ADVERTISEMENT

ರಾಷ್ಟ್ರ ರಕ್ಷಣೆಗೆ ಒತ್ತಾಯಿಸಿ ಜಾಥಾ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 9:02 IST
Last Updated 30 ಜನವರಿ 2017, 9:02 IST
ನಾಪೋಕ್ಲು: ಸೌಹಾರ್ದ ಸಂಕಲ್ಪ ಮತ್ತು ರಾಷ್ಟ್ರ ರಕ್ಷಣೆಗೆ ಒತ್ತಾಯಿಸಿ ಎಸ್‌ಕೆಎಸ್ಎಸ್ಎಫ್ ವತಿಯಿಂದ ಪಟ್ಟಣದಲ್ಲಿ ಈಚೆಗೆ ಬೃಹತ್ ಜಾಥಾ ಮತ್ತು ಸಾರ್ವಜನಿಕ ಸಭೆ ಈಚೆಗೆ ನಡೆಯಿತು. 
 
ಇದಕ್ಕೂ ಮೊದಲು ಎಮ್ಮೆಮಾಡು ದರ್ಗಾ ಶರೀಫ್ ನಲ್ಲಿ ಎಂ.ಎಂ.ಅಬ್ದುಲ್ ಫೈಝಿ ನೇತೃತ್ವದಲ್ಲಿ ಪ್ರಾರ್ಥನೆ ನಡೆಸುವುದರ ಮೂಲಕ ಜಾಥಾಕ್ಕೆ ಚಾಲನೆ ನೀಡಲಾಯಿತು. ಜಾಥಾದಲ್ಲಿ ರಾಷ್ಟ್ರ ರಕ್ಷಣೆ, ಸೌಹಾರ್ದತೆ ಬಗ್ಗೆ  ಘೋಷಣೆಗಳು, ಮಕ್ಕಳಿಂದ ದಫ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 
 
ವಿ.ಪಿ.ಎಸ್. ಮುತ್ತುಕೋಯ ತಂಙಳ್, ವೈ.ಯು. ನೌಶಾದ್ ಫೈಝಿ, ಎಂ.ತಮ್ಲಿಖ್ ಧಾರಿಮಿ, ಪಿ.ಎಂ.ಆರಿಫ್ ಫೈಝಿ, ಬಸವ ಪಟ್ಟಣ ಶುಶಾಂತಾಶ್ರಮದ  ಶ್ರೀ ಬಸವಲಿಂಗ ಸ್ವಾಮಿಜಿ, ರೆ. ಫಾದರ್ ಫೆಡ್ರಿಕ್, ಅಬ್ದುಲ್ ಅಜೀಜ್ ದಾರಿಮಿ ಮೂಡಿಗೆರೆ, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಮುಸ್ಲಿಂ ಸಮಾಜದ ಉಪಾಧ್ಯಕ್ಷ ಪಿ.ಎಂ. ಖಾಸಿಂ  ಮಾತನಾಡಿದರು. ಸ್ಮಾನ್ ಹಾಜಿ, ಕೆ.ಎ. ಯಾಕೂಬ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಹಂಸ ಕೊಟ್ಟಮುಡಿ, ಎಂ.ಎ. ಮನ್ಸೂರ್ ಅಲಿ, ಸಿ.ಯು ಮಹೀನ್, ಮಹಮ್ಮದ್ ಖುರೇಶಿ, ಕೆ.ಎ. ಹ್ಯಾರಿಸ್, ಬಶೀರ್ ಹಾಜಿ, ಪಿ.ಎ. ಮಹಮ್ಮದ್ ಕುಂಙ, ಪಿ.ಬಿ ಇಸ್ಮಾಯಿಲ್ ಮುಸ್ಲಿಯಾರ್, ಬಾಬು ಜಾನ್, ಕೆ.ಎ. ಬಶೀರ್ ಎಡಪಾಲ, ಬೀರಾನ್ ಕುಟ್ಟಿ ಹಾಜಿ, ಅಬ್ದುಲ್ ಹಕ್ಕಿಂ ಎ.ಕೆ., ಸಿ.ಎ. ಜುನೈದ್, ಅಬ್ದುಲ್ ಮಜೀದ್, ಮತ್ತಿತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.