ADVERTISEMENT

‘ಮಧುಮೇಹ ಮುಕ್ತ ಮೈಸೂರು’ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 6:57 IST
Last Updated 25 ಜೂನ್ 2016, 6:57 IST

ಮೈಸೂರು: ಕರ್ನಾಟಕ ರೈತರ ಮಾರುಕಟ್ಟೆ ವತಿಯಿಂದ ರಾಷ್ಟ್ರೀಯ ಮಧುಮೇಹ ದಿನಾ ಚರಣೆ ಪ್ರಯುಕ್ತ ‘ಮಧು ಮೇಹ ಮುಕ್ತ ಮೈಸೂರು– 2020’ ಕಾರ್ಯಕ್ರಮವನ್ನು ಜೂನ್ 26ರಿಂದ ಎರಡು ದಿನಗಳ ಕಾಲ ಇಲ್ಲಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಏರ್ಪಡಿಸಲಾಗಿದೆ.

ಮಾಜಿ ಸ್ಪೀಕರ್ ಕೃಷ್ಣ ಅವರು 26ರಂದು ಬೆಳಿಗ್ಗೆ 11ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿ ಸಲಿದ್ದು, ಮೇಯರ್ ಬಿ.ಎಲ್. ಭೈರಪ್ಪ, ಹೋಮಿಯೋಪತಿ ವೈದ್ಯ ಡಾ.ಖಾದರ್, ಮೈಸೂರು ವಿಶ್ವವಿದ್ಯಾನಿಲಯದ ಆಹಾರ ಮತ್ತು ಪೌಷ್ಟಿಕಾಂಶ ಇಲಾಖೆಯ ಮುಖ್ಯಾಧಿಕಾರಿ ಡಾ.ಅಸ್ನಾ ಉರುಜ್,

ಲೆಟ್ಸ್‌ ಡು ಇಟ್ ಸಂಸ್ಥೆಯ ಶಿವಶಂಕರ್, ಶ್ರೀಹರಿ ಡಯೋಗ್ನಸ್ಟಿಕ್‌ನ ಡಾ.ಲಕ್ಷ್ಮಿ ನಾರಾ ಯಣ ಅವರು ಅತಿಥಿ ಗಳಾಗಿ ಭಾಗವಹಿಸುವರು ಎಂದು ಸಂಸ್ಥೆ ಯ ಆನಂದ್ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಧ್ಯಾಹ್ನ 3 ಗಂಟೆಗೆ ಡಾ.ಖಾದರ್ ಅವರಿಂದ ‘ಆಹಾರ ಮತ್ತು ಆರೋಗ್ಯ’ ಕುರಿತು ಉಪನ್ಯಾಸ ಹಾಗೂ ಸಂಜೆ 6 ಗಂಟೆಗೆ ‘ಸಿರಿಧಾನ್ಯಗಳ ಅಡುಗೆ ಪ್ರದರ್ಶನ’ ಇರಲಿದೆ. ಜೂನ್ 27ರಂದು ಬೆಳಿಗ್ಗೆ 10.30ಕ್ಕೆ ‘ಸಿರಿಧಾನ್ಯಗಳು– ಒಣಬೇಸಾಯ, ಸಂಸ್ಕರಣೆ ಮತ್ತು ಮಾರಾಟ’ ಕುರಿತು ಚಾಮರಾಜನಗರ ಜಿಲ್ಲಾ ರೈತ ಸಂಘದ ಹೊನ್ನೂರು ಪ್ರಕಾಶ್, ಶ್ರೀರಂಗಪಟ್ಟಣದ ಮನೋಹರ್, ಅನಂತಪುರದ ದಿನೇಶ್ ಅವರು ಚರ್ಚೆ ನಡೆಸಲಿದ್ದಾರೆ.

ಮಧ್ಯಾಹ್ನ 3ಕ್ಕೆ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಡಾ.ವಸಂತ್‌ಕುಮಾರ್ ಅವರು ಆರೋಗ್ಯಕ್ಕೆ ಸಲಹೆಗಳನ್ನು ನೀಡಲಿದ್ದು, ಸಂಜೆ 6.30ಕ್ಕೆ ‘ಪರಿಸರ ಮತ್ತು ಆರೋಗ್ಯ’ ಕುರಿತು ಚರ್ಚೆ ನಡೆಯಲಿದೆ. ಚರ್ ಚೆಯಲ್ಲಿ ಪರಿಸರವಾದಿ ರಮೇಶ್‌ ಕಿಕ್ಕೇರಿ,

ಲೆಟ್ಸ್‌ ಡು ಇಟ್ ಸಂಸ್ಥೆಯ ಶಿವಶಂಕರ್ ಹಾಗೂ ಡಾ.ಖಾದರ್ ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು. ಸಂಘಟನೆಯ ಕೃಷ್ಣಕುಮಾರ್ ಹಾಗೂ  ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.