ADVERTISEMENT

ರಸಗೊಬ್ಬರ ಬಳಕೆಯಿಂದ ಭೂಮಿ ಬರಡು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 11:06 IST
Last Updated 23 ಏಪ್ರಿಲ್ 2017, 11:06 IST

ಪಿರಿಯಾಪಟ್ಟಣ: ರಾಸಾಯನಿಕ ಗೊಬ್ಬರದ ಅತಿಯಾದ ಬಳಕೆಯಿಂದ ಭೂಮಿ ಬರಡಾಗುತ್ತಿದೆ. ಗಿಡ– ಮರ ಬೆಳೆಸುವ ಮೂಲಕ ನೈಸರ್ಗಿಕ ಸಂಪತ್ತು ಉಳಿಸುವ ಕೆಲಸವಾಗಬೇಕಿದೆ ಎಂದು ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಲ ಯದ ನ್ಯಾಯಾಧೀಶ ಅರ್ಜುನ್ ಎಸ್.ಮಳ್ಳೂರ್ ಮನವಿ ಮಾಡಿದರು.ತಾಲ್ಲೂಕಿನ ಪಂಚವಳ್ಳಿ ಗ್ರಾಮದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಯಡಿ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ವಿವಿಧ ಇಲಾಖೆ ಸಹಕಾರದೊಂದಿಗೆ ಶನಿವಾರ ಆಯೋ ಜಿಸಿದ್ದ ಆರೋಗ್ಯ ತಪಾಸಣೆ ಮತ್ತು ವಿಶ್ವ ಭೂ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ವಿ.ಹನುಮಂತಪ್ಪ ಮಾತನಾಡಿ, ಜೀವಸಂಕುಲದ ಅಗತ್ಯತೆ ಪೂರೈಸಲು ಭೂಮಿ ಇದೆಯೇ ಹೊರತು ಮಾನವನ ದುರಾಸೆ ಪೂರೈಸಲು ಅಲ್ಲ ಎಂದು ಹೇಳಿದರು.ವಕೀಲರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಭಾಸ್ಕರ್, ಜ್ಞಾನ ಜ್ಯೋತಿ ಸಂಸ್ಥೆ ಕಾರ್ಯದರ್ಶಿ ಹೇಮಾವತಿ ಮಾತನಾ ಡಿದರು. ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಅರ್ಜುನ್ ಎಸ್.ಮಳ್ಳೂರ್ ಅವರು ಸಸಿ ನೆಟ್ಟರು.

ಪಂಚವಳ್ಳಿ ಗ್ರಾ.ಪಂ ಅಧ್ಯಕ್ಷೆ ಕವಿತಾ, ಕಾರ್ಮಿಕ ನಿರೀಕ್ಷಕ ಕೆ.ಪಿ.ಅರುಣ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ  ಸಹಾಯಕ ನಿರ್ದೇಶಕ ಚಂದ್ರಪ್ಪ, ಆರೋಗ್ಯ ಇಲಾಖೆ ನಿರೀಕ್ಷಕ ಪ್ರಕಾಶ್, ಶಿಕ್ಷಣ ಇಲಾಖೆಯ ಇಸಿಒ ಯೋಗರಾಜ್, ಅರಣ್ಯ ರಕ್ಷಕ ಎಚ್.ಎಸ್.ಸಿದ್ದರಾಜು, ವಕೀಲರ ಸಂಘದ ಪದಾಧಿಕಾರಿಗಳಾದ ಎಂ.ಜೆ.ಸ್ವಾಮಿ, ರಾಜಣ್ಣ,  ಪಿಡಿಒ ವೀರಭದ್ರ ಇತರರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.