ADVERTISEMENT

ರೋಗನಿರೋಧಕ ಶಕ್ತಿ ಹೆಚ್ಚಿಸಲಿದೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 7:49 IST
Last Updated 8 ಫೆಬ್ರುವರಿ 2017, 7:49 IST

ಗೋಣಿಕೊಪ್ಪಲು: ಮಗುವಿನ ಆರೋಗ್ಯದ ದೃಷ್ಟಿಯಿಂದ ಪೋಷ ಕರು ದಡಾರ ಮತ್ತು ರುಬೆಲ್ಲಾ ಚುಚ್ಚು ಮದ್ದನ್ನು ಕಡ್ಡಾಯವಾಗಿ ಕೊಡಿಸ ಬೇಕು ಎಂದು ತಾಲ್ಲೂಕು ಆರೋಗ್ಯಾ ಧಿಕಾರಿ  ಡಾ. ಯತಿರಾಜ್ ಹೇಳಿದರು.

ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳ ವಾರ ಆಯೋಜಿಸಿದ್ದ ದಡಾರ ಮತ್ತು ರುಬೆಲ್ಲಾ ಚುಚ್ಚುಮದ್ದು ಅಭಿಯಾನ ದಲ್ಲಿ  ಮಾತನಾಡಿದ ಅವರು, ಯಾವುದೇ ಊಹಾಪೋಹಗಳಿಗೆ  ಕಿವಿಗೊಡದೆ ಮಕ್ಕಳಿಗೆ ಚುಚ್ಚುಮದ್ದು ಕೊಡಿಸಿ ಮಗುವಿನ ಸದೃಢ ಆರೋ ಗ್ಯಕ್ಕೆ  ಸಹಕರಿಸಿ ಎಂದು ಹೇಳಿದರು. ರುಬೆಲ್ಲಾ   ಚುಚ್ಚುಮದ್ದು ಪಡೆದು ಕೊಳ್ಳುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎಂದು ತಿಳಿಸಿದರು.

ವಿವೇಕಾನಂದ ಯೂತ್ ಮೂವ್ಮೆಂಟ್ ಸಂಚಾಲಕ ಡಾ, ಚಂದ್ರ ಶೇಖರ್ ಮಾತನಾಡಿ, ರುಬೆಲ್ಲಾ ಚುಚ್ಚುಮದ್ದಿನ ಬಗ್ಗೆ ಕೆಲವರು ಸಂದೇಹ ಪಡುತ್ತಿದ್ದಾರೆ. ಚುಚ್ಚು ಮದ್ದಿನಿಂದ ಮಗುವಿನ ಆರೋಗ್ಯ ಉತ್ತಮವಾಗುವುದೇ ಹೊರತು ಕೆಡಕಿಲ್ಲ.ಇದರ ಬಗ್ಗೆ ಪೋಷಕರು ಅನುಮಾನ ಪಡದೆ ಮಕ್ಕಳಿಗೆ ಚುಚ್ಚುಮದ್ದು ಕೊಡೆಸಿ ಎಂದು ಸಲಹೆ ನೀಡಿದರು. ಇದರಿಂದ ಯಾವುದೇ ಅಡ್ಡರಿಣಾಮಗಳಾಗುವುದಿಲ್ಲ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ನೆಲ್ಲೀರ ಚಲನ್ ದಾದಿಯರಿಗೆ ಚುಚ್ಚುಮದ್ದು ಲಸಿಕಾ ಕಿಟ್‌ ನೀಡಿದರು. ತಾಲ್ಲೂಕು  ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕಿರಣ್ ರಾಯ್ ಪಡ್ನೇಕರ್, ರೋಟರಿ ಕ್ಲಬ್ ಅಧ್ಯಕ್ಷ ನರೇಂದ್ರ,  ಕುಟ್ಟಂದಿ ವೈದ್ಯಾಧಿಕಾರಿ ಅನಿತಾ, ಮುಖ್ಯ ಶಿಕ್ಷಕಿ ಶಶಿಕಲಾ ಇದ್ದರು.

ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚುಚ್ಚುಮದ್ದು ನೀಡಲಾಯಿತು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ  ದಾದಿ ಮಹದೇವಮ್ಮ,ಆಶಾಕಾರ್ಯಕರ್ತೆ ಕೆ.ಯು.ರತಿ,ಅಂಗನವಾಡಿ ಶಿಕ್ಷಕಿ ಗೌರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.