ADVERTISEMENT

ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಶ್ರೀಧರ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 4:56 IST
Last Updated 24 ಮಾರ್ಚ್ 2017, 4:56 IST

ಮುಳಬಾಗಿಲು: ನೀರಿನ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಶ್ರೀಧರ್ ತಿಳಿಸಿದರು.

ನಗರದ ರೋಟರಿ ಸೆಂಟ್ರಲ್ ಭವನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ರೋಟರಿ ಸೆಂಟ್ರಲ್ ಮುಳಬಾಗಿಲು ಗುರುವಾರ ವಿಶ್ವ ಜಲ ದಿನ ಅಂಗವಾಗಿ ಹಮ್ಮಿಕೊಂಡಿದ್ದ ‘ಜಲಸಂರಕ್ಷಣೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ನೀರನ್ನು ಯಥೇಚ್ಚವಾಗಿ ದುರ್ಬಳಕೆ ಮಾಡಿಕೊಂಡಿರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಈಗಾಗಲೆ ಹಣ ನೀಡಿ ನೀರನ್ನು ಖರೀದಿಸುವ ಸನ್ನಿವೇಶ ಬಂದಿದೆ. ಆದ್ದರಿಂದ ನೀರನ್ನು ಮಿತವಾಗಿ ಬಳಸಬೇಕು ಎಂದು ತಿಳಿಸಿದರು.

  ಪ್ರಧಾನ ಸಿವಿಲ್ ನ್ಯಾಯಾಧೀಶ ಎ.ಎ.ಶಫೀರ್ ಮಾತನಾಡಿ, ಹಿಂದೆ ನೀರನ್ನು ಮಿತವಾಗಿ ಬಳಸಿಕೊಂಡು ಅಂತರ್ಜಲವನ್ನು ಕಾಪಾಡಿಕೊಂಡು ಬರಲಾಗಿತ್ತು. ಆದರೆ ಇತ್ತೀಚಿಗೆ ಕುಡಿಯುವ ನೀರಿಗೂ ತಾತ್ಸರ ಉಂಟಾಗಿದೆ ಎಂದು ತಿಳಿಸಿದರು.

ನಗರಸಭೆ ಆಯುಕ್ತ ಬಿ.ಪ್ರಹ್ಲಾದ್ ಮಾತನಾಡಿ, ನಗರದ 27 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಆರಂಭವಾಗುತ್ತಿದೆ. ಹೀಗಾಗಿ ನಗರ ಸಭೆಯಿಂದ ನೀರಿನ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು. ವಕೀಲ ಎನ್.ಪ್ರಭಾಕರ್ ಜಲಮಾಲಿನ್ಯ ತಡೆ ನಿಯಂತ್ರಣ ಕಾಯ್ದೆ ಕುರಿತು ಅತಿಥಿ ಉಪನ್ಯಾಸ ನೀಡಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಚ್.ಪಿ.ಮೋಹನ್‌ಕುಮಾರ್, ರೋಟರಿ ಸೆಂಟ್ರಲ್ ತಾಲ್ಲೂಕು ಘಟಕ ಅಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ, ಕಾರ್ಯದರ್ಶಿ ಎಚ್.ವೆಂಕಟಗಿರಿಯಪ್ಪ,  ವಕೀಲರ ಸಂಘದ ಅಧ್ಯಕ್ಷ ಕೆ.ತಿಮ್ಮರಾಯಪ್ಪ, ಉಪಾಧ್ಯಕ್ಷೆ ಕನ್ನಿಕಾಪರಮೇಶ್ವರಿ, ಕಾರ್ಯದರ್ಶಿ ಪಿ.ನಟರಾಜ್, ಹಿರಿಯ ವಕೀಲರಾದ ಎಂ.ಎಲ್.ವೆಂಕಟೇಶ್, ಕೆ.ಆರ್.ರಾಜಣ್ಣ, ಕೆ.ಟಿ.ವೆಂಕಟರವಣಪ್ಪ, ಎಸ್.ಬಷೀರ್‌ ಅಹ್ಮದ್, ವಿ.ಜಯಪ್ಪ, ನೂರ್‌ ಫರ್ವೀನ್, ಮುಖಂಡರಾದ ಬಿ.ರಮೇಶ್‌ಕುಮಾರ್, ಸರಿತಾ ಬಾಲಾಜಿ, ಕುರುಡುಮಲೆ ಮಂಜುನಾಥ್, ಆರ್.ಕೆ.ಸುದರ್ಶನಬಾಬು, ಪಿ.ಎಸ್.ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.