ಸೈಜ್, ಎಚ್.ಎಂ.ಟಿ. ಕಾಲೋನಿ ಬಾಯ್ಸ್ ತಂಡಗಳು ಮೊದಲ ಹಂತದಲ್ಲಿ ಗೆಲುವು ಸಾಧಿಸಿದವು.

ಜರಗನಹಳ್ಳಿ ತಂಡ ಸೋಮವಾರಪೇಟೆ ಸತ್ಯ ಸ್ಪೋರ್ಟ್ಸ್  ಕ್ಲಬ್ ತಂಡದ ವಿರುದ್ದ 16 ಪಾಯಿಂಟ್‌ಗಳಿಂದ ಗೆಲುವು ಸಾಧಿಸಿತು. ಪ್ರಥಮಾರ್ಧದಲ್ಲಿ ವಿಜಯಿ ತಂಡ 24 ಪಾಯಿಂಟ್‌ ಪಡೆದರೆ ಸೋಮವಾರಪೇಟೆ ತಂಡ 6 ಪಾಯಿಂಟ್‌ ಪಡೆಯಿತು.

ದ್ವಿತೀಯಾರ್ಧದಲ್ಲಿ ಸೋಮವಾರ ಪೇಟೆ ತಂಡ  21 ಪಾಯಿಂಟ್‌ ಪಡೆಯಿತು. 19 ಪಾಯಿಂಟ್‌ ಪಡೆದ ಜರಗನ ಹಳ್ಳಿ ತಂಡ ಗೆಲುವು ದಾಖಲಿಸಿತು. ಎರಡನೇ ಪಂದ್ಯದಲ್ಲಿ ಆರ್‌ಡಬ್ಲ್ಯು ಬೆಂಗಳೂರು,  ಕೂರ್ಗ್‌ ಮಾರುತಿ ತಂಡದ ವಿರುದ್ದ 27 ಪಾಯಿಂಟ್‌ಗಳಿಂದ ಗೆಲುವು ಪಡೆಯಿತು. ಮೂರನೇ ಪಂದ್ಯದಲ್ಲಿ ಸೆಂಟ್ರಲ್ ಎಕ್ಸೈಜ್ ತಂಡ, ಉದಯ ಯಡೂರು ತಂಡದ ವಿರುದ್ದ 46 ಪಾಯಿಂಟ್‌ಗಳಿಂದ ಗೆಲುವು ಪಡೆಯಿತು. ನಾಲ್ಕನೇ ಪಂದ್ಯದಲ್ಲಿ ಎಚ್.ಎಂ.ಟಿ ತಂಡ  ರಾಮನಗರ ತಂಡವನ್ನು 22 ಪಾಯಿಂಟ್‌ಗಳಿಂದ ಸೋಲಿಸಿತು. 

ಐದನೇ ಪಂದ್ಯದಲ್ಲಿ ಎಚ್.ಎಂ.ಟಿ. ಕಾಲೋನಿ ಬಾಯ್ಸ್ ತಂಡ, ರಂಜಿತ್ ಫ್ರೆಂಡ್ಸ್ ತಂಡದ ವಿರುದ್ದ 19 ಪಾಯಿಂಟ್‌ಗಳಿಂದ ಗೆಲುವು ದಾಖಲಿಸಿತು. ಪ್ರಥಮಾರ್ಧದಲ್ಲಿ ವಿಜೇತ ತಂಡ 23 ಪಾಯಿಂಟ್‌ ಪಡೆದರೆ ರಂಜಿತ್ ಫ್ರೆಂಡ್ಸ್ ತಂಡ 8 ಪಾಯಿಂಟ್‌ ಗಳಿಸಿತು. ದ್ವಿತೀಯಾರ್ಧದಲ್ಲಿ ವಿಜೇತ ತಂಡ 14 ಪಾಯಿಂಟ್‌ ಪಡೆದರೆ ರಂಜಿತ್ ತಂಡ 8 ಪಾಯಿಂಟ್‌ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.