ADVERTISEMENT

ವಿವಿಧೆಡೆ ಶಾಂತಿಯುತ ಮತದಾನ

ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ; 31ಕ್ಕೆ ಮತ ಎಣಿಕೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 11:28 IST
Last Updated 29 ಆಗಸ್ಟ್ 2016, 11:28 IST

ಪಿರಿಯಾಪಟ್ಟಣ: ತಾಲ್ಲೂಕಿನ 4 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಭಾನುವಾರ ನಡೆದ ಉಪಚುನಾವಣೆ ಯಲ್ಲಿ ಒಟ್ಟು ಶೇ 80.01 ಮತದಾನವಾಗಿದೆ. ನಂದಿನಾಥಪುರದಲ್ಲಿ ಶೇ 82.18, ತಾತನಹಳ್ಳಿಯಲ್ಲಿ ಶೇ 92.31, ಸೂಳೆ ಕೋಟೆಯಲ್ಲಿ ಶೇ.77.59, ಬೈಲಕುಪ್ಪೆ ಯಲ್ಲಿ ಶೇ 77.63 ಮತದಾನವಾಗಿದೆ.

ಬೈಲಕುಪ್ಪೆ, ತಾತನಹಳ್ಳಿ, ಸೂಳೆಕೋಟೆ ಗ್ರಾಮ ಪಂಚಾಯಿತಿಗಳಲ್ಲಿ ಕ್ರಮವಾಗಿ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿರುವ ಮಾನು ಇನಾಯತ್‌, ಟಿ.ಈರಯ್ಯ, ಮೋಹನ್‌ ರಾಜ್ ರಾಜೀನಾಮೆಯಿಂದ ಸದಸ್ಯ ಸ್ಥಾನ ತೆರವಾಗಿದ್ದವು. ಹಾಗೆಯೇ, ತಾಲ್ಲೂಕಿನ ನಂದಿನಾಥಪುರ ಗ್ರಾ.ಪಂ.ಯಲ್ಲಿ ಲೋಕೇಶ್ ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತು.

ನಂದಿನಾಥಪುರ ಗ್ರಾ.ಪಂ. ಸದಸ್ಯ ಸ್ಥಾನಕ್ಕೆ ಲೋಕೇಶ್ ರಾಜೀನಾಮೆ ನೀಡಿದ್ದರೂ ಮತ್ತೊಮ್ಮೆ ಚುನಾವಣೆ ಯಲ್ಲಿ ಸ್ಪರ್ಧಿಸಿದ್ದಾರೆ. ಇವರ ವಿರುದ್ಧ ಮಾಜಿ ಸಚಿವ ದಿ.ಎಚ್.ಎಂ. ಚೆನ್ನಬಸಪ್ಪ ಅವರ ಮೊಮ್ಮಗ ಸುಕುಮಾರ್ ಕಣದಲ್ಲಿದ್ದಾರೆ.

ಹಂಪಾಪುರ ವರದಿ: ಸಮೀಪದ ಆಲನಹಳ್ಳಿ ಗ್ರಾಮ ಪಂಚಾಯಿತಿಯ ಆಲನಹಳ್ಳಿ 1ನೇ ವಾರ್ಡ್ ಉಪ ಚುನಾವಣೆ ಮತದಾನ ಭಾನುವಾರ ಶಾಂತಿಯುತವಾಗಿ ನಡೆಯಿತು.ಶೇ 79.08 ಮತ ಚಲಾವಣೆ ಆಗಿದೆ. ಒಟ್ಟು 1,091 ಮತದಾರರಲ್ಲಿ 862 ಮಂದಿ ಮತ ಹಾಕಿದ್ದಾರೆ. 4 ಮಂದಿ ಅಭ್ಯರ್ಥಿಗಳು ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ನಂಜನಗೂಡು ವರದಿ: ತಾಲ್ಲೂಕಿನಲ್ಲಿ 6 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಭಾನುವಾರ ನಡೆದ ಉಪಚುನಾವಣೆ ಯಲ್ಲಿ ಶೇ 74.39 ಮತದಾನವಾಗಿದೆ.
ರಾಂಪುರದ 1ನೇ ಕ್ಷೇತ್ರದಲ್ಲಿ ಶೇ 81.41 ಮತದಾನವಾಗಿದ್ದು, ಒಟ್ಟು 1,162 ಮತದಾರರ ಪೈಕಿ 946 ಮಂದಿ ಮತಚಲಾಯಿಸಿದ್ದಾರೆ. ಹದಿನಾರು ಮತ ಕ್ಷೇತ್ರದಲ್ಲಿ ಶೇ 81.99 ಮತದಾನವಾ ಗಿದ್ದು, 733 ಮತದಾರರಲ್ಲಿ 601 ಮಂದಿ ಮತ ಚಲಾಯಿಸಿದ್ದಾರೆ. ಬಿಳುಗಲಿಯಲ್ಲಿ ಶೇ 52.38 ಮತದಾನ ವಾಗಿದ್ದು, 947 ಮತದಾರರಲ್ಲಿ 496 ಮಂದಿ ಮತ ಹಾಕಿದ್ದಾರೆ.

ಹುಲ್ಲಹಳ್ಳಿ ಕ್ಷೇತ್ರದಲ್ಲಿ ಶೇ 77.59 ಮತದಾನ ದಾಖಲಾಗಿದ್ದು, ಒಟ್ಟು 1,031 ಮತದಾರರಲ್ಲಿ 800 ಮಂದಿ ಮತಚಲಾಯಿಸಿದ್ದಾರೆ. ಕುರಿಹುಂಡಿ ಯಲ್ಲಿ ಶೇ 67.07 ಮತದಾನವಾಗಿದ್ದು, 744 ಮತದಾರರಲ್ಲಿ 499 ಮಂದಿ ಮತಚಲಾಯಿಸಿದ್ದಾರೆ. ಹರದನಹಳ್ಳಿ ಮತ ಕ್ಷೇತ್ರದಲ್ಲಿ ಶೇ 85.10 ಮತದಾನವಾಗಿದ್ದು, 866ರಲ್ಲಿ 737 ಮತ ಚಲಾವಣೆಗೊಂಡಿವೆ.

‘ತಾಲ್ಲೂಕಿನ 6 ಕ್ಷೇತ್ರಗಳಲ್ಲೂ ಶಾಂತಿಯುತವಾಗಿ ಮತದಾನ ನಡೆಯಿತು. ಆ.31ರಂದು ಬೆಳಿಗ್ಗೆ 8 ಗಂಟೆಗೆ ನಗರದ ಜೂನಿಯರ್ ಕಾಲೇಜಿ ನಲ್ಲಿ ಎಣಿಕೆ ಕಾರ್ಯ ನಡೆಯಲಿದೆ’ ಎಂದು ಪ್ರಭಾರ ತಹಶೀಲ್ದಾರ್ ಬಸವರಾಜ ಚಿಗರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ವರುಣಾ ವರದಿ: ಹೋಬಳಿಯ ವರಕೋಡು ಗ್ರಾಮ ಪಂಚಾಯಿತಿಯ ಕೆಂಪೇಗೌಡನಹುಂಡಿ ವಾರ್ಡ್ ಉಪ ಚುನಾವಣೆ ಮತದಾನ ಭಾನುವಾರ ಶಾಂತಿಯುತವಾಗಿ ನಡೆಯಿತು. ಒಟ್ಟು 681 ಮತದಾರರ ಪೈಕಿ 654 ಮಂದಿ ಮತ ಚಲಾಯಿಸಿದ್ದು, ಶೇ 90 ಮತದಾನವಾಗಿದೆ.  ನಾಗರಾಜು ಹಾಗೂ ಚಿಕ್ಕಣ್ಣ  ಸ್ಪರ್ಧಿಸಿದ್ದಾರೆ.

ಕೆ.ಆರ್.ನಗರ ವರದಿ: ತಾಲ್ಲೂಕಿನ ಮಾಮತ್ತೂರು ಗ್ರಾಮ ಪಂಚಾಯಿತಿಯ ಮಳಲಿ ಸದಸ್ಯ ಕ್ಷೇತ್ರಕ್ಕೆ ಭಾನುವಾರ ಉಪಚುನಾವಣೆ ನಡೆಯಿತು.
ಶೇ 78.80 ಮತದಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.