ADVERTISEMENT

ಕೃಷಿ ಭೂಮಿಯಲ್ಲಿ ಯಂತ್ರ ನಾಟಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 8:59 IST
Last Updated 15 ಸೆಪ್ಟೆಂಬರ್ 2017, 8:59 IST
ಸೋಮವಾರಪೇಟೆ ಸಮೀಪದ ಐಗೂರು ಗ್ರಾಮದ ದಿನೇಶ್ ಎಂಬುವವರ ಭತ್ತದ ಗದ್ದೆಯಲ್ಲಿ ಗುರುವಾರ ಯಂತ್ರನಾಟಿ ಪ್ರಾತ್ಯಕ್ಷಿತೆ ನೀಡಲಾಯಿತು
ಸೋಮವಾರಪೇಟೆ ಸಮೀಪದ ಐಗೂರು ಗ್ರಾಮದ ದಿನೇಶ್ ಎಂಬುವವರ ಭತ್ತದ ಗದ್ದೆಯಲ್ಲಿ ಗುರುವಾರ ಯಂತ್ರನಾಟಿ ಪ್ರಾತ್ಯಕ್ಷಿತೆ ನೀಡಲಾಯಿತು   

ಸೋಮವಾರಪೇಟೆ: ಇಲ್ಲಿಗೆ ಸಮೀಪದ ಐಗೂರು ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಭತ್ತದ ಕೃಷಿಕ ಕೆ.ಪಿ.ದಿನೇಶ್‌ರವರ ಸಹಯೋಗದಲ್ಲಿ ಭತ್ತದ ಕೃಷಿ ಭೂಮಿಯಲ್ಲಿ ಯಂತ್ರ ನಾಟಿಗೆ ಚಾಲನೆ ನೀಡಲಾಯಿತು.

ಕಾರ್ಮಿಕರ ಕೊರತೆ ಹಾಗೂ ಹೆಚ್ಚಿದ ಉತ್ಪದಾದನ ವೇಚ್ಚದಿಂದ ಹೆಚ್ಚಿನ ಕೃಷಿಕರು ಭತ್ತದ ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಆದುದ್ದದರಿಂದ ಸರ್ಕಾರ ಯಂತ್ರ ನಾಟಿಗೆ ಉತ್ತೇಜನ ನೀಡುತ್ತಿದೆ ಎಂದು ಹೋಬಳಿ ಕೃಷಿ ಅಧಿಕಾರಿ ಕವಿತ ರೈತರಿಗೆ ಮಾಹಿತಿ ನೀಡಿದರು.

ಯಂತ್ರ ನಾಟಿಯಿಂದ ಭತ್ತದ ಉತ್ಪಾದನಾ ವೆಚ್ಛ ಕಡಿಮೆಯಾಗಲಿದೆ. ಭತ್ತದ ಸಸಿ ಮಡಿಯನ್ನು ಮನೆಯ ಕಣದಲ್ಲೇ ವೈಜ್ಞಾನಿಕವಾಗಿ ಮಾಡಿಕೊಳ್ಳಬಹುದು. ಸಸಿ ಮಡಿಗೆ 20 ದಿನ ಕಳೆದ ನಂತರ ನಾಟಿ ಮಾಡಬಹುದು. ಕೃಷಿ ಇಲಾಖೆಯಿಂದ ನಾಟಿಗೆ ಹೆಕ್ಟೇರ್‌ ಒಂದಕ್ಕೆ ರೂ. 4 ಸಾವಿರ ಸಹಾಯಧನ ನೀಡಲಾಗುತ್ತದೆ.

ADVERTISEMENT

ಕೃಷಿಭಾಗ್ಯ ಯೋಜನೆಯಲ್ಲಿ ಕೆರೆ ನಿರ್ಮಿಸಲು ಸಹಾಯಧನ ನೀಡಲಾಗುತ್ತದೆ. ಕೃಷಿಕರು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಗ್ರಾಮದ ಪ್ರಗತಿಪರ ಕೃಷಿಕರಾದ ಕೆ.ಪಿ.ರಾಯ್, ಚಂದ್ರಪಾಲ್, ಗೋವಿಂದ, ರಾಜೇಶ್, ಜಯಕಾಂತ್, ಮೊಗಪ್ಪ, ಕೆ.ಪಿ.ಶೋಭ ಅವರುಗಳು ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.