ADVERTISEMENT

ಮಾನವ ಸಂಪನ್ಮೂಲ ಸಂರಕ್ಷಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 8:58 IST
Last Updated 24 ಸೆಪ್ಟೆಂಬರ್ 2017, 8:58 IST

ಸಿಂಧನೂರು: ಮಾನವ ಸಂಪನ್ಮೂಲ ಹಾಗೂ ಮಾನವ ಕುಲವನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿ ಜಾತಿ ನಿರ್ಮೂಲನಾ ಚಳವಳಿಯ ಮುಖಂಡರು ಶುಕ್ರವಾರ ರಾತ್ರಿ ನಗರಕ್ಕೆ ಆಗಮಿಸಿದ್ದ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಅವರಿಗೆ ಮನವಿ ಸಲ್ಲಿಸಿದರು.

ಭಾರತ ಸಂಪತ್ಭರಿತ ದೇಶವಾಗಿದ್ದು, ಖನಿಜ ಸಂಪತ್ತು, ಜಲಸಂಪನ್ಮೂಲ ಹಾಗೂ ಪರಿಸರವು ಮಾನವನಿಗೆ ಅನೇಕ ಉಪಯುಕ್ತ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿವೆ. ಹಿಂದೆ ಮಾನವನ ಆಯಸ್ಸು 100 ವರ್ಷ ಇತ್ತು. ಆದರೆ, ಇಂದು ಕೇವಲ 60 ವರ್ಷಕ್ಕೆ ಇಳಿದಿದೆ. ಪರಿಸರ ಸಂರಕ್ಷಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಜಾತಿ ನಿರ್ಮೂಲನಾ ಚಳವಳಿ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್.ಬಡಿಗೇರ್ ಆರೋಪಿಸಿದರು.

ದೇಶದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಿಂದ ಹೊರಬರುವ ವಿಷಪೂರಿತ ತ್ಯಾಜ್ಯ ವಸ್ತುಗಳು ಗಂಗಾ, ಯಮುನಾ, ಗೋದಾವರಿ, ಕೃಷ್ಣಾ, ತುಂಗಭದ್ರಾ, ಕಾವೇರಿ  ನದಿಗಳಿಗೆ ಸೇರಿ ರೋಗ ಹರಡುತ್ತಿವೆ. ಕಾರಣ ರಾಷ್ಟ್ರದ ಮನುಕುಲದ ಉಳಿವಿಗಾಗಿ ನದಿಗಳು ಕಲ್ಮಶಗೊಳ್ಳದಂತೆ ಸಂರಕ್ಷಿಸಬೇಕು ಎಂದು ಸಂಚಾಲಕರಾದ ಧರ್ಮರಾಜ ಉಪ್ಪಾರ, ಬಿ.ಎನ್.ಯರದಿಹಾಳ, ವಿನೋದರೆಡ್ಡಿ ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.