ADVERTISEMENT

ರಾಷ್ಟ್ರೀಯ ಏಕತಾ ಸಮಾವೇಶಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 9:20 IST
Last Updated 21 ಮೇ 2017, 9:20 IST

ಮಡಿಕೇರಿ: ನಗರದ ಭಾರತೀಯ ವಿದ್ಯಾ ಭವನ ಕೊಡಗು ವಿದ್ಯಾಲಯದಲ್ಲಿ ಐದು ದಿನಗಳ ಕಾಲ ನಡೆದ 8ನೇ ರಾಷ್ಟ್ರೀಯ ಏಕತಾ ಸಮಾವೇಶ, ಶಿಬಿರಕ್ಕೆ ಶುಕ್ರವಾರ ರಾತ್ರಿ ವೈಭವದ ತೆರೆಬಿತ್ತು.

ರಾಷ್ಟ್ರದ ವಿವಿಧೆಡೆಯಿಂದ ಬಂದಿದ್ದ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ನೆಲದ ಸಾಂಸ್ಕೃತಿಕ ಕಲೆ ಕಲಿತು ಪ್ರದ ರ್ಶನ ನೀಡಿದ್ದು ಪ್ರೇಕ್ಷಕರ ಮನಸೂರೆ ಗೊಳಿಸಿತು.
ಬಳ್ಳಾರಿ ರಾಘವೇಂದ್ರ ಅವರಿಂದ ತರಬೇತಿ ಪಡೆದ 60 ವಿದ್ಯಾರ್ಥಿಗಳು ಹಾಡಿದ ಕನ್ನಡ ಹಾಡು ಚಪ್ಪಾಳೆ ತಟ್ಟು ವಂತೆ ಮಾಡಿತು. ಅವರವರ ಮಾತೃ ಭಾಷೆಯಲ್ಲಿ ಬರೆದುಕೊಂಡು ಸಾವಿರಾರು ಮಂದಿ ಎದುರು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.

ಕಲಾವಿದ ಈಶ್ವರನಾಯಕ್ ನಿರ್ದೇಶನದಲ್ಲಿ ಸುಮಾರು 44 ವಿದ್ಯಾರ್ಥಿಗಳು ಕಲಿತ ಚಿತ್ತಾರ ಕಲೆಯನ್ನು ವೇದಿಕೆಯಲ್ಲಿ ಪ್ರದರ್ಶಿನಿಸಿದರು. ಅದಕ್ಕೆ ಚಪ್ಪಾಳೆಯ ಸುರಿಮಳೆಯೇ ಆಯಿತು.ಕೊಡವ ಸಾಂಪ್ರದಾಯಿಕ ಉಮ್ಮ ತ್ತಾಟ್ ನೃತ್ಯವನ್ನೂ ಕೊಡವ ಸಾಂಪ್ರ ದಾಯಿಕ ಸೀರೆಯುಟ್ಟು ಅದ್ಭುತವಾಗಿ ಪ್ರದರ್ಶಿಸಿದರು.

ADVERTISEMENT

61 ವಿದ್ಯಾರ್ಥಿಗಳು ಒಂದೇ ವೇದಿಕೆ ಯಲ್ಲಿ ಕೊಡವ ಸಾಂಪ್ರದಾಯಿಕ ನೃತ್ಯ ಪ್ರಸ್ತುತ ಪಡಿಸಿದರು. ಜಾನಪದ ಕಲಾ ವಿದೆ ಐಮುಡಿಯಂಡ ರಾಣಿ ಮಾಚಯ್ಯ ಮತ್ತು ತಂಡ ನಿರ್ದೇಶಿಸಿದ್ದರು.ಬೊಟ್ಟೋಳಂಡ ಕಾಶಿ ಅಚ್ಚಯ್ಯ ನಿರ್ದೇಶನದಲ್ಲಿ ಕೊಡವರ ಸಾಂಪ್ರ ದಾಯಿಕ ಬೊಳಕ್ಕಾಟ್ ಅನ್ನು ಕಲಿಸಲಾ ಗಿತ್ತು. ಆ ನೃತ್ಯವೂ ಆಕರ್ಷಿಸಿತು. ಕನ್ನಡ ನಾಡಿನ ಗಂಡು ಕಲೆಯಾದ ಯಕ್ಷಗಾನ ವನ್ನೂ ಅದ್ಭುತವಾಗಿ ಪ್ರದರ್ಶಿಸಿದರು. ಕನ್ನಡ ನಾಡಿನ ಪ್ರಸಿದ್ಧ ಕಂಸಾಳೆಗೆ ಹೆಜ್ಜೆ ಹಾಕಿದರು. 

‘ನೆರವಾಗುವ ಮನೋಭಾವ ರೂಢಿಸಿ ಕೊಳ್ಳಿ’: ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೊಡಗು ವಿದ್ಯಾಲಯದ ಉಪಾಧ್ಯಕ್ಷ ಕೆ.ಪಿ.ಉತ್ತಪ್ಪ, ‘ನೆರವು ನೀಡುವ ಮನೋಭಾವ ಬಾಲ್ಯದಿಂದಲೇ ಮೂಡಲಿ.ಮಹಾತ್ಮರ ಚಿಂತನೆಗಳನ್ನು ಜೀವನ ದಲ್ಲಿ ಅಳವಡಿಸಿಕೊಂಡರೆ ಸಾಧನೆ ಸಾಧ್ಯವಾಗಲಿದೆ’ ಎಂದು ನುಡಿದರು.

‘ಬಾಲ್ಯದಲ್ಲಿಯೇ ಉತ್ತಮ ಗುರಿ ಹೊಂದಬೇಕು. ಯಾವುದೇ ಸಾಧನೆ ಕೂಡ ಅಸಾಧ್ಯವಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ಇರಲಿ’ ಎಂದು ಹೇಳಿದರು. ‘ಹಲವು ವೈವಿಧ್ಯತೆಗಳಿಂದ ಕೂಡಿ ರುವ ಭಾರತದಲ್ಲಿ ಜನಿಸಿರುವ ಬಗ್ಗೆ ಮಕ್ಕಳಲ್ಲಿ ಹೆಮ್ಮೆ ಇರಬೇಕು. ಮಕ್ಕಳಲ್ಲಿ ರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಿ ಪ್ರತಿಭಾವಂತ ರನ್ನು ಸಮಾಜಕ್ಕೆ ಪರಿಚಯಿಸಿ’ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಸಂಚಾಲಕ ಸಿ.ಬಿ.ದೇವಯ್ಯ ಮಾತನಾಡಿದರು.ಕೆ.ಎಸ್.ದೇವಯ್ಯ, ಶಿಕ್ಷಕಿ ಎಂ.ಎ. ವೀಣಾ, ಅಂಜಾನ್, ಇಶ್ರತ್, ಸುಮಿತ್ರಾ, ಇ. ಶ್ರೀನಿವಾಸನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.