ADVERTISEMENT

32ನೇ ವಾರ್ಡಿಗೆ ಮತದಾನ ನಾಳೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 8:29 IST
Last Updated 1 ಜುಲೈ 2017, 8:29 IST

ಮೈಸೂರು: ಪಾಲಿಕೆಯ 32ನೇ ವಾರ್ಡ್‌ನ ಉಪಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಜುಲೈ 2ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ.ಪ್ರಕಾಶ್‌, ಜೆಡಿಎಸ್‌ ಅಭ್ಯರ್ಥಿ ಎಸ್‌ಬಿಎಂ ಮಂಜು, ಬಿಜೆಪಿ ಅಭ್ಯರ್ಥಿ ಕೆ.ಮಾದೇಶ್ ತಮ್ಮ ಅದೃಷ್ಟ ಪರೀಕ್ಷಿಸಲಿದ್ದು, ಎಲ್ಲರೂ ಮನೆ ಮನೆ ಪ್ರಚಾರದ ಮೊರೆ ಹೋಗಿದ್ದಾರೆ.

ಮತದಾನಕ್ಕಾಗಿ 12 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೂ ನಾಲ್ವರು ಸಿಬ್ಬಂದಿ ಇರಲಿದ್ದಾರೆ. ಮಹಾರಾಜ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಶನಿವಾರ ಬೆಳಿಗ್ಗೆ ಮಸ್ಟರಿಂಗ್ ಕಾರ್ಯ ನಡೆಯಲಿದೆ.

ಬೆಳಿಗ್ಗೆ 7 ಗಂಟೆಗೆ ಆರಂಭವಾಗುವ ಮತದಾನ ಸಂಜೆ 5 ಗಂಟೆಯವರೆಗೂ ಇರಲಿದೆ. ಮತದಾರರ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳು ಭಾವಚಿತ್ರ ಇರುವ ಗುರುತಿನ ಚೀಟಿಯೊಡನೆ ಮತದಾನ ಮಾಡಬಹುದು. ಎಲ್ಲ ಮತಗಟ್ಟೆಗಳಲ್ಲೂ ವಿದ್ಯುನ್ಮಾನ ಮತಯಂತ್ರಗಳ ಮೂಲಕವೇ ಮತದಾನ ನಡೆಯಲಿದೆ. ಎಡಗೈ ಕಿರುಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುತ್ತದೆ.

ADVERTISEMENT

ಮತಗಟ್ಟೆಯಲ್ಲಿ ಮೊಬೈಲ್, ಪೆನ್ನು, ಪೆನ್ಸಿಲ್, ಕಾಗದಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಜುಲೈ 5ರಂದು ಸಂಸ್ಕೃತ ಪಾಠಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಮದ್ಯ ಮಾರಾಟ ನಿಷೇಧ: ಜುಲೈ 1ರ ಬೆಳಿಗ್ಗೆ 7 ಗಂಟೆಯಿಂದ ಜುಲೈ 2ರ ಮಧ್ಯರಾತ್ರಿವರೆಗೆ ಮತ್ತು ಮತ ಎಣಿಕೆಯ ದಿನವಾದ ಜುಲೈ 5ರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಅಂಕಿ ಅಂಶ
10,201 ಒಟ್ಟು ಮತದಾರರ ಸಂಖ್ಯೆ

5,048 ಮಹಿಳಾ ಮತದಾರರ ಸಂಖ್ಯೆ

5,053 ಪುರುಷ ಮತದಾರರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.