ADVERTISEMENT

ಆರ್‌ಟಿಪಿಎಸ್‌ 2ನೇ ಘಟಕ ಆಧುನೀಕರಣಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 7:15 IST
Last Updated 11 ಸೆಪ್ಟೆಂಬರ್ 2017, 7:15 IST

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ (ಆರ್‌ಟಿಪಿಎಸ್‌) ಹಳೆಯ ವಿದ್ಯುತ್ ಘಟಕಗಳನ್ನು ಆಧುನೀಕರಣ ಕಾಮಗಾರಿ ಕೈಗೊತ್ತಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. 1986ರಲ್ಲಿ ಟಾಟಾ ಕಂಪನಿ , ಬಿಹೆಚ್‌ಇಎಲ್ ಕಂಪನಿಗಳ ಸಹಯೋಗದಲ್ಲಿ 403 ಕೋಟಿ ವೆಚ್ಚದಲ್ಲಿ 210 ಮೆಗಾವಾಟ್ ಸಾಮರ್ಥ್ಯದ 1 ಮತ್ತು 2ನೇ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಟರ್ಬನ್, ಬಾಯ್ಲರ್ ಅಂತಹ ದೊಡ್ಡ ದೊಡ್ಡ ಸಾಮಾಗ್ರಿಗಳನ್ನು ಬದಲಾಯಿಸಿ ನೂತನ ಸಾಮಾಗ್ರಿಗಳನ್ನು ಅಳವಡಿಸಲು ಆರ್‌ಟಿಪಿಎಸ್ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಎರಡು ಘಟಕಗಳ ಉತ್ಪಾದನೆಗೆ ಕೊರತೆ ಇಲ್ಲ. ಆದರೆ, ದಶಕಗಳ ಕಾಲದ ಈ ವಿದ್ಯುತ್ ಘಟಕಗಳಿಗೆ ಅಳವಡಿಸಲಾದ ಸಾಮಾಗ್ರಿಗಳು ಬದಲಾಯಿಸಿಲ್ಲ. ಕೆಲ ಕಡೆ ಕಬ್ಬಿಣದ ಸಾಮಾಗ್ರಿಗಳು ತುಕ್ಕು ಹಿಡಿದಿವೆ. ಹೀಗಾಗಿ ಇವತ್ತೋ ಅಥವಾ ನಾಳೆಯೋ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತವಾಗಿ ಅಧಿಕಾರಿಗಳು ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚನೆ ನೀಡಿದ್ದಾರೆ.

ಈಗಾಗಲೇ ಒಂದನೇ ಘಟಕದಲ್ಲಿ ನೂತನ ಸಾಮಾಗ್ರಿಗಳನ್ನು ಅಳವಡಿಸಲಾಗಿದೆ. ಸೆ.10ರಿಂದ 210 ಮೆಗಾವಾಟ್ ಸಾಮರ್ಥ್ಯದ ಎರಡನೇ ಘಟಕದ ಬಾಯ್ಲರ್, ಟರ್ಬನ್, ಐಎನ್‌ಸಿಗಳಲ್ಲಿ ಅಳವಡಿಕೆ ಮಾಡಿದ ಹಳೆ ಸಾಮಾಗ್ರಿಗಳನ್ನು ತೆಗೆದು ಹೊಸ ಸಾಮಾಗ್ರಿಗಳನ್ನು ಅಳವಡಿಕೆಗೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಆರ್‌ಟಿಪಿಎಸ್‌ ಚಾಲನೆ ಮತ್ತು ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್ ಜಿ.ಹನುಮಂತಪ್ಪ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.