ADVERTISEMENT

ತುಂಬಿದ ಕೆರೆ; ರೈತರ ಸಂಭ್ರಮ

ಗ್ರಾಮೀಣ ಭಾಗಗಳಲ್ಲಿ ಚಿಗುರಿದ ಬೆಳೆಗಳು; ಗಿಡಗಂಟೆ, ಹೂಳು ತೆಗೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 6:47 IST
Last Updated 20 ಜುಲೈ 2017, 6:47 IST

ಮುಳಬಾಗಿಲು: ಇತ್ತೀಚೆಗೆ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದ ಕೆಲವು ಕೆರೆಗಳಿಗೆ ನೀರು ಬಂದಿದೆ. ಕೆಲ ಕೆರೆಗಳಲ್ಲಿ ಅರ್ಧದಷ್ಟು ನೀರಿದ್ದರೆ ಮತ್ತಷ್ಟು ಕೆರೆಗಳು ಕೋಡಿ ಬೀಳುವ ಸ್ಥಿತಿಯಲ್ಲಿವೆ. ಇದರಿಂದ ಆ ಗ್ರಾಮಗಳ ರೈತರು ಸಂತಸಗೊಂಡಿದ್ದಾರೆ. ವಿಶೇಷ ಎಂದರೆ ಹದವಾಗಿ ಎರಡು ಮೂರುಗಳು ಸುರಿ ದರೆ ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ನೀರು ತುಂಬುವ ಸಾಧ್ಯತೆ ಇದೆ.

ಆವಣಿ, ಬಟ್ಲಬಾವನಹಳ್ಳಿ, ದೊಡ್ಡ ಹೊನ್ನಶೆಟ್ಟಿಹಳ್ಳಿ, ಹೊಸಕೆರೆ, ಕೀಲು ಹೊಳಲಿ, ದೇವರಾಯಸಮುದ್ರ, ಕುರುಡುಮಲೆ, ಸಿದ್ದಗಟ್ಟ  ಕೆರೆಗೆ ನೀರು ಬಂದಿವೆ. ರೈತರು ಭತ್ತ ಬೆಳೆಯುವ ಮನಸ್ಸು ಮಾಡಿದ್ದಾರೆ.

ಕೆರೆಗಳಲ್ಲಿನ ನೀರನ್ನು ಬಳಸಬಾರದು ಎಂದು ಎರಡು ವರ್ಷಗಳಿಂದ ಜಿಲ್ಲಾಧಿ ಕಾರಿ ಆದೇಶಿಸುತ್ತಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ರೈತರು ಕೆರೆ ನೀರನ್ನು ಬಳ ಸಿಲ್ಲ. ಈ ಮೊದಲೇ ಅಲ್ಪಸ್ವಲ್ಪ ನೀರಿತ್ತು. ಇತ್ತೀಚೆಗೆ ಮಳೆ ಆಗಿದ್ದರಿಂದ ಮುಕ್ಕಾಲು ಪ್ರಮಾಣದಲ್ಲಿ ನೀರು ಬಂದಿದೆ.

ADVERTISEMENT

ಆದರೆ ಜಿಲ್ಲಾಧಿಕಾರಿ ಆದೇಶದ ಕಾರಣ ಕೆರೆ ತುಂಬಿದ್ದರೂ ನೀರನ್ನು ಬಳಸಲು ರೈತರು ಹಿಂದು ಮುಂದು ನೋಡುತ್ತಿ ದ್ದಾರೆ.

ಕೆಲವು ಭಾಗಗಳಲ್ಲಿ ರಾಗಿ, ನೆಲಗಡಲೆ, ಅವರೆ, ಅಲಸಂದಿ, ಸಾಸುವೆ, ಹುರುಳಿ, ಜೋಳ, ಸಜ್ಜೆ, ಹುಚ್ಚೆಳ್ಳು ಬೆಳೆಗಳು ಚಿಗುರಿವೆ. ರೈತರ ಮುಖದಲ್ಲಿ ಸಂತಸ ತುಂಬಿದೆ.

ಮೀನಿಗೆ ಗಾಳ: ಕೆರೆಗಳಿಗೆ ನೀರು ತುಂಬಿ ದರೆ ಮೀನುಗಳನ್ನು ಹಿಡಿಯುವ ಪದ್ಧತಿ ಇಂದಿಗೂ ಈ ಭಾಗದಲ್ಲಿ ಇದೆ. ಪಕ್ಕೆ, ಹುಣಸೆ, ಜಲ್ಲು, ಕೊರದೆ ಜಾತಿಯ ಮೀನುಗಳಿಗೆ ಬೇಡಿಕೆ ಹೆಚ್ಚು. ಸ್ವಲ್ಪ ನೀರು ಬಂದಿರುವ ಕೆರೆಗಳ ಬಳಿ ಜನರು ಮೀನುಗಳನ್ನು ಹಿಡಿಯುತ್ತಿದ್ದಾರೆ. ಗುಂಡಿಗಳಲ್ಲಿಯೂ ಬಲೆ ಹರಡಿದ್ದಾರೆ.

1 ಕೆ.ಜಿ ಮೀನನ್ನು ₹ 150 ರಿಂದ 200ರವರೆಗೆ ಮಾರಾಟ ಮಾಡುತ್ತಿದ್ದಾರೆ.

‘ಕಳೆದ ವರ್ಷ ಮೀನುಗಾರಿಕೆ ಇಲಾಖೆಯಿಂದ ಮೀನು ಪಡೆದು ಕೆರೆಗಳಲ್ಲಿ ಸಾಕಿದ್ದೆವು. ಲಾಭವೂ ಬಂದಿತ್ತು. ಈ ವರ್ಷ ಕೆರೆಗಳು ತುಂಬಿ ದರೆ ಮೀನು ಸಾಕುತ್ತೇವೆ’ ಎನ್ನುತ್ತಾರೆ ಬೆಳಗಾನಹಳ್ಳಿ ಮಂಜುನಾಥ್.

 -ಎಸ್.ಸುಬ್ರಮಣಿ, ಅಸಲಿ ಅತ್ತಿಕುಂಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.