ADVERTISEMENT

ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 6:01 IST
Last Updated 20 ಏಪ್ರಿಲ್ 2017, 6:01 IST

ಯಲಬುರ್ಗಾ: ‘ತಾಲ್ಲೂಕಿನ ಬಳೂಟಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ.  ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಗ್ರಾಮದ ಮುಖಂಡರು ಹಾಗೂ ಕನ್ನಡಪರ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.‘ಗ್ರಾಮ ಸಭೆ ನಡೆಸದೆ ತಮಗೆ ಬೇಕಾದವರನ್ನು ಹಾಗೂ ಹಣ ಕೊಟ್ಟವರನ್ನು ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳಾಗಿ ಆಯ್ಕೆ ಮಾಡಿದ್ದಾರೆ. ರಾಜೀವ್‌ಗಾಂಧಿ ಚೈತನ್ಯ ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿಯೂ ಅವ್ಯವಹಾರ ಮಾಡಿದ್ದಾರೆ.

ಪಂಚಾಯಿತಿಗೆ ಸರಿಯಾಗಿ ಹಾಜರಾಗುತ್ತಿಲ್ಲ’ ಎಂದು ಆರೋಪಿಸಿ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕರಿಗೆ ಬುಧವಾರ ಗ್ರಾಮಸ್ಥರು ದೂರು ಸಲ್ಲಿಸಿದರು. ಮುಖಂಡರಾದ ಆನಂದ ಮೇಟಿ, ಶಿವಕುಮಾರ ನಾಗನಗೌಡ, ವೆಂಕಟೇಶ ಕಾರಬಾರಿ, ಶ್ರೀಶೈಲ ಗಾಣೀಗೇರ, ಬಸವರಾಜ ಬೇವಿನಗಿಡದ, ಬಸವರಾಜ ಬನ್ನಿಗೋಳ, ಪರಸಪ್ಪ ಬೇವಿನಗಿಡದ, ಮಲ್ಲಿಕಾರ್ಜುನ, ಯಲ್ಲಪ್ಪ, ರಮೇಶ ಭಾಗವಹಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT