ADVERTISEMENT

ಗೋಮಾಳ ಉಳಿಸಿ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 10:33 IST
Last Updated 21 ಮೇ 2017, 10:33 IST

ಮುಳಬಾಗಿಲು: ತಾಲ್ಲೂಕಿನ ಜಿ.ಕುರುಬರ ಹಳ್ಳಿ ಗ್ರಾಮದ ಸರ್ವೇ ನಂ. 36 ಪಿ2 ರ ಗೋಮಾಳ ಜಮೀನಿನಲ್ಲಿ 2 ಎಕರೆ 20 ಗುಂಟೆ ಜಾಗವನ್ನು ತುಳಸಿರಾಮಶಟ್ಟಿಗೆ ಕಂದಾಯ ಇಲಾಖೆಯವರು ಮಂಜೂರು ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.

‘ಇಲ್ಲಿನ ಗೋಮಾಳದ ಜಮೀನಿನಲ್ಲಿ ಹಿಂದನ ಕಾಲದಿಂದಲೂ ಪೂರ್ವಿಕರು ಜಾನುವಾರುಗಳ ಮೇವು, ಹುಲ್ಲುಗಾವಲಿಗೆ ಜಾಗ ಉಳಿಸಿಕೊಂಡಿದ್ದರು. ಆದರೆ ಈ ಜಮೀನಿನಲ್ಲಿ 2 ಎಕರೆಯನ್ನು ಗಡ್ಡೂರು ಗ್ರಾಮ ಪಂಚಾಯಿತಿ ನೌಕರ ತುಳಸಿರಾಮಶೆಟ್ಟಿ ತಮ್ಮ ಹೆಸರಿಗೆ ಮಾಡಿಸಿಕೊಂಡು ಕಾಂಪೌಂಡ್ ನಿರ್ಮಿಸಲು ಮುಂದಾಗಿರುವುದು ಖಂಡನೀಯ’ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೆ ಈ ಜಮೀನನ್ನು ಸರ್ಕಾರ ವಶಕ್ಕೆ ಪಡೆದು ಯತಸ್ಥಿತಿ ಗೋಮಾಳವನ್ನು ಉಳಿಸಿಕೊಡಬೇಕು. ಇಲ್ಲವಾದರೆ ತಾಲ್ಲೂಕು ಕಚೇರಿಗೆ ಬೀಗ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ತಹಶೀಲ್ದಾರ್ ಬಿ.ಎನ್.ಪ್ರವೀಣ್ ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕು ಮುಖಂಡರಾದ ಪಾರುಕ್ ಪಾಷಾ, ಆನಂದ್‌ಸಾಗರ್, ರಂಜಿತ್‌ಕುಮಾರ್, ಸೀನ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.