ADVERTISEMENT

‘ಮನದ ಕೊಳೆ ಕಳೆವ ಮಾಚಿದೇವ’

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 8:55 IST
Last Updated 2 ಫೆಬ್ರುವರಿ 2018, 8:55 IST

ಕುಕನೂರು: ವೃತ್ತಿಯಿಂದ ಅಗಸನಾದ ಮಾಚಿದೇವ ತನ್ನ ಬದುಕು ಹಾಗೂ ವಚನಗಳ ಮೂಲಕ ಸಮಾಜದ ಕೊಳೆ ತೊಳೆಯಲು ಪ್ರಯತ್ನಿಸಿದ ಅಪರೂಪದ ಶರಣ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಲಪ್ಪ ಆಚಾರ ಹೇಳಿದರು. ಇಲ್ಲಿನ ಅನ್ನದಾನೇಶ್ವರ ಮಠದಲ್ಲಿ ಬುಧವಾರ ಮಡಿವಾಳ ಮಾಚಯ್ಯ ಅವರ ಜಯಂತಿ ಆಚರಣೆಯಲ್ಲಿ ಮಾತನಾಡಿದರು.

ಅಂದು ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೋಸ-ವಂಚನೆ, ಮೇಲು- ಕೀಳು ಎಂಬ ಭಾವನೆಯನ್ನು ತೊಡೆದು ಹಾಕಿದರು. ಅಧ್ಯಾತ್ಮದಲ್ಲಿ ಗಂಡು- ಹೆಣ್ಣು ಸಮಾನರೆಂದು ವಚನಗಳಿಂದ ಸಾರಿದರು ಮಾಚಯ್ಯ ಅವರು ಎಂದು ಹೇಳಿದರು.

ಕನ್ನಡನಾಡಿನಲ್ಲಿ ಧರ್ಮದ ಉಳಿವಿಗಾಗಿ ಸಾಮಾಜಿಕ ಕ್ರಾಂತಿಯ ಕೇಂದ್ರ ವ್ಯಕ್ತಿ ಬಸವಣ್ಣನವರಾದರೆ; ಅಲ್ಲಮ, ಸಿದ್ದರಾಮ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ ಮುಂತಾದವರು ಈ ಕ್ರಾಂತಿಯಲ್ಲಿ ಧುಮುಕಿದವರೆನ್ನಬಹುದು. ಕಲ್ಯಾಣದಲ್ಲಿ 1,96,000 ಶಿವಶರಣರಿದ್ದರು ಎಂದರು.

ADVERTISEMENT

ಬೆದವಟ್ಟಿಯ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವಾದಿ ಪ್ರಮಥರಲ್ಲಿ ಬಸವಣ್ಣನವರಿಗೆ ಬಲಗೈಯಂತೆ ಇದ್ದವರು ಶರಣ ಮಡಿವಾಳ ಮಾಚಯ್ಯ. ಇವರು ವೀರಭದ್ರನ ಅವತಾರವೆಂದು, ಗಣಾಚಾರಿ ವೀರಘಂಟೆ ಮಾಚಿದೇವರೆಂದು ಹಲವು ನಾಮಗಳಿಂದ ಜನಪ್ರಿಯರಾಗಿದ್ದರು ಎಂದರು.

ಮಹದೇವ ದೇವರು, ಶರಣಪ್ಪ ಬಣ್ಣದಭಾವಿ, ಶಿವುಕುಮಾರ ನಾಗಲಾಪುರ ಮಠ, ಬಸವರಾಜ ಅಡವಿ, ಗುರುಶಿದ್ದಪ್ಪ ಮಡಿವಾಳರ, ಈಶಪ್ಪ ಮಡಿವಾಳರ, ಗೂಳಪ್ಪ ಮಡಿವಾಳರ, ರಾಚಪ್ಪ ಮಡಿವಾಳರ, ಶವಪುತ್ರಪ್ಪ ಮಡಿವಾಳರ, ಲಕ್ಷ್ಮಣ್ಣ ಮಡಿವಾಳರ, ಆನಂದ ಮಡಿವಾಳರ,ಅರುಣ ಮಡಿವಾಳರ,ಮುತ್ತಪ್ಪ ಮಡಿವಾಳರ, ಶಂಕರ ಮಡಿವಾಳರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.