ADVERTISEMENT

ಕುಲ್ಲೇಟಿರ ಕಪ್ ಹಾಕಿ: 16 ತಂಡಗಳು ಮುಂದಿನ ಸುತ್ತಿಗೆ

ಇಮ್ಮಡಿಗೊಂಡ ಕೊಡವ ಕುಟುಂಬಗಳ ನಡುವಿನ ಹಾಕಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 10:15 IST
Last Updated 23 ಏಪ್ರಿಲ್ 2018, 10:15 IST
ನಾಪೋಕ್ಲುವಿನ ಜನರಲ್‌ ಕೆ.ಎಸ್‌.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರೈಡ್‌ ಆಫ್‌ ಕೂರ್ಗ್‌ ಟ್ರೋಫಿ ಹಾಕಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದೆಹಲಿಯ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು
ನಾಪೋಕ್ಲುವಿನ ಜನರಲ್‌ ಕೆ.ಎಸ್‌.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರೈಡ್‌ ಆಫ್‌ ಕೂರ್ಗ್‌ ಟ್ರೋಫಿ ಹಾಕಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದೆಹಲಿಯ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು   

ನಾಪೋಕ್ಲು: ಇಲ್ಲಿನ ಜನರಲ್‌ ಕೆ.ಎಸ್‌.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರೈಡ್‌ ಆಫ್‌ ಕೂರ್ಗ್‌ ಟ್ರೋಫಿ ಹಾಕಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದೆಹಲಿಯ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಭಾನುವಾರ ಸೌತ್‌ ಸೆಂಟ್ರಲ್‌ ರೈಲ್ವೆ ತಂಡದ ವಿರುದ್ದ ನಡೆದ ಫೈನಲ್‌ ಪಂದ್ಯದಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ತಂಡ ಗೆಲುವು ಸಾಧಿಸಿತು. ದೇಶದ ನಾಲ್ಕು ಪ್ರತಿಷ್ಠಿತ ಹಾಕಿ ತಂಡಗಳು ಪಾಲ್ಗೊಂಡಿದ್ದ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಮಡಿಕೇರಿಯಲ್ಲಿ ನಡೆದಿದ್ದು, ಅಂತಿಮ ಪಂದ್ಯ ಕುಲ್ಲೇಟಿರ ಹಾಕಿ ಕಪ್‌ ಟೂರ್ನಿಯ ಮೈದಾನದಲ್ಲಿ ಭಾನುವಾರ ಜರುಗಿತು.

ಪಂದ್ಯ ಉದ್ಘಾಟಿಸಿದ ಒಲಿಂಪಿಯನ್‌

ADVERTISEMENT

ಪಂದ್ಯವನ್ನು ಒಲಿಂಪಿಯನ್‌ ಅಂಜಪರವಂಡ ಸುಬ್ಬಯ್ಯ ಉದ್ಘಾಟಿಸಿದರು. ಪಂದ್ಯದಲ್ಲಿ ಎರಡು ತಂಡಗಳು 3-3 ಗೋಲುಗಳಿಂದ ಸಮಬಲ ಸಾಧಿಸಿದವು. ನಂತರ ಸಡನ್ ಡೆತ್ ನಿಯಮದ ಆಟದಲ್ಲಿ ಇಂಡಿಯನ್ ಆಯಿಲ್ ತಂಡ ಒಂದು ಗೋಲಿನಿಂದ ಜಯ ಗಳಿಸಿ ಪ್ರಶಸ್ತಿ ಪಡೆಯಿತು. ವಿಜೇತ ತಂಡಗಳಿಗೆ ಗಣ್ಯರು ಪ್ರಶಸ್ತಿ ವಿತರಿಸಿದರು.

ಭಾನುವಾರದ ಪಂದ್ಯಗಳಲ್ಲಿ ಅಜ್ಜೆಟ್ಟಿರ, ಬಾಚಿರ, ಅರಮಣಮಡ, ಅಲ್ಲಂಡ, ಪೆಮ್ಮಂಡ, ಮುಕ್ಕಾಟಿರ, ಕಲಿಯಂಡ, ಬೊಳಕಾರಂಡ, ಚೋಳಂಡ, ಉದಿಯಂಡ, ಮುಂಡ್ಯೋಳಂಡ, ಚೆರುವಾಳಂಡ, ಕರೋಟಿರ, ತೇನಿರ, ಮಳವಂಡ, ಚೇಂದ್ರಿಮಡ ತಂಡಗಳು ಮುನ್ನಡೆ ಸಾಧಿಸಿದವು. ಅಜ್ಜೆಟ್ಟಿರ ಮತ್ತು ಪೊಂಜಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಜ್ಜೆಟ್ಟಿರ ತಂಡವು ಪೊಂಜಂಡ ತಂಡವನ್ನು 5-0 ಗೋಲಿನ ಅಂತರದಿಂದ ಮಣಿಸಿತು. ಅಜ್ಜೆಟ್ಟಿರ ತಂಡದ ಪರ ಶಂಭು ಪಳಂಗಪ್ಪ ಹಾಗೂ ಮೋಹನ್ ಸೋಮಯ್ಯ ತಲಾ ಎರಡೆರಡು ಗೋಲು ದಾಖಲಿಸಿದರೆ, ಪೊನ್ನಣ್ಣ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.

ಬಾಚಿರ ಮತ್ತು ಚೆರಿಯಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾಚಿರ ತಂಡವು ಚೆರಿಯಪಂಡ ತಂಡವನ್ನು 5-1 ಗೋಲಿನ ಅಂತರದಿಂದ ಪರಾಭವಗೊಳಿಸಿತು. ಬಾಚಿರ ತಂಡದ ಪರ ಬಿದ್ದಪ್ಪ ಹಾಗೂ ಪೊನ್ನಣ್ಣ ತಲಾ ಎರಡೆರಡು ಗೋಲು, ಶರತ್ ಒಂದು ಗೋಲು ದಾಖಲಿಸಿದರೆ, ಚೆರಿಯಪಂಡ ತಂಡದ ಪರ ಚರಣ್ ಒಂದು ಗೋಲು ದಾಖಲಿಸಿದರು. ಅರಮಣಮಡ ಮತ್ತು ಪೆಬ್ಬಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅರಮಣಮಡ ತಂಡವು ಪೆಬ್ಬಟ್ಟಿರ ತಂಡವನ್ನು 5-0 ಗೋಲಿನಿಂದ ಸೋಲಿಸಿತು.

ಅರಮಣಮಡ ತಂಡದ ಪರ ಜಗನ್ ಎರಡು, ನಿತೀಶ್, ಅಜಯ್, ಚರ್ಮಣ್ಣ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಮಚ್ಚಾರಂಡ ಮತ್ತು ಅಲ್ಲಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಲ್ಲಂಡ ತಂಡವು ಮಚ್ಚಾರಂಡ ತಂಡವನ್ನು ಟೈ ಬ್ರೇಕರ್‌ನಲ್ಲಿ 5-3 ಗೋಲಿನ ಅಂತರದಿಂದ ಮಣಿಸಿತು. ಕುಳ್ಳಚಂಡ ಮತ್ತು ಪೆಮ್ಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಪೆಮ್ಮಂಡ ತಂಡವು ಕುಳ್ಳಚಂಡ ತಂಡವನ್ನು 4-0 ಗೋಲಿನ ಅಂತರದಿಂದ ಮಣಿಸಿತು. ತಂಡದ ಪರ ಸೋಮಣ್ಣ ಮೂರು ಗೋಲು, ಬೋಪಣ್ಣ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.

ಮುಕ್ಕಾಟಿರ (ಕಡಗದಾಳು) ಮತ್ತು ಚೊಟ್ಟೆರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಚೊಟ್ಟೆರ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ತಂಡದ ಪರ ಅಶ್ವಿನ್ ಚರ್ಮಣ್ಣ ಹಾಗೂ ರೋಹನ್ ಚಿನ್ನಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಕಾಂಡೆರ ಮತ್ತು ಕಲಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಲಿಯಂಡ ತಂಡವು ಕಾಂಡೆರ ತಂಡವನ್ನು 4-1 ಗೋಲಿನಿಂದ ಸೋಲಿಸಿತು. ಕಲಿಯಂಡ ತಂಡದ ಪರ ಮಾಚಯ್ಯ ಎರಡು, ರಾಜಾ ಚಿಣ್ಣಪ್ಪ ಹಾಗೂ ಬಿದ್ದಪ್ಪ ತಲಾ ಒಂದೊಂದು ಗೋಲು ದಾಖಲಿಸಿದರೆ, ಕಾಂಡೆರ ತಂಡದ ಪರ ಬಾದಲ್ ಬಿದ್ದಪ್ಪ ಒಂದು ಗೋಲು ದಾಖಲಿಸಿದರು.

ಬೊಳಕಾರಂಡ ಮತ್ತು ಪುಲ್ಲಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳಕಾರಂಡ ತಂಡವು ಪುಲ್ಲಂಗಡ ತಂಡವನ್ನು 1-0 ಗೋಲಿನ ಅಂತರದಿಂದ ಮಣಿಸಿತು. ಬೊಳಕಾರಂಡ ತಂಡದ ಪರ ದಿಲನ್ ಬಿದ್ದಪ್ಪ ಒಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಚೋಳಂಡ ಮತ್ತು ಚೋನಿರ ತಂಡಗಳ ನಡುವಿನ ಪಂದ್ಯದಲ್ಲಿ ಚೋಳಂಡ ತಂಡವು ಚೋನಿರ ತಂಡವನ್ನು 3-0 ಗೋಲಿನ ಅಂತರದಿಂದ ಸೋಲಿಸಿತು.

ಚೋಳಂಡ ತಂಡದ ಪರ ಧನು ಅಚ್ಚಪ್ಪ, ರಶನ್ ಪೂವಯ್ಯ, ವರುಣ್ ಗಣಪತಿ ತಲಾ ಒಂದೊಂದು ಗೋಲು ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ದೇಯಂಡ ಮತ್ತು ಉದಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಉದಿಯಂಡ ತಂಡವು ದೇಯಂಡ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ಕನ್ನಿಕಂಡ ತಂಡದ ವಾಕ್ಓವರ್ನಿಂದ ಮುಂಡ್ಯೋಳಂಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಕುಪ್ಪಂಡ ಮತ್ತು ಚೆರುವಾಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೆರುವಾಳಂಡ ತಂಡವು ಕುಪ್ಪಂಡ ತಂಡವನ್ನು ಟೈ ಬ್ರೇಕರ್‌ನಲ್ಲಿ 3-2 ಗೋಲಿನಿಂದ ಸೋಲಿಸಿತು. ಎಳ್ತಂಡ ಮತ್ತು ಕರೋಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರೋಟಿರ ತಂಡವು ಎಳ್ತಂಡ ತಂಡವನ್ನು 1-0 ಗೋಲಿನಿಂದ ಸೋಲಿಸಿತು.

ತಂಡದ ಪರ ಬೋಪಣ್ಣ ಒಂದು ಗೋಲು ದಾಖಲಿಸಿದರು. ಪಾಲೆಕಂಡ ತಂಡದ ವಾಕ್ಓವರ್‌ನಿಂದ ತೇನಿರ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಕನ್ನಂಬಿರ ಮತ್ತು ಮಳವಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಳವಂಡ ತಂಡವು ಕನ್ನಂಬಿರ ತಂಡವನ್ನು ಟೈ ಬ್ರೇಕರ್‌ನಲ್ಲಿ 4-2 ಗೋಲಿನ ಅಂತರದಿಂದ ಮಣಿಸಿತು. ಬೊಪ್ಪಡತಂಡ ಮತ್ತು ಚೇಂದ್ರಿಮಡ ತಂಡಗಳ ನಡುವಿನ ಪಂದ್ಯದಲ್ಲಿ ಚೇಂದ್ರಿಮಡ ತಂಡವು ಬೊಪ್ಪಡತಂಡ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ಚೇಂದ್ರಿಮಡ ತಂಡದ ಪರ ಮುತ್ತಣ್ಣ ಎರಡು, ಸೋಮಣ್ಣ ಒಂದು ಗೋಲು ದಾಖಲಿಸುವುದರ ಮೂಲಕ ತಂಡದ ಗೆಲುವಿಗೆ ಕಾರಣರಾದರು.

ಸೋಮವಾರದ ಪಂದ್ಯಗಳು

ಮೈದಾನ-1

ಬೆಳಿಗ್ಗೆ 9 ಗಂಟೆಗೆ ಅಜ್ಜಿನಂಡ - ಮಾಳೇಟಿರ (ಕೆದಮಳ್ಳೂರು)
10ಕ್ಕೆ ಪಾಂಡಂಡ - ಮಳಚಿರ
11ಕ್ಕೆ ಇಟ್ಟಿರ - ಮಾದಂಡ
12ಕ್ಕೆ ಅಪ್ಪಚ್ಚಂಗಡ - ಮಾರ್ಚಂಡ
1ಕ್ಕೆ ಮೇಕೇರಿರ - ಅಮ್ಮಣಿಚಂಡ
2ಕ್ಕೆ ಕಲ್ಲೇಂಗಡ - ಕರವಂಡ

ಮೈದಾನ-2

‌ಬೆಳಿಗ್ಗೆ 9 ಗಂಟೆಗೆ ಕುಂಚೆಟ್ಟಿರ - ನಾಯಕಂಡ
10ಕ್ಕೆ ತಡಿಯಂಡ - ಮಾಪಂಗಡ
11ಕ್ಕೆ ಪಾರುವಂಗಡ - ಬಿದ್ದಾಟಂಡ
12ಕ್ಕೆ ಕಾಳಿಮಡ - ಮೊಣ್ಣಂಡ
1ಕ್ಕೆ ಬೊಳ್ಳಚೆಟ್ಟಿರ - ಬಟ್ಟಿರ
2ಕ್ಕೆ ಪಾಲಂದಿರ - ಕೊಕ್ಕಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.