ADVERTISEMENT

ಹಳೇ ತಲಕಾಡಿಗೆ ಪ್ರವಾಸಿಗರ ದಂಡು

​ಪ್ರಜಾವಾಣಿ ವಾರ್ತೆ
Published 1 ಮೇ 2017, 6:17 IST
Last Updated 1 ಮೇ 2017, 6:17 IST
ಕಾವೇರಿ ನದಿಯ ಒಡಲಲ್ಲಿ ಜಲಕ್ರೀಡೆಯ ಮೊರೆ ಹೋದ ಪ್ರವಾಸಿಗರು.
ಕಾವೇರಿ ನದಿಯ ಒಡಲಲ್ಲಿ ಜಲಕ್ರೀಡೆಯ ಮೊರೆ ಹೋದ ಪ್ರವಾಸಿಗರು.   

ತಲಕಾಡು: ಕಳೆದ ಎರಡು ಮೂರು ತಿಂಗಳಿನಿಂದ ಪರೀಕ್ಷಾ ಸಮಯವಾದ್ದರಿಂದ ಪ್ರವಾಸಿಗರಿಲ್ಲದೆ ಖಾಲಿಯಾಗಿದ್ದ ಇಲ್ಲಿನ ಕಾವೇರಿ ಪ್ರವಾಸಿ ತಾಣಕ್ಕೆ ಭಾನುವಾರ ಪ್ರವಾಸಿಗರ ದಂಡು ಹರಿದು ಬಂದಿತು.

ಪಂಚಲಿಂಗ ದೇವಾಲಯಗಳಿಗೆ ಹೋಗದೆ ಬಿಸಿಲಿನ ತಾಪ ತಣಿಸಿಕೊಳ್ಳಲು ಕಾವೇರಿ ನದಿಯ ಒಡಲಲ್ಲಿ ಜಲಕ್ರೀಡೆಯ ಮೊರೆ ಹೋದರು. ನದಿಯಲ್ಲಿ ನೀರು ಕಡಿಮೆ ಇದ್ದು, ಕಲುಷಿತಗೊಂಡಿದೆ. ಹೀಗಾಗಿ, ನೀರಿನಲ್ಲಿ ಮಿಂದೆದ್ದವರಿಗೆ ನವೆ ಉಂಟಾಗಿ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.

ವಾಹನಗಳು ಹೆಚ್ಚಾಗಿ ಬಂದಿ ದ್ದರಿಂದ ಹಳೇ ತಲಕಾಡಿನ ಕಿರಿದಾದ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಂಡುಬಂದಿತು. ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.