ADVERTISEMENT

ಕುಷ್ಟಗಿ: ವಿಜ್ಞಾನ ವಸ್ತುಪ್ರದರ್ಶನ

ಮಕ್ಕಳ ಆಲೋಚನಾ ಕ್ರಮ ಕಲಿಕೆಗೆ ಪ್ರೇರಣೆ: ತಹಶೀಲ್ದಾರ್‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:31 IST
Last Updated 18 ಜನವರಿ 2017, 5:31 IST

ಕುಷ್ಟಗಿ: ಪಟ್ಟಣದ ಕೃಷ್ಣಗಿರಿ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ವಿಜ್ಞಾನ ಮತ್ತು ಗಣಿತ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ್‌ ಎಂ.ಗಂಗಪ್ಪ,  ಪ್ರದರ್ಶನವು ಕಲಿಕೆಗೆ ಪ್ರೇರಣೆಯಾಗುತ್ತದೆ. ಪ್ರಯೋಗದ ಮಾದರಿಗಳು ಗಣಿತ ಮತ್ತು ವಿಜ್ಞಾನ ವಿಷಯಗಳು ಮಕ್ಕಳಿಗೆ  ಸುಲಭ ಗ್ರಹಿಕೆಗೆ ಪೂರಕವಾಗುತ್ತವೆ ಎಂದು ಹೇಳಿದರು.

ವಿಜ್ಞಾನ, ಗಣಿತ ಮತ್ತು ಗ್ರಾಮೀಣ ಪರಂಪರೆಯನ್ನು ಅನಾವರಣಗೊಳಿಸುವ 45 ವಿವಿಧ ಮಾದರಿಗಳು ವಸ್ತುಪ್ರದರ್ಶನದಲ್ಲಿ ಗಮನಸೆಳೆದವು.
ಶಾಲೆಯ ಮುಖ್ಯ ಶಿಕ್ಷಕಿ ಜಯದೇವಿ ಉಪ್ಪಿನ, ವಿಜ್ಞಾನ ಶಿಕ್ಷಕಿ ಈರಮ್ಮ ಮಜ್ಜಿಗಿ. ದ್ಯಾಮಪ್ಪ ಗದಗ. ಸುಮಿತ್ರಾ ದಾಸರ, ಯಮನಮ್ಮ, ರೇಣುಕಾ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಭಾರ ಅಧಿಕಾರಿ ಮಹಾಂತೇಶ ಜಾಲಿಗಿಡದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.