ADVERTISEMENT

ಶಾಲಾ ಆರಂಭೋತ್ಸವ, ಸಮವಸ್ತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 30 ಮೇ 2018, 11:25 IST
Last Updated 30 ಮೇ 2018, 11:25 IST

ಕನಕಗಿರಿ: ಶಿಕ್ಷಣ ಪಡೆಯಲು ಬಡತನ ಅಡ್ಡಿಯಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ವಿದ್ಯಾರ್ಥಿ ವೇತನ, ಬಿಸಿಯೂಟ ಸೇರಿ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಮುಖ್ಯಶಿಕ್ಷಕಿ ಗೌರಮ್ಮ ಬಳಿಗಾರ ತಿಳಿಸಿದರು.

ಪಟ್ಟಣದ ದ್ಯಾಮವ್ವನಗುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಶಾಲಾ ಆರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬುದು ಸರ್ಕಾರದ ಉದ್ದೇಶ. ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಂಡು ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಅವರು ಕೋರಿದರು.

ADVERTISEMENT

ಶಿಕ್ಷಕರಾದ ಶಿವಕುಮಾರ, ನಾಗರತ್ನ ಪ್ರವೀಣಕುಮಾರ, ಹೇಮಾ ಅನಿಲಕುಮಾರ, ಮಾತನಾಡಿದರು.ಶಿಕ್ಷಕರಾದ ಶಂಶಾದಬೇಗ್ಂ, ಮೆಹಬೂಬಹುಸೇನ, ಅಕ್ಕ ಮಹಾದೇವಿ ಕಿತ್ತೂರು ಇದ್ದರು.

ಮಡ್ಡೇರವಾಡಿ ಶಾಲೆ: ಪಟ್ಟಣದ ಮಡ್ಡೇರವಾಡಿ ಶಾಲೆಯಲ್ಲಿ ಶಾಲಾ ಆರಂಭೋತ್ವವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಯಿತು.

ಈ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ನಡೆಯಿತು. ಮುಖ್ಯಶಿಕ್ಷಕ ರಾಮಪ್ಪ ಕುಕನೂರು ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಹುಲಗಪ್ಪ, ಸದಸ್ಯರಾದ ತಿಮ್ಮಣ್ಣ, ಅನ್ನಪೂರ್ಣ ಶಿಕ್ಷಕರಾದ ಶೈಲಜಾ ಹೂಗಾರ, ನಾಗರತ್ನ ಹೊರಪೇಟೆ, ಲಲಿತಾ ಸೋಮಪ್ಪ, ಅಕ್ಕಮಹಾದೇವಿ ಗುಳೇದ, ಮಂಜುನಾಥ ಇದ್ದರು. ವಿದ್ಯಾರ್ಥಿಗಳಿಗೆ ಸಿಹಿಯೂಟ ನೀಡಲಾಯಿತು.

ಹುಲಿಹೈದರ: ಸಮೀಪದ ಹುಲಿಹೈದರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾ ಪ್ರಾರಂಭೋತ್ಸವ, ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಮುಖ್ಯಶಿಕ್ಷಕ ಬಾಲಾಜಿ ಸೂಳೇಕಲ್ ಶಿಕ್ಷಣದ ಕುರಿತು ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮರಮ್ಮ ಗೋಸ್ಲಪ್ಪ ಗದ್ದಿ ಅವರು ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಸಾವಿತ್ರಿ ದುರುಗೇಶ್, ಪಾಮಣ್ಣ ನಾಯಕ, ಶಾಮಿದಲಿ, ಮುಖಂಡರಾದ ಗೋಸ್ಲಪ್ಪ ಗದ್ದಿ, ನಾಗಪ್ಪ ದೊಸಿ , ಶಿಕ್ಷಕರಾದ ಶ್ರೀದೇವಿ ಶಿರವಾರ, ರಜಿಯಾಬೇಗಂ ಹುಸೇನಸಾಬ, ಚನ್ನಪ್ಪ , ಈರಣ್ಣ, ಮಹಾಂತೇಶ ಭಾಗವಹಿಸಿದ್ದರು.

ಮಲ್ಲಿಗೆವಾಡ: ಸಮೀಪದ ಮಲ್ಲಿಗೆವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಮುದಿಯಪ್ಪ ಖ್ಯಾಡೆದ ಅವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಿದರು,

ಮುಖ್ಯಶಿಕ್ಷಕರಾದ ಅಶೋಕ ನಾಯಕ, ಅಮರಗುಂಡಪ್ಪ , ಸಿಆರ್‌ಪಿ ಸಂಗಮೇಶ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಕನಕರಾಯ ಕುಂಬಾರ, ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.