ADVERTISEMENT

ವೈಜ್ಞಾನಿಕ ಪದ್ಧತಿ: ಹೆಚ್ಚಿನ ಇಳುವರಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 4:34 IST
Last Updated 22 ಸೆಪ್ಟೆಂಬರ್ 2017, 4:34 IST
ವೈಜ್ಞಾನಿಕ ಪದ್ಧತಿ: ಹೆಚ್ಚಿನ ಇಳುವರಿ
ವೈಜ್ಞಾನಿಕ ಪದ್ಧತಿ: ಹೆಚ್ಚಿನ ಇಳುವರಿ   

ಶ್ರೀನಿವಾಸಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಯೋಜನೆಯ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ಆರ್ಥಿಕಾಭಿವೃದ್ಧಿ ಹೊಂದಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್‌ ಹೇಳಿದರು.

ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಈಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಕೃಷಿ ಯಂತ್ರೋಪಕರಣ ಹಾಗೂ ವಿವಿಧ ಹಣ್ಣಿನ ಗಿಡ ನಾಟಿ ಮಾಡಿದ್ದ ರೈತ ಮಹಿಳೆಯರಿಗೆ  ಯೋಜನೆಯಡಿ ಅನುದಾನ ವಿತರಿಸಿ ಮಾನಾಡಿದರು.

ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅನುಸರಿಸುವುದರ ಮೂಲಕ ಹೆಚ್ಚಿನ ಇಳುವರಿ ಪಡೆಯಬೇಕು. ಕೃಷಿಕರ ಬದುಕು ಹಸನುಗೊಳಿಸುವ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಹೆಚ್ಚಿನ ಸಂಖ್ಯೆಯ ರೈತರು ಅದರ ಲಾಭ ಪಡೆದುಕೊಂಡಿದ್ದಾರೆ. ಟ್ರ್ಯಾಕ್ಟರ್‌ ಖರೀದಿಸಿರುವ ಹಾಗೂ ಹೊಸದಾಗಿ ಮಾವು, ಬೇವು, ಸೀಬೆ, ಕನಕಾಂಬರ, ಮಲ್ಲಿಗೆ ಮುಂತಾದ ಆರ್ಥಿಕ ಬೆಳೆಗಳನ್ನು ಬೆಳೆದಿರುವ ರೈತರಿಗೆ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಟ್ರ್ತಾಕ್ಟರ್‌ ಖರೀದಿಸಿರುವ 8ಮಂದಿ ಕೃಷಿಕ ಮಹಿಳೆಯರಿಗೆ ತಲಾ ₹ 5ಸಾವಿರ, ಸಸಿ ನಾಟಿ ಮಾಡಿರುವ 19 ಕೃಷಿಕರಿಗೆ ತಲಾ ₹1 ಸಾವಿರ ಸೇರಿದಂತೆ ಒಟ್ಟು ₹ 64 ಸಾವಿರ ಅನುದಾನ ವಿತರಣೆ ಮಾಡಲಾಯಿತು.

ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಸುರೇಶ್‌ ಶೆಟ್ಟಿ, ಮುದಿಮಡಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನರಸಿಂಹನಾಯಕ, ಮೇಲ್ವಿಚಾರಕ ಯೋಗೀಶ್‌, ವಲಯ ಮೇಲ್ವಿಚಾರಕ ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.