ADVERTISEMENT

ಹೊರಗಿರುವರಿಗೆ ತಾಯ್ನಿಡಿನ ಮಹತ್ವ ತಿಳಿದಿದೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 4:35 IST
Last Updated 1 ಡಿಸೆಂಬರ್ 2017, 4:35 IST

ಬನ್ನೂರು: ತಾಯಿಯಿಂದ ದೂರ ಇರುವ ಜನರಿಗೆ ತಾಯಿಯ ಮಹತ್ವ ತಿಳಿದಿರುವಂತೆ ತಾಯಿನಾಡಿನಿಂದ ದೂರ ಇರುವ ಜನರಿಗೂ ಅದರ ಮಹತ್ವ, ಪ್ರೀತಿ, ಅಭಿಮಾನ ತಿಳಿದಿರುತ್ತದೆ ಎಂದು ಜೆಡಿಎಸ್ ರಾಜ್ಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಹೊಸಕೇರಿಯಲ್ಲಿನ ಸ್ನೇಹ ಜೀವಿ ಕನ್ನಡ ಯುವಕರ ಬಳಗದ ವತಿಯಿಂದ ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಭಾಷೆ ಅನ್ಯರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಎಂದ ಅವರು, ನಮ್ಮ ದೇಶವನ್ನು ಬಹುವರ್ಷಗಳ ಕಾಲ ಆಳಿದ ಬ್ರಿಟೀಷರಿಗೆ ಸೆಡ್ಡುಹೊಡೆಯುವ ಸಲುವಾಗಿಯೇ ಕನ್ನಡಿಗರು ಕೋಟು, ಕನ್ನಡಕ, ಟೈ ಧರಿಸುತ್ತಿದ್ದರು ಎಂದು ಹೇಳಿದರು.

ADVERTISEMENT

ತಮ್ಮ ತಾಯಿ ನೆಲವನ್ನು, ಜನ್ಮಕೊಟ್ಟವರನ್ನು, ಮಾತೃಭಾಷೆಯನ್ನು ಹೆಚ್ಚಾಗಿ ಪ್ರೀತಿಸುವಂತೆ ಅವರು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆಡಿಎಸ್ ಮುಖಂಡ ಎಸ್. ಶಂಕರ್ ಹಾಗೂ ಜಫ್ರುಲ್ಲಾಖಾನ್‌ ಅವರನ್ನು ಸನ್ಮಾನಿಸಲಾಯಿತು.

ಮಾದೇಗೌಡ, ಇಮ್ರಾನ್, ವೈ.ಎಸ್. ರಾಮಸ್ವಾಮಿ, ಮಂಜುಳಾ ಶ್ರೀನಿವಾಸ್, ಜೆಡಿಎಸ್ ಮುಖಂಡ ಪೈರೋಜ್ ಖಾನ್, ಸತೀಶ್ ನಾಯ್ಕ, ಚಿಕ್ಕಯ್ಯ, ರಾಮಲಿಂಗೇಗೌಡ, ಕುಮಾರಸ್ವಾಮಿ, ಮಾದಯ್ಯ, ಮಹೇಶ್, ಸತೀಶ್, ಜೋಗಿ, ಶ್ರೀಧರ್, ಅನಿಲ್, ಶಿವಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.