ADVERTISEMENT

ಕಲುಷಿತ ನೀರು ಸೇವನೆ: ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 6:51 IST
Last Updated 28 ಸೆಪ್ಟೆಂಬರ್ 2016, 6:51 IST

ಯಲಬುರ್ಗಾ: ತಾಲ್ಲೂಕಿನ ಕೊನಸಾಗರ ಗ್ರಾಮದಲ್ಲಿ ಮಂಗಳವಾರ ಕಲುಷಿತ ನೀರು ಸೇವಿಸಿ ಸುಮಾರು 30ಕ್ಕೂ ಅಧಿಕ ಜನರು ಅಸ್ವಸ್ಥ್ಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮಕ್ಕೆ ಪೂರೈಕೆಯಾಗುವ ನೀರಿನ ತೊಟ್ಟಿಯ ನಿಂತ ನೀರು ಪೂರೈಕೆಯಾಗಿರುವುದರಿಂದ ಸಮಸ್ಯೆಯಾಗಿದೆ. ಗ್ರಾಮಕ್ಕೆ ಪೂರೈಕೆಯಾಗುವ ನೀರಿನ ಪೈಪ್‌ಲೈನ್‌ ಅನೇಕ ಕಡೆ ಒಡೆದು ಕೊಳಚೆ ನೀರು ಸೇರುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ವೈದ್ಯಾಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿದ್ದಾರೆ.

ಕೊಳವೆಭಾವಿ ಇರುವ ಸ್ಥಳದಲ್ಲಿಯೇ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತು ದುರ್ನಾತ ಬರುತ್ತಿದೆ. ಅಲ್ಲಿ ಪೈಪ್‌ ಒಡೆದು ಹೋಗಿದ್ದರಿಂದ ಆ ಕೊಳಚೆ ನೀರು ಸೇರ್ಪಡೆಯಾಗಿದೆ. ಗ್ರಾಮ ನೈರ್ಮಲ್ಯ ಸಮಿತಿ  ಈ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಮುಖಂಡ ರಮೇಶ ಬಳೂಟಗಿ ತಿಳಿಸಿದ್ದಾರೆ.

ಅಸ್ವಸ್ಥರು ಗಜೇಂದ್ರಗಡ, ಕೊಪ್ಪಳ, ಕುಷ್ಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಳವೆಬಾಯಿಯಿಂದ ನೇರವಾಗಿ ಪೂರೈಸಲು ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ವಾಸ್ತವ್ಯ ಹೂಡುವಂತೆ ವಜ್ರಬಂಡಿ ಆರೋಗ್ಯ ಕೇಂದ್ರದ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.  ಸ್ವಚ್ಛತೆ ಕೈಗೊಳ್ಳಲು ಗ್ರಾಮ ಪಂಚಾಯಿತಿ ಮುಂದಾಗಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ವಿ.ಪ್ರಕಾಶ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಅಧಿಕಾರಿ ಕೆ.ಬಿ.ಗಂಜ್ಯಾಳ, ಜಿಲ್ಲಾ ವೈದ್ಯಾಧಿಕಾರಿ ಎಸ್‌.ಕೆ.ದೇಸಾಯಿ, ಜೆ.ಇ ಓಂಕಾರ ಮೂರ್ತಿ, ಗ್ರಾ.ಪಂ ಸದಸ್ಯ ಚೆನ್ನಪ್ಪ ಕಲ್ಲಹೊಲದ, ಮೌನೇಶ ಬಡಿಗೇರ, ಬಸವರಾಜ ಜಗ್ಗದ, ಮುಖಂಡ ರೇವಣಪ್ಪ ಸಂಗಟಿ, ಅಶೋಳ ಕುರ್ನಾಳ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.