ADVERTISEMENT

ಸುಂಟಿಕೊಪ್ಪ: ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 7:22 IST
Last Updated 8 ಸೆಪ್ಟೆಂಬರ್ 2017, 7:22 IST

ಸುಂಟಿಕೊಪ್ಪ: ಸುಂಟಿಕೊಪ್ಪ ಪಟ್ಟಣದಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಬುಧವಾರ ರಾತ್ರಿ ಗುಡುಗು ಮಳೆ ಸುರಿದು ನಂತರ ಬಿಡುವು ನೀಡಿತ್ತು. ಗುರುವಾರ ಬೆಳಿಗ್ಗೆ ಬಿಸಿಲಿನ ವಾತಾವರಣ ಇದ್ದಿತಾದರೂ ಸಂಜೆ ಆರಂಭವಾದ ಮಳೆ ಒಂದು ಗಂಟೆ ಎಡೆಬಿಡದೇ ಸುರಿಯಿತು.

ರಸ್ತೆಯಲ್ಲಿ ನೀರು ನಿಂತ ಕಾರಣ ಸಾರ್ವಜನಿಕರು,ವಾಹನ ಸವಾರರು ಪರದಾಡುತ್ತಿದ್ದ ದೃಶ್ಯ ಕಂಡುಬಂತು. ಕೆದಕಲ್, ಕಂಬಿಬಾಣೆ, ಗುಂಟುಕುಟ್ಟಿ, ಗರಗಂದೂರು, ಹೊಸಕೋಟೆಗಳಲ್ಲೂ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT